ಕಡಂಗ, ಸೆ. ೩೦: ಸುನ್ನಿ ಯುವಜನ ಸಂಘ ಕಡಂಗ ಬ್ರಾಂಚ್ ಇದರ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಸುನ್ನೀ ಮದರಸ ಹಾಲ್‌ನಲ್ಲಿ ಅಧ್ಯಕ್ಷರಾದ ಸುಲೈಮಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎಸ್‌ವೈಎಸ್ ವೀರಾಜಪೇಟೆ ಸೆಂಟರ್ ಕಾರ್ಯದರ್ಶಿ ಅಹ್ಮದ್ ಮದನಿ ಉದ್ಘಾಟಿಸಿ ಸಂಘಟನೆಯ ಮಹತ್ವ ವನ್ನು ವಿವರಿಸಿದರು. ಎಸ್‌ವೈಎಸ್ ರಾಜ್ಯ ಇಸಾಬಾ ಕ್ಯಾಪ್ಟನ್ ಉಮ್ಮರ್ ಸಖಾಫಿ ಎಡಪಾಲ ಕಾರ್ಯಕ್ರಮದಲ್ಲಿ ಎಸ್‌ವೈ ಎಸ್ ಇದರ ತರಗತಿ ನಡೆಸಿಕೊಟ್ಟರು. ನೂತನ ಆಡಳಿತ ಮಂಡಳಿಯಾ ಅಧ್ಯಕ್ಷರಾಗಿ ಸುಲೈಮಾನ್ ಸಿ.ಎಂ. ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಸಿ.ಎ. ಕೋಶಾ ಧಿಕಾರಿಯಾಗಿ ರಜಾಕ್ ಸಿ.ಎ. ಉಪಾಧ್ಯಕ್ಷರಾಗಿ ಸಲಾಂ ಪಿ ಎ, ಹಾಗೂ ಸಿ.ಪಿ. ಹಸೈನಾರ್, ದಹವಾ ಅಧ್ಯಕ್ಷರಾಗಿ ಅಬ್ದುಲ್ ರಹ್ಮನ್ ಸಅದಿ, ಇಸಾಬಾ ಕಾರ್ಯ ದರ್ಶಿಯಾಗಿ ಅಬ್ದುಲ್ ಸಲಾಂ ಪಿ.ಎ, ಸಹ ಕಾರ್ಯದರ್ಶಿ ರಶೀದ್ ಐಬಿಎಂ, ಷಂಶುದ್ದಿನ್ ಪಿ.ಎ, ಉಸ್ಮಾನ್ ಸಿ.ಇ, ಸದಸ್ಯರಾಗಿ ಫಿರೋಜ್, ಅಶ್ರಫ್ ಪಿ.ಎಂ., ರಂಶೀದ್, ರಝಿಕ್ ಪಿ.ಎ., ಸಿರಾಜ್ ಕೆ.ಎಂ., ಹಸೈನಾರ್ ಕೆ.ಜಿ., ಸಿದ್ದೀಕ್ ಬೇತ್ರಿ ಆಯ್ಕೆಯಾಗಿದ್ದಾರೆ. ಬದ್ರಿಯಾ ಮಸೀದಿ ಖತೀಬ್ ರಿಯಾಜ್ ಪಾಳಿಲಿ, ಇಸ್ಮಾಯಿಲ್ ಹಾಜಿ ಗುಂಡಿಗೆರೆ, ಅಬ್ದುಲ್ ರಹ್ಮನ್ ಸಅದಿ ಉಪಸ್ಥಿತರಿದ್ದರು.