ಸಿದ್ದಾಪುರ, ಸೆ. ೨೮: ಕಾಫಿ ತೋಟದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಜಿಂಕೆ ಮರಿಯೊಂದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಗುರುವಾರ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು ಬಳಿಯ ಸುವರ್ಣಗಿರಿ ಕಾಫಿ ತೋಟದಲ್ಲಿ ಜಿಂಕೆ ಮರಿಯೊಂದು ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟು ಒಬ್ಬಂಟಿಯಾಗಿ ಕಿರುಚಾಡುತ್ತಿತ್ತು. ಈ ಸಂದರ್ಭ ಸ್ಥಳೀಯರಾದ ಉಮ್ಮರ್ ಎಂಬವರು ಜಿಂಕೆ ಮರಿಯನ್ನು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.