ಕುಶಾಲನಗರ, ಸೆ. ೨೯: ಕೊಡಗು ಎಜುಕೇಷನ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಭಾರತೀಯ ಸೇನೆಗೆ ಸೇರಬಯಸುವ ಹಾಗೂ ಕ್ರೀಡಾ ಪ್ರತಿಭೆಗಳನ್ನು ಹೊರತೆಗೆಯುವ ಉದ್ದೇಶದಿಂದ ೧೫ ರಿಂದ ೨೩ ರ ವಯೋಮಿತಿಯ ಆಸಕ್ತ ಯುವಕ - ಯುವತಿಯರಿಗೆ ಅ. ೧೦ ರಂದು ರಾಜ್ಯಮಟ್ಟದ ಮುಕ್ತ ರಸ್ತೆ ಓಟದ (ಕ್ರಾಸ್ ಕಂಟ್ರಿ) ಸ್ಪರ್ಧೆಯನ್ನು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಯುವಕರಿಗೆ ೮ ಕಿ.ಮೀ. ಹಾಗೂ ಯುವತಿಯರಿಗೆ ೫ ಕಿ.ಮೀ. ಓಟದ ಸ್ಪರ್ಧೆ ಇದಾಗಿದೆ. ಆಸಕ್ತರು ಹತ್ತನೇ ತರಗತಿ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸ್ಪರ್ಧೆಯ ಸಂಚಾಲಕ ಅಮೆ ಜನಾರ್ಧನ್ (ಹವಾಲ್ದಾರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ರೂ. ೫ ಸಾವಿರ, ಎರಡನೇ ಬಹುಮಾನ ರೂ. ೪ ಸಾವಿರ, ಮೂರನೇ ಬಹುಮಾನ ರೂ. ೩ ಸಾವಿರ, ನಾಲ್ಕನೇ ಬಹುಮಾನ ರೂ. ೨ ಸಾವಿರ, ಐದನೇ ಬಹುಮಾನ ರೂ. ೧ ಸಾವಿರ, ಆರನೇ ಬಹುಮಾನವಾಗಿ ೫೦೦ ರೂ.ಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯ ಆಸಕ್ತ ಯುವಕರು ೯೪೪೯೪ ೭೫೫೦೨, ೯೧೪೮೫ ೧೬೫೬೨. ಯುವತಿಯರು ೯೪೮೧೪ ೮೮೭೧೪ ಇಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.