ಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯನ್ನು ಮಹದೇವಪೇಟೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭ ಪ್ರಮುಖರಾದ ಅಮೆ ಪಾಲಾಕ್ಷ, ಟಿ.ಎಲ್. ಶ್ರೀನಿವಾಸಮೂರ್ತಿ, ಅಜಯ್, ಜೀವನ್, ಪ್ರಕಾಶ್, ಟಿ.ಎಸ್. ಕಾರ್ತಿಕ್ ಇನ್ನಿತರರಿದ್ದರು.ಗೋಣಿಕೊಪ್ಪಲು: ಪಂಡಿತ್ ದೀನದಯಾಳ್ ಉಪಾಧ್ಯಾಯರ ೧೦೫ ಜಯಂತಿ ಕಾರ್ಯಕ್ರಮವನ್ನು ಗೋಣಿಕೊಪ್ಪಲುವಿನಲ್ಲಿ ಆಚರಿಸಲಾಯಿತು.

ನಗರದ ಬಸ್ ನಿಲ್ದಾಣದಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಾದ ಅರಳಿದ ಕಮಲ ಗುರುತಿನ ಮೇಲೆ ೧೦೫ ದೀಪಗಳನ್ನು ಇಟ್ಟು, ಜಯಂತಿ ಕಾರ್ಯಕ್ರಮದ ವಿಶೇಷತೆಯನ್ನು ಪಕ್ಷದ ಮುಖಂಡರುಗಳು ಗುಣಗಾನ ಮಾಡಿದರು.

ಮಧ್ಯಾಹ್ನದಿಂದಲೇ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಂಗವಲ್ಲಿ ಬಿಡಿಸಿ ಅಲಂಕಾರ ಮಾಡಿದರು. ಸಂಜೆಯ ವೇಳೆ ಕಾರ್ಯಕ್ರಮ ಆಯೋಜಿಸಿದ ಬಿಜೆಪಿ ಪಕ್ಷದ ತಾಲೂಕು ಒಬಿಸಿ ಘಟಕವು ಅಧ್ಯಕ್ಷ ಕೆ. ರಾಜೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು.

ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಪಕ್ಷದ ಮುಖಂಡ ಎಂ.ಎಸ್. ಸುಬ್ರಮಣಿ ಜಯಂತಿ ವಿಶೇಷತೆಯನ್ನು ತಿಳಿಸಿದರು. ಈ ವೇಳೆ ಪಕ್ಷದ ಮುಖಂಡರಾದ ಚಪ್ಪುಡೀರ ಮಾಚು, ಗುಮ್ಮಟೀರ ದರ್ಶನ್, ಸುರೇಶ್ ರೈ, ನೂರೇರ ರಂಜಿ, ಬಿ.ಎನ್.ಪ್ರಕಾಶ್, ಬಿಜೆಪಿ ಒಬಿಸಿ ಘಟಕದ ಪದಾಧಿಕಾರಿಗಳಾದ ನವೀನ್ ಉತ್ತಯ್ಯ, ವಿನೋದ್ ಪೂಜಾರಿ, ಬಿನೀಶ್, ಅಬ್ದುಲ್ ಜಲ್ಲಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ, ಸದಸ್ಯರಾದ ಪುಷ್ಪ, ಗೀತಾ, ರತಿ ಅಚ್ಚಪ್ಪ, ಸೌಮ್ಯಬಾಲು, ಹಕ್ಕಿಮ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೬ನೇ ವಾರ್ಡ್ನಲ್ಲಿ ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಜನ್ಮದಿನಾಚರಣೆ ಮಾಡಲಾಯಿತು.

ಈ ಸಂದರ್ಭ ೬ನೇ ವಾರ್ಡ್ ಬೂತ್ ಅಧ್ಯಕ್ಷ ಮನು, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಬೀರ್ ದಾಸ್, ಗ್ರಾ.ಪಂ. ಸದಸ್ಯರಾದ ಅಡ್ಡಂಡ ನಿಲನ್, ಮಚ್ಚಮಾಡ ವಿಮಲಾ, ಜಿಲ್ಲಾ ಸಾಮಾಜಿಕ ಜಾಲತಾಣದ ಸಹ ಪ್ರಮುಖ ಜೀತು ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.೭ನೇ ಹೊಸಕೋಟೆ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನೋತ್ಸವವನ್ನು ೭ನೇ ಹೊಸಕೋಟೆಯ ತೋಂಡೂರು ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಚರಿಸಲಾಯಿತು.ಮಡಿಕೇರಿ: ಜನಸಂಘದ ಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು ಮಲ್ಲಿಕಾರ್ಜುನ ನಗರದಲ್ಲಿ ಆಚರಿಸಲಾಯಿತು.

ಈ ಸಂದರ್ಭ ವಾರ್ಡ್ನ ನಗರಸಭಾ ಸದಸ್ಯೆ ಕಲಾವತಿ, ವಾರ್ಡ್ನ ಪರಮೇಶ್ ಇತರರು ಪಾಲ್ಗೊಂಡಿದ್ದರು.*ಸಿದ್ದಾಪುರ: ಜನಸಂಘದ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು ವಾಲ್ನೂರು-ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಚರಿಸಲಾಯಿತು.

ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಮನುಮಹೇಶ್, ಸಹ ಪ್ರಮುಖ್ ರಾಜೇಶ್, ಕೃಷಿ ಮೋರ್ಚಾದ ಅಧ್ಯಕ್ಷ ಪ್ರದೀಪ್, ಯುವ ಮೋರ್ಚಾದ ಅಧ್ಯಕ್ಷ ಮದನ್ ಕಾರ್ಯಪ್ಪ, ಪಂಚಾಯಿತಿ ಸದಸ್ಯರುಗಳಾದ ಗಣೇಶ್, ವಿಶಾಲ್ ಮತ್ತಿತರರು ಉಪಸ್ಥಿತರಿದ್ದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.