ಮಡಿಕೇರಿ, ಸೆ. ೨೯: ಕೊಡಗಿನ ಬ್ರಾಹ್ಮಣ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಸ್ಥಾಪನೆಗೊಂಡು ಬಳಿಕ ಕಟ್ಟಡಗಳ ನಿರ್ಮಾಣದೊಂದಿಗೆ ಬ್ರಾಹ್ಮಣ ಸಮಾಜದ ಸದಸ್ಯರ ಶುಭ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಿದ್ದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಗೆ ಇದೀಗ ಶತಮಾನ ಸಂಭ್ರಮದ ಛಾಪು ಮೂಡಿದೆ. ಈ ಕುರಿತಾಗಿ ಸಮಾಜದ ನೂತನ ಕಟ್ಟಡಗಳನ್ನು ನಿರ್ಮಿಸಲು ಉಸ್ತುವಾರಿ ಹೊತ್ತ ಶತಮಾನೋತ್ಸವ ಭವನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಡಿಸೆಂಬರ್‌ನಲ್ಲಿ ಶತಮಾನೋತ್ಸವ ಆಚರಣೆಯ ಜವಾಬ್ದಾರಿಕೆ ಹೊತ್ತ ಡಾ. ರಾಜಾರಾಮ್ ಹಾಗೂ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿಯ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ ಇವರುಗಳನ್ನು ‘ಶಕ್ತಿ’ ಸಂದರ್ಶಿಸಿತು. ಈ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

ಸAಕಷ್ಟಗಳ ನಡುವೆ ಭವನ ನಿರ್ಮಾಣ

ಭವನ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರ ಅಭಿಪ್ರಾಯದ ಸಾರಾಂಶ ಹೀಗಿದೆ:- ೨೦೧೧ ರಲ್ಲಿ ಬ್ರಾಹ್ಮಣ ತ್ರಿಮತಸ್ಥರೆಲ್ಲ ಒಂದಾಗಿ ವಿದ್ಯಾಭಿವೃದ್ಧಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಗೊಳಿಸಲು ಚರ್ಚೆ ನಡೆಯಿತು. ಬಳಿಕ ೨೦೧೪ರಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಕುರಿತು ವಿಶೇಷ ಸಭೆ ನಡೆಸಲಾಯಿತು. ೨೦೧೫ರಲ್ಲಿ ಈ ಬಗ್ಗೆ ನಿಧಿಯ

ಅಧ್ಯಕ್ಷ ಗೋಪಾಲಕೃಷ್ಣ ಅವರು ಅಧ್ಯಕ್ಷರಾದ ಬಳಿಕ ಭವನ

ನಿರ್ಮಾಣ ಸಮಿತಿಯೂ

ಜೊತೆಗೂಡಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು.

ಆದರೆ, ಭವನ ನಿರ್ಮಾಣಕ್ಕೆ ಅನುಮತಿಗಾಗಿ ಒಂದೂವರೆ ವರ್ಷಗಳ ಕಾಲ ವಿಳಂಬವಾಗಿ ಹಳೆಯ ಸಮಿತಿ ಬದಲಾವಣೆಗೊಂಡು ಹೊಸ ಸಮಿತಿ ರಚನೆ ಮೂಲಕ ೨೦೧೭ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭ ಗೊಂಡಿತು. ಪ್ರಥಮ ಮಹಡಿ

(ಮೊದಲ ಪುಟದಿಂದ) ಕಟ್ಟಡ ಪೂರ್ಣಗೊಂಡಿದೆ. ಹಳೆಯ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಈ ಕೆಲಸಕ್ಕೆ ೨೦೧೮ರಲ್ಲಿ ಅತಿವೃಷ್ಟಿ ೨೦೧೯ರಲ್ಲಿಯೂ ಪ್ರವಾಹ, ೨೦೨೦ರಲ್ಲಿ ಕೋವಿಡ್ ಸಂಕಷ್ಟಗಳಿAದಾಗಿ ವಿಳಂಬಗೊAಡರೂ ಇದೀಗ ಪ್ರಮುಖ ಹಂತದ ಕೆಲಸ ಮುಕ್ತಾಯಗೊಂಡಿದೆ.

ದ್ವಿತೀಯ ಹಂತದಲ್ಲಿ ಮೇಲ್ಭಾಗ ದಲ್ಲಿ ಊಟದ ಕೋಣೆಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ರೂ. ೩೫ ಲಕ್ಷ ವೆಚ್ಚದ ಅಂದಾಜು ಮಾಡಲಾಗಿದೆ. ಒಟ್ಟು ರೂ. ೧ ಕೋಟಿ ವೆಚ್ಚದಲ್ಲಿ ಈಗಾಗಲೇ ಸುಮಾರು ೪೦೦-೫೦೦ರವರೆಗೆ ಆಸನ ವ್ಯವಸ್ಥೆಯ ಸಭಾ - ಕಾರ್ಯಕ್ರಮಗಳ ಭವನ ನಿರ್ಮಿಸಲಾಗಿದೆ. ಇದನ್ನು ಹಾಲೋ ಬ್ಲಾಕ್ ಮೊದಲಾದ ಸಾಮಗ್ರಿ ಗಳೊಂದಿಗೆ ಪರಂಪರಾಗತ ಮಾದರಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಈಗಾಗಲೇ ಹಳೆಯ ಅಡುಗೆ ಕೋಣೆಯನ್ನು ನವೀಕರಣಗೊಳಿಸಲಾಗಿದೆ. ವಧೂ-ವರರ ಕೊಠಡಿಯನ್ನು ಕೂಡ ಕಲ್ಪಿಸಲಾಗಿದೆ.

ಮುಖ್ಯವಾಗಿ ಬ್ರಾಹ್ಮಣ ಸಮುದಾಯದಿಂದ ಮಾತ್ರ ಉದಾರ ಧನ ಸಂಗ್ರಹಿಸಲಾಗಿದೆ. ಕೊಡಗು ಜಿಲ್ಲೆಯಲ್ಲದೆ ವಿದೇಶದಲ್ಲಿರುವ ರಾಜಾಭಟ್, ಮುಂಬೈಯ ಎಂ.ಕೆ. ಜನಾರ್ಧನ್, ಬೆಂಗಳೂರಿನ ದಿನಮಣಿ ಭಟ್ ಇವರುಗಳು ಆರ್ಥಿಕ ನೆರವು ಕಲ್ಪಿಸಿದ್ದಾರೆ. ಮುಂದಿನ ಕಟ್ಟಡ ವಿಸ್ತರಣಾ ಯೋಜನೆಗೆ ಇನ್ನೂ ರೂ. ೫೫ ಲಕ್ಷ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ೫೦ ಸಾವಿರಕ್ಕಿಂತ ಮೇಲ್ಪಟ್ಟು ಉದಾರ ಧನ ಸಹಾಯಧನ ಮಾಡಿದವರÀ ಕುಟುಂಬದವರಿಗೆ ಒಂದು ದಿನದ ಯಾವುದೇ ಕಾರ್ಯಕ್ರಮವನ್ನು ನಡೆಸಲು ಉಚಿತವಾಗಿ ನೀಡಲಾಗುತ್ತದೆ. ರೂ. ೭೫ ಸಾವಿರ ನೀಡಿದವರಿಗೆ ಎರಡು ದಿನ, ೧ ಲಕ್ಷ ನೀಡಿದವರಿಗೆ ಮೂರು ದಿನ ಹಾಗೂ ೧.೫೦ ಲಕ್ಷ ನೀಡಿದವರಿಗೆ ೪ ದಿನಗಳ ಅವಕಾಶ ಕಲ್ಪಿಸಲಾಗುತ್ತದೆ. ಈ ಭವನವನ್ನು ಬ್ರಾಹ್ಮಣ ಸಮುದಾಯ ಮಾತ್ರವಲ್ಲದೆ, ಎಲ್ಲಾ ಸಮುದಾಯದವರಿಗೂ ಶುಭವಿವಾಹ ಹಾಗೂ ಇತರ ಯಾವುದೇ ಕಾರ್ಯಕ್ರಮಗಳಿಗೆ ನೀಡಲಾಗುತ್ತದೆ. ಆದರೆ, ಸಸ್ಯಾಹಾರ ಮಾತ್ರ ಕಡ್ಡಾಯ.

ಲೋಕ ಕಲ್ಯಾಣಕ್ಕಾಗಿ ಧನ್ವಂತರಿ ಹೋಮ

ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಡಾ. ರಾಜಾರಾಮ್ ಅವರು ನೀಡಿದ ಮಾಹಿತಿ ಹೀಗಿದೆ:- ಶತಮಾನೋತ್ಸವ ಆಚರಣೆಯೂ ಮುಖ್ಯವಾಗಿ ಡಿಸೆಂಬರ್ ೧೯ ರಂದು ನಡೆಯುತ್ತದೆ. ಅದಕ್ಕೂ ಮುನ್ನ ಡಿಸೆಂಬರ್ ೧೮ ರಂದು ವೈದಿಕ ಸಂಭ್ರಮಾಚಾರಣೆ ನಡೆಸಲಾಗುತ್ತದೆ. ಡಿ. ೧೯ ರಂದು ಮುಖ್ಯವಾಗಿ ಲೋಕಕಲ್ಯಾಣಾರ್ಥ ಧನ್ವಂತರಿ ಹೋಮವನ್ನು ನಡೆಸಲಾಗುತ್ತದೆ. ಈ ಧನ್ವಂತರಿ ಹೋಮದಲ್ಲಿ ಯಾವುದೇ ಸಮುದಾಯ ಮಂದಿ ಕೂಡ ಮುಕ್ತವಾಗಿ ಭಾಗವಹಿಸಬಹುದು. ಹೋಮಕ್ಕೆ ತಮ್ಮ ಕಾಣಿಕೆಗಳನ್ನು ನೀಡಿ ಪ್ರಸಾದವನ್ನು ಕೂಡ ಪಡೆಯಬಹುದಾಗಿದೆ. ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾದಂತಹ ರೋಗ ಬಾಧೆ ನಿವಾರಣಾರ್ಥ ಮತ್ತು ಲೋಕಕಲ್ಯಾಣಾರ್ಥ ಈ ಹೋಮವನ್ನು ಹಮ್ಮಿಕೊಳ್ಳಲಾಗಿದೆ.

ಮಿತ್ತೂರು ಸಂಪ್ರತಿಷ್ಠಾನ ವೈದಿಕರು ಮತ್ತು ಋತ್ವಿಜರಿಂದ ಈ ಧನ್ವಂತರಿ ಹೋಮ ನಡೆಯಲಿದೆ. ಆ ದಿನ ಗಣಪತಿ ಹೋಮ, ರುದ್ರಾಭಿಷೇಕ, ಮುಕ್ತವಾಗಿ ಪರಸ್ಪರ ಸ್ನೇಹ ಬಾಂಧವ್ಯವನ್ನು ನಿರ್ಮಾಣ ಮಾಡುವ ಐಕಮತ್ಯ ಹೋಮಗಳನ್ನು ನಡೆಸಲಾಗುತ್ತದೆ. ಅಲ್ಲದೇ, ಹಿರಿಯ ನಾಗರಿಕರಿಗೆ ಸನ್ಮಾನ, ಸಾಕ್ಷö್ಯ ಚಿತ್ರ ಪ್ರದರ್ಶನ, ಸಂಜೆ ಸಾರ್ವಜನಿಕ ಸಾಂಸ್ಕೃತಿಕ ಸಂಭ್ರಮಾಚರಣೆ ಜಿಲ್ಲೆಯ ವಿವಿಧ ಸಾಂಸ್ಕೃತಿಕ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹೋಮ - ಹವನ, ಬಳಿಕ ಸಾರ್ವಜನಿಕರಿಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ ೩.೩೦ ರ ಬಳಿಕ ಬ್ರಾಹ್ಮಣ ಸಮುದಾಯ ಸದಸ್ಯರಿಗೆ ಸೀಮಿತವಾದಂತೆ ಸಭಾ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ಪ್ರಮುಖರಾದ ಸಚ್ಚಿದಾನಂದ ಮೂರ್ತಿ, ಅಶೋಕ್ ಹಾರ್ನಳ್ಳಿ ಮೊದಲಾದವರು ಆಗಮಿಸಲಿದ್ದಾರೆ.

ಇದಕ್ಕೂ ಮುನ್ನ ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜನ್ಮದಿನದಂದು ಜಿಲ್ಲೆಯ ಐದು ತಾಲೂಕುಗಳಲ್ಲೂ ಬ್ರಾಹ್ಮಣ ಸಮುದಾಯದ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಭಾರತೀಯ ಸಂಸ್ಕೃತಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಹಳೆಯ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಕೂಡ ನಡೆಸಲಾಗುವುದು. ಪ್ರಮುಖವಾಗಿ ಶ್ಲೋಕ ಕಂಠ ಪಾಠ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಛದ್ಮವೇಷ, ಭಕ್ತಿ ಗೀತೆ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಸ್ಪರ್ಧೆಗಳನ್ನು ನಡೆಸಲಾಗುವುದು.

ಅದೇ ರೀತಿ ಪುರುಷರಿಗೆ ಬ್ರಾಹ್ಮಣ ಉಡುಪು ಧಾರಣೆ ಸಂಧ್ಯಾವAದನೆ, ಜನಿವರಕ್ಕೆ ಗಂಟು ಹಾಕುವುದು, ವಿಷ್ಣು ಸಹಸ್ರನಾಮ ಪಠಣ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸುವ ಸ್ಪರ್ಧೆ, ಹೂಗಳ ಜೋಡಣೆ ಪ್ರದರ್ಶನ, ಲಲಿತಾಸಹಸ್ರನಾಮ ಪಠಣ, ಭಜನೆ, ಶಂಖ ಊದುವುದು, ಜಾಗಟೆ ಬಾರಿಸುವುದು ಮೊದಲಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಮಕ್ಕಳಿಗೆ ಚನ್ನಮಣೆ, ಕವಡೆ, ಹಗ್ಗಜಿಗಿತ, ಚದುರಂಗದ ಆಟ ಮೊದಲಾದವುಗಳನ್ನು ಏರ್ಪಡಿಸಲಾಗಿದೆ.

ವಿದ್ಯಾಭಿವೃದ್ಧಿ ನಿಧಿಯ ಕೊಡುಗೆ

ಪ್ರಸ್ತುತ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಅವರು ತಮ್ಮ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸಿದರು:- ಕೊಡಗಿನಲ್ಲಿ ಎರಡು ಬ್ರಾಹ್ಮಣ ಸಂಘಟನೆಗಳು ಶತಮಾನ ಪೂರೈಸಿವೆೆ. ೧೯೧೭ರಲ್ಲಿ ಸ್ಥಾಪನೆಗೊಂಡ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಹಾಗೂ ೧೯೧೯ರಲ್ಲಿ ಸ್ಥಾಪನೆಗೊಂಡ ಸೋಮವಾರಪೇಟೆ ಬ್ರಾಹ್ಮಣ ಸಮಾಜಗಳು ಶತಮಾನ ಪೂರೈಸಿವೆ. ವಿಶೇಷವೆಂದರೆ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ತ್ರಿಮತಸ್ಥ ಸದಸ್ಯರು ಒಂದಾಗಿ ಸಂಘಟನಾತ್ಮಕವಾಗಿ ನಡೆಸುತ್ತಿರುವ ಸಂಸ್ಥೆಗಳು ಅತೀ ವಿರಳವಾಗಿದ್ದು, ಕೊಡಗು ಜಿಲ್ಲೆ ಮಾದರಿ ಎನಿಸಿದೆ ಆಚಾರ್ಯತ್ರಯರ ಆದರ್ಶ ಪಾಲನೆಯೊಂದಿಗೆ ಪರಸ್ಪರ ಸಹಕಾರದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆ ನಡೆಯುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಅತೀ ವಿರಳ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯವನ್ನು ಜಿಲ್ಲಾ ಮಟ್ಟದಲ್ಲಿ ಸಂಘಟಿತ ಹೊಸ ರೂಪುರೇಷೆಗಳೊಂದಿಗೆ ಚೈತನ್ಯಶೀಲರನ್ನಾಗಿ ಮಾಡುವ ಬಯಕೆ ನಮ್ಮದಾಗಿದೆ. ಇದುವರೆಗೂ ಬ್ರಾಹ್ಮಣ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತಿವರ್ಷವೂ ನೆರವನ್ನು ನೀಡುತ್ತಾ ಬಂದಿದೆ. ಇದೀಗ ನಿಧಿಯಲ್ಲಿ ೧೩೮೦ ಸದಸ್ಯರು ಮಾತ್ರ ಇದ್ದು, ಇದನ್ನು ಹೆಚ್ಚಿಸುವ ಬಗ್ಗೆ ಯೋಜಿಸಲಾಗಿದೆ.