ಮಡಿಕೇರಿ, ಸೆ. ೨೯: ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ತಿಳಿಯದ, ವ್ಯವಸ್ಥೆ ಬಗ್ಗೆ ಅರಿವಿಲ್ಲದವರಿಗೆ ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಎಟಿಎಂ ಪಿನ್ ನಂಬರ್ ಪಡೆದು, ನಂತರ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ ಪ್ರಕರಣ ಸಂಬAಧ ಸೈಬರ್ ಕ್ರೆöÊಂ ಪೊಲೀಸರು ಆರೋಪಿ ಯೋರ್ವನನ್ನು ಬಂಧಿಸಿದ್ದು, ಆತನಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬೆಲಸಿಂದ ಗ್ರಾಮ ನಿವಾಸಿ, ಕಿರಣ್‌ಕುಮಾರ್ (೩೦) ಬಂಧಿತ ಆರೋಪಿ. ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಹಣ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಕಿರಣ್‌ಕುಮಾರ್‌ನನ್ನು ಬಂಧಿಸಲಾಗಿದೆ.

ಎಟಿಎA ಕೇಂದ್ರಗಳಿಗೆ ಬರುತ್ತಿದ್ದ, ಕಾರ್ಡ್ ಬಳಸಿ ಹಣ ಪಡೆಯಲು ತಿಳಿಯದವರಿಗೆ ಸಹಾಯ ಮಾಡುವ ನೆಪದಲ್ಲಿ ಅವರುಗಳ ಕಾರ್ಡ್ ಪಡೆದು ಪಿನ್ ನಂಬರ್ ತಿಳಿದುಕೊಂಡ ಬಳಿಕ ಅದನ್ನು ನೆನಪಿನಲ್ಲಿಟ್ಟುಕೊಂಡು ಗ್ರಾಹಕರಿಗೆ ಬೇರೆ ಕಾರ್ಡ್ ನೀಡಿ ನಂತರ ಅವರ ಕಾರ್ಡ್ಗಳನ್ನು ಬಳಸಿ ಹಣ ಲಪಟಾಯಿಸುತ್ತಿದ್ದ. ಹೀಗೆ ಸೋಮವಾರಪೇಟೆಯಲ್ಲಿ ರೂ. ೧.೯೫ ಲಕ್ಷ ಹಾಗೂ ಕುಶಾಲನಗರದಲ್ಲಿ ರೂ. ೧.೧೫ ಲಕ್ಷದಷ್ಟು ಹಣ ಲಪಟಾಯಿಸಿದ್ದ. ಈ ಬಗ್ಗೆ ಜಿಲ್ಲಾ ಸೈಬರ್ ಕ್ರೆöÊಂಗೆ ದೊರೆತ ದೂರಿನನ್ವಯ ಪೊಲೀಸರು ತಂಡ ರಚನೆ ಮಾಡಿ ವಂಚಕನ ಬಂಧನಕ್ಕೆ ಬಲೆ ಬೀಸಿದ್ದರು.

ಕುಮಟಾದಲ್ಲಿ ಸೆರೆ

ಮೂಲತಃ ಹಾಸನ ಜಿಲ್ಲೆಯವನಾದರೂ ಕೊಡಗು ಜಿಲ್ಲೆಯಲ್ಲಿ ತನ್ನ ಕೈಚಳಕ ತೋರಿದ ನಯವಂಚಕ ಕಿರಣ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನೆಲೆಸಿರುವದು ಪೊಲೀಸರ ತಂಡಕ್ಕೆ ಮಾಹಿತಿ ಲಭಿಸಿದೆ. ಈ ಮಾಹಿತಿ ಆಧಾರದಲ್ಲಿ ಕುಮಟಾಗೆ ತೆರಳಿದ ಪೊಲೀಸರ ತಂಡ ಕಿರಣ್‌ನನ್ನು ಸೆರಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

(ಮೊದಲ ಪುಟದಿಂದ)

ಚಿನ್ನ - ಬೆಳ್ಳಿ ಖರೀದಿ

ಗ್ರಾಹಕರಿಗೆ ವಂಚನೆ ಮಾಡಿ ಎಟಿಎಂನಿAದ ಹಣ ಲಪಟಾಯಿಸಿದ್ದ ಕಿರಣ್ ತನ್ನ ಐಷಾರಾಮಿ ಜೀವನಕ್ಕೆ ಈ ಕೃತ್ಯಕ್ಕೆ ಇಳಿದಿರುವದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಲಪಟಾಯಿಸಿದ ಹಣದಲ್ಲಿ ಆರೋಪಿ ಚಿನ್ನ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ಖರೀದಿಸಿದ್ದು, ಇದೀಗ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಳಿಯಿದ್ದ ೫೮ ಗ್ರಾಂ ಚಿನ್ನ, ೨೯೪ ಗ್ರಾಂ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವAಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಮೊ.ಸಂ. ೧೯/೨೦೨೧ ಕಲಂ ೬೬(ಸಿ) ಮತ್ತು (ಡಿ) ಐಟಿ ಕಾಯ್ದೆ ಮತ್ತು ೪೧೯, ೪೨೦ ಐಪಿಸಿ ಮತ್ತು ಮೊ.ಸಂ. ೨೦/೨೦೨೧ ಕಲಂ ೬೬(ಸಿ) ಮತ್ತು (ಡಿ) ಐಟಿ ಕಾಯ್ದೆ ಮತ್ತು ೪೧೯, ೪೨೦ ಐಪಿಸಿ ಸೆಕ್ಷನ್‌ದಡಿ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೆöÊಂ ಪೊಲೀಸ್ ಠಾಣೆಯ ಪ್ರಬಾರ ಪೊಲೀಸ್ ನಿರೀಕ್ಷಕ ಎಸ್.ಎಸ್. ರವಿಕಿರಣ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಂ.ಪಿ. ಕಾರ್ಯಪ್ಪ, ಎಸ್.ಸಿ. ಪ್ರಕಾಶ್, ಬಿ.ಕೆ. ದೀಪಕ್, ಟಿ.ಎಸ್. ಮಂಜುನಾಥ್, ಕೆ.ಬಿ. ದೇವಿಪ್ರಸಾದಿನಿ, ಕೆ.ಬಿ. ಮಂಜುನಾಥ ಚವಡಿ, ವಿ. ರಾಜೇಶ್, ಸಿ.ಡಿ.ಆರ್. ವಿಭಾಗದ ರಾಜೇಶ್ ಹಾಗೂ ಗಿರೀಶ್ ಪಾಲ್ಗೊಂಡಿದ್ದರು. ಎಟಿಎಂ ಕೇಂದ್ರಕ್ಕೆ ಹೋಗುವ ಸಂದರ್ಭ ಸಹಾಯಕ ಬರುವ ಅಪರಿಚಿತರ ಬಗ್ಗೆ ಎಚ್ಚರ ವಹಿಸುವಂತೆ ಇನ್ಸ್ಪೆಕ್ಟರ್ ರವಿಕಿರಣ್ ತಿಳಿಸಿದ್ದಾರೆ.

? ಸಂತೋಷ್