*ವೀರಾಜಪೇಟೆ, ಸೆ. ೨೯: ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಇದರಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಹಾಗೂ ವಂಚನೆಯನ್ನು ಖಂಡಿಸಿ *ವೀರಾಜಪೇಟೆ, ಸೆ. ೨೯: ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಇದರಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಹಾಗೂ ವಂಚನೆಯನ್ನು ಖಂಡಿಸಿ *ವೀರಾಜಪೇಟೆ, ಸೆ. ೨೯: ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಇದರಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಹಾಗೂ ವಂಚನೆಯನ್ನು ಖಂಡಿಸಿ ವಿರೋಧ ಕಾನೂನು ಕ್ರಮಕೈಗೊಂಡು ಆಸ್ತಿಯನ್ನು ಮುಟ್ಟುಗೋಲು ಹಾಕಿ ಕೊಳ್ಳಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್‌ನಲ್ಲಿ ಠೇವಣಿದಾರ ಮುಕ್ತಬಾಯಿ ಮಾತನಾಡಿ ಬ್ಯಾಂಕಿನ ವ್ಯವಸ್ಥಾಪಕರು
(ಮೊದಲ ಪುಟದಿಂದ) ಸಹಕರಿಸದಿದ್ದರೆ ಅಧ್ಯಕ್ಷರು ಪೋಲಿಸ್ ಠಾಣೆಯಲ್ಲಿ ದೂರು ನೀಡಬೇಕು ಮತ್ತು ಕೆಲಸದಿಂದ ವಜಾ ಮಾಡಬೇಕು ಮೇಲಧಿಕಾರಿಗಳಿಗೆ ದೂರು ನೀಡಿದಲ್ಲಿ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಈಗಿನ ತಂತ್ರಜ್ಞಾನ ಕಾಲದಲ್ಲಿ ಬಹಳಷ್ಟು ಬೇಗನೆ ದಾಖಲೆಗಳನ್ನು ಪಡೆಯಬಹುದು ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿರುವದರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು.
ಅರಪಟ್ಟು ಗ್ರಾಮದ ನಿವಾಸಿ ಪಿ .ಡಿ ಮೊಣ್ಣಪ್ಪ ಮಾತನಾಡಿ ವ್ಯವಸ್ಥಾಪಕರು ನಮ್ಮ ಜೊತೆ ತುಂಬಾ ಆತ್ಮೀಯರಂತೆ ನಟಿಸಿ ಸುಮಾರು ೧೬ ಲಕ್ಷ ಹಣವನ್ನು ಠೇವಣಿ ಮಾಡಿಸಿದರು ಈಗಾ ನೋಡಿದಾಗ ಹಣವು ಇಲ್ಲ, ಬ್ಯಾಂಕ್ ಸಹ ಇಲ್ಲ ಸಂಘದ ಅಧ್ಯಕ್ಷರು, ನಿರ್ದೇಶಕ ರು ಸಹ ಉತ್ತರ ನೀಡುತ್ತಿಲ್ಲ ಎಂದು ದೂರಿದರು.
ಠೇವಣಿದಾರರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಒಂದು ಬೃಹತ್ ಸಂಸ್ಥೆಗೆ ಕಳಂಕವನ್ನು ತಂದಿಟ್ಟ ಮೋಯಿನುದ್ದೀನ್ ಎನ್ನುವ ವ್ಯಕ್ತಿ ಜನಸೇವಕ ಎನ್ನುವ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದಾನೆ. ಡಿವೈಎಸ್‌ಪಿಗೆ ದೂರು ನೀಡಿದರೆ ನಮ್ಮ ಪರಿಧಿಗೆ ಬರೋದಿಲ್ಲ ಅಂತಾರೆ. ಸಾವಿರಾರು ಜನರು ನೊಂದಿದ್ದಾರೆ. ಸರ್ಕಾರ ಈ ಅವ್ಯವಹಾರ ಮನಗಂಡು ತಪ್ಪಿತಸ್ಥರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಎಜಾಜ್ ಅಹಮ್ಮದ್, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಕೆ.ಟಿ ಬಶೀರ್, ಮಾತನಾಡಿದರು. ಬಳಿಕ ಮುಸ್ಲಿಂ ಬ್ಯಾಂಕ್‌ನ ನಿರ್ದೇಶಕರಾದ ಎಜಾಜ್ ಅಹಮ್ಮದ್ ಮನವಿಯನ್ನು ಓದಿ, ವೀರಾಜಪೇಟೆ ಪ್ರಬಾರ ತಹಶೀಲ್ದಾರ್ ಟಿ.ಎಂ. ಪ್ರಕಾಶಗೆ ಮನವಿಯನ್ನು ಸಲ್ಲಿಸಿದರು.