ಶ್ರೀಮಂಗಲ, ಸೆ. ೨೯: ಕೊಡವರಿಗೆ ಪ್ರತ್ಯೇಕ ಅಭಿವೃದ್ಧಿ ಸ್ಥಾಪನೆ ಬೇಡಿಕೆ ವಿಚಾರದಲ್ಲಿ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧವಿರುವದಾಗಿ ಯುನೈಟೆಡ್ ಕೊಡವ ಆರ್ಗನೈಜೇಸನ್ (ಯುಕೋ) ಸಂಘಟನೆ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೊಡವರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ೩ಎ ಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಇದರಂತೆಯೇ ಒಕ್ಕಲಿಗರೂ ಸಹ ಪ್ರವರ್ಗ ೩ಎ ಯಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಒಕ್ಕಲಿಗರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿರುವಾಗ ಕೊಡವರಿಗೇಕೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿರುವ ಅವರು ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೂ ಸಿದ್ಧವಿರುವದಾಗಿ ಹೇಳಿದ್ದಾರೆ.

ಪೊನ್ನಣ್ಣ ಜತೆ ಚರ್ಚೆ

ರಾಜ್ಯ ಸರಕಾರ ಇತ್ತೀಚೆಗೆ ನೂತನವಾಗಿ ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗೂ ಮರಾಠ ಸಮುದಾಯಗಳಿಗೆ ನೀಡಿರುವಂತೆ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪಿಸುವಂತೆ ಹೋರಾಟಕ್ಕಿಳಿದಿರುವ, ಯುಕೊ ನಿಯೋಗ ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್, ಹಿರಿಯ ನ್ಯಾಯವಾದಿ ಹಾಗೂ ಸಂವಿಧಾನ ತಜ್ಞರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅವರು, ಕೊಡವರ ಈ ಬೇಡಿಕೆಯು ನ್ಯಾಯ ಬದ್ಧವಾಗಿದ್ದು, ಕೊಡವರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ಅನಿವಾರ್ಯತೆಯಿದೆ, ಈ ನಿಟ್ಟಿನಲ್ಲಿ ಯುಕೊ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ,

(ಮೊದಲ ಪುಟದಿಂದ) ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗೂ ಮರಾಠ ಸಮುದಾಯಗಳಿಗೆ ನೂತನವಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದರ ಮೂಲಕ ರಾಜ್ಯದಲ್ಲಿ ಬಹುಸಂಖ್ಯಾತರು ಹಾಗೂ ರಾಜಕೀಯವಾಗಿ ಪ್ರಬಲರಾಗಿರುವ ಜನಾಂಗಗಳಲ್ಲಿಯೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರು ಇರುವುದನ್ನು ಗುರುತಿಸಿ, ಈ ಜನಾಂಗದಲ್ಲಿರುವ ಹಿಂದುಳಿದವರ ಏಳಿಗೆಗಾಗಿ ಸರಕಾರವು ಸ್ಪಂದಿಸುವ ಚಿಂತನೆಯೊAದಿಗೆ ಅಂತಹ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ೩ಎ ಅಡಿಯಲ್ಲಿ ಕೊಡವರೊಂದಿಗೆ ವರ್ಗೀಕರಣಗೊಂಡಿರುವ ಒಕ್ಕಲಿಗರಿಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವಾಗ, ಅತ್ಯಂತ ಸೂಕ್ಷö್ಮ ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗವೂ ಸಹ ಅಭಿವೃದ್ಧಿ ನಿಗಮ ಹೊಂದಲು ಎಲ್ಲಾ ವಿಧದಲ್ಲಿ ಅರ್ಹತೆಯನ್ನು ಹೊಂದಿದೆ. ಆದ್ದರಿಂದ ಸರಕಾರ ಕೊಡವರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದರು.

ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಯುಕೊ ಸಂಘಟನೆಯ ನಿಲುವು, ಕಾರ್ಯಯೋಜನೆಗಳು ಹಾಗೂ ಹೋರಾಟದ ರೂಪುರೇಖೆಗಳ ಕುರಿತಂತೆ ಚರ್ಚಿಸಿದ ಅವರು, ಸಂವಿಧಾನಿಕವಾಗಿ ಹಾಗೂ ಕಾನೂನಾತ್ಮಕವಾದ ಅವಕಾಶಗಳ ಕುರಿತಂತೆಯೂ ಸಲಹೆ ನೀಡಿದರು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ ೩ಎ ಯಲ್ಲಿರುವ ಒಕ್ಕಲಿಗರಿಗೆ ಪ್ರತ್ಯೇಕ ನಿಗಮ ನೀಡಿರುವುದನ್ನು ಸರ್ಕಾರವೇ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿರುವಾಗ, ಕೊಡವರ ಬೇಡಿಕೆಯನ್ನೂ ಪರಿಗಣಿಸಬೇಕಾಗುತ್ತದೆ, ಕೊಡವರಿಗೆ ಅಭಿವೃದ್ಧಿ ನಿಗಮ ಸ್ಥಾಪನೆಯಾದಲ್ಲಿ, ಕೊಡವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತಂತೆ ತಮ್ಮ ಪಕ್ಷದ ವರಿಷ್ಠರೊಂದಿಗೆ ಮಾತನಾಡಿ ಅವರಿಗೆ ಮನವರಿಕೆ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರುವುದಾಗಿಯೂ ತಿಳಿಸಿದರು.

ಇದೇ ಸಂದರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಛಾಪುಮೂಡಿಸಿರುವ ಕೊಡವರು ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗಿನ ಪ್ರಧಾನ ಮೂಲ ನಿವಾಸಿಗಳು. ಪ್ರಪಂಚದಾದ್ಯAತ ನೆಲೆಸಿರುವ ಕೊಡವರ ಸಂಖ್ಯೆಯು ಕೇವಲ ೧.೭೫ ಲಕ್ಷ. ಬಾಹ್ಯವಾಗಿ ತಮ್ಮ ವೇಶಭೂಷಣ ಹಾವಭಾವಗಳಿಂದ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ಕೊಡವ ಜನಾಂಗದ ಶೇ.೬೦ ಕ್ಕಿಂತಲೂ ಹೆಚ್ಚಿನವರು ಹಿಂದುಳಿದವರಾಗಿದ್ದು, ಶೇ. ೩೦ಕ್ಕಿಂತಲೂ ಹೆಚ್ಚಿನವರು ಬಡತನರೇಖೆಯ ಕೆಳಗಿರುವವರಾಗಿದ್ದಾರೆ, ಮಾತ್ರವಲ್ಲದೆ ಕೊಡವರ ಜನಸಂಖ್ಯೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ತಮ್ಮ ನೆಲದಲ್ಲಿಯೇ ಕೊಡವರು ಅತ್ಯಂತ ಅಲ್ಪಸಂಖ್ಯಾತರಾಗಿದ್ದಾರೆ. ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿಯೂ ಕೊಡವರಿಗೆ ಯಾವುದೇ ಹೇಳಿಕೊಳ್ಳುವಂತಹ ಅವಕಾಶಗಳು ದೊರಕುತ್ತಿಲ್ಲ. ಮೇಲಾಗಿ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕೊಡವರು ರಾಜಕೀಯವಾಗಿ ದೇಶದಲ್ಲಿಯೇ ಅತ್ಯಂತ ದುರ್ಬಲ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಸರಕಾರದ ಯಾವುದೇ ಪ್ರಮುಖ ಯೋಜನೆಗಳು ಹಾಗೂ ಅನುದಾನಗಳು ಅರ್ಹ ಕೊಡವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಈ ರಾಜ್ಯದಲ್ಲಿ, ಸರಕಾರವು ಈಗಾಗಲೇ ರಾಜ್ಯದ ವೀರಶೈವ ಲಿಂಗಾಯಿತ, ಒಕ್ಕಲಿಗ, ಮರಾಠ, ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ ಸಮಾಜ, ಮಡಿವಾಳ, ಅಲೆಮಾರಿ-ಅರೆಅಲೆಮಾರಿ, ಕಾಡುಗೊಲ್ಲ, ಆರ್ಯವೈಶ್ಯ, ಕ್ರಿಶ್ಚಿಯನ್, ಎಸ್ಸಿ ಎಸ್ಟಿ ನಿಗಮಗಳೂ ಸೇರಿದಂತೆ ಸುಮಾರು ೨೦ಕ್ಕಿಂತಲೂ ಹೆಚ್ಚಿನ ಜಾತಿ ಜನಾಂಗಾಧÀರಿತÀ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುವುದರ ಮೂಲಕ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಅನುದಾನಗಳನ್ನು ಬಿಡುಗಡೆಮಾಡಿರುವಂತೆಯೇ, ಕೊಡವರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರವು ಸಂವಿಧಾನದ ೧೬೨ನೇ ವಿಧಿಯಡಿಯಲ್ಲಿ ನೀಡಿರುವ ವಿವೇಚನಾಧಿಕಾರವನ್ನು ಬಳಸಿ ನೂತನವಾಗಿ ಕೊಡವ ಜನಾಂಗಕ್ಕಾಗಿಯೇ ಪ್ರತ್ಯೇಕ ‘ಕೊಡವ ಜನಾಂಗÀ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ, ವಾರ್ಷಿಕವಾಗಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವುದರ ಮೂಲಕ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು ರೂಪಿಸುವಂತೆ ಒತ್ತಾಯಿಸುವುದಾಗಿ ಅವರು ಹೇಳಿದರು.

ಇದೇ ಸಂದರ್ಭ, ಕೋವಿ ಹಕ್ಕಿನ ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಯುಕೊ ಪಾತ್ರವನ್ನು ಶ್ಲಾಘಿಸಿದ ಅವರು, ಸಂಘಟಿತ ಹೋರಾಟದಿಂದ ಕೊಡವರ ಕೋವಿಯ ಹಕ್ಕನ್ನು ಐತಿಹಾಸಿಕ ತೀರ್ಪಿನ ಮೂಲಕ ಉಳಿಸಿಕೊಳ್ಳುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಎಲ್ಲಾ ವಕೀಲರುಗಳು, ಸಂಘ ಸಂಸ್ಥೆಗಳ ಶ್ರಮವನ್ನು ಸ್ಮರಿಸಿದರು. ಇದೇ ಸಂದರ್ಭ ಯುಕೊ ಸದಸ್ಯರು ಪೊನ್ನಣ್ಣ ಅವರಿಗೆ ಸಿಹಿ ನೀಡಿ ಸಂತಸ ಹಂಚಿಕೊAಡರು. ಯುಕೊ ನಿಯೋಗದಲ್ಲಿ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜಫ್ರಿ ಮಾದಯ್ಯ ಹಾಗೂ ಕಾಟಿಮಾಡ ಗಿರಿಅಯ್ಯಪ್ಪ ಉಪಸ್ಥಿತರಿದ್ದರು.