ಗೋಣಿಕೊಪ್ಪಲು, ಸೆ. ೨೯: ನ್ಯಾಷನಲ್ ಕರಷ್ಷನ್ ಕಂಟ್ರೋಲ್ ಅಂಡ್ ಹ್ಯೂಮನ್ ವೆಲ್‌ಫೇರ್ ಆರ್ಗ ನೈಸೇಷನ್‌ನ ಸಂಸ್ಥೆಯ ಪೊನ್ನಂಪೇಟೆ ತಾಲೂಕು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಂಸ್ಥೆಯ ಕರ್ನಾಟಕ ರಾಜ್ಯಾಧ್ಯಕ್ಷ ಕುಪ್ಪಣಮಾಡ ವಸಂತ್ ಪೂವಯ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಅರುವತೋಕ್ಲು ಕಾಡ್ಲಯ್ಯಪ್ಪ ಅಸೋಸಿಯೇಷನ್ ಕಚೇರಿಯ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಚಾಲನೆ ನೀಡಿದ ವಸಂತ್ ಪೂವಯ್ಯ, ಕಾರ್ಯಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದರು. ಈಗಾಗಲೇ ರಾಷ್ಟಾçದ್ಯಂತ ಸಂಸ್ಥೆ ಅಸ್ತಿತ್ವದಲ್ಲಿದ್ದು ಕ್ರೀಯಾಶೀಲತೆಯಿಂದ ಮುನ್ನಡೆಯುತ್ತಿದೆ. ಪೊನ್ನಂಪೇಟೆ ತಾಲೂಕು ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಜಿಲ್ಲೆಯ ಐದು ತಾಲೂಕುಗಳಲ್ಲಿ ಸಂಘಟನೆಯ ಸಮಿತಿ ರಚನೆಯ ನಂತರ ಕೊಡಗು ಜಿಲ್ಲಾ ಸಂಘಟನಾ ಸಮಿತಿಯನ್ನು ರಚಿಸಲಾಗುವುದು ಎಂದರು.

ಕಾರ್ಯಕ್ರಮದ ನಂತರ ಕೊರೊನಾ ವಾರಿರ‍್ಸ್ ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಯಂ ಸೇವಕರು, ಕುಟ್ಟ ಪೊಲೀಸ್ ಇಲಾಖೆ ಕುಟ್ಟ ಕರ್ನಾಟಕ ಕೇರಳ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಶ್ರೀಮಂಗಲ ಪೊಲೀಸ್ ಇಲಾಖೆ, ಬಿರುನಾಣಿ, ಹುದಿಕೇರಿ, ಪೊನ್ನಂಪೇಟೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ನಿಯಂತ್ರಣ ಮಾಡಲು ವಹಿಸಿರುವ ಕ್ರಮವನ್ನು ಶ್ಲಾಘಿಸ ಲಾಯಿತು. ಪ್ರಶಂಸಾ ಪತ್ರಗಳನ್ನು ನೀಡಿ ಅವರನ್ನು ಗೌರವಿಸಲಾಯಿತು.

ನೂತನ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ಕಳ್ಳೆಂಗಡ ಸಂಜು ಅಯ್ಯಪ್ಪ ಪ್ರಧಾನ ಕಾರ್ಯದರ್ಶಿಯಾಗಿ ನಾಯಮಾಡ ಕಂದಾ ದೇವಯ್ಯ, ಜಂಟಿ ಕಾರ್ಯದರ್ಶಿಯಾಗಿ ಡಿ.ಎಸ್. ಕುಮಾರ್, ಉಪಾಧ್ಯಕ್ಷರಾಗಿ ಪ್ರವೀಣ್ ಪೂಜಾರಿ, ಮಹಿಳಾ ಉಪಾಧ್ಯಕ್ಷರಾಗಿ ಮನೆಯಪಂಡ ಶೀಲಾ ಬೋಪಣ್ಣ ಸೇರಿದಂತೆ ಇನ್ನಿತರ ಪದಾಧಿಕಾರಿ ಗಳನ್ನು ನೇಮಕಗೊಳಿಸಲಾಯಿತು.