ಕಣಿವೆ, ಸೆ. ೨೮: ಹಾರಂಗಿ ಜಲಾಶಯದ ಮುಖ್ಯ ಕಾಲುವೆ ಹಾಗೂ ಎಡದಂಡೆ ಕಾಲುವೆಗಳ ಏರಿಗಳಲ್ಲಿದ್ದ ಮಣ್ಣನ್ನು ಅಕ್ರಮವಾಗಿ ಸಾಗಿಸಿರುವ ವಿಚಾರಕ್ಕೆ ಸಂಬAಧಿಸಿದAತೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕವಾದ ಎರಡು ಪ್ರಕರಣಗಳು ಸೋಮವಾರ ದಾಖಲಾಗಿವೆ. ಹೆಬ್ಬಾಲೆ ಗ್ರಾಮದ ಹಾರಂಗಿ ಎಡದಂಡೆ ನಾಲೆಯ ಏರಿ
(ಮೊದಲ ಪುಟದಿಂದ) ಮೇಲಿದ್ದ ಮಣ್ಣನ್ನು ಸಾಗಿಸಿರುವ ಕುರಿತು ಸೋಮವಾರದ ‘ಶಕ್ತಿ’ಯಲ್ಲಿ ಪ್ರಕಟವಾದ ‘ಗಿಡ ಮರಗಳನ್ನುರುಳಿಸಿ ನಾಲೆ ಏರಿ ಮಣ್ಣು ಸಾಗಾಟ, ಕಣ್ಮುಚ್ಚಿ ಕುಳಿತ ನಿಗಮದ ಅಧಿಕಾರಿಗಳು...’ ಎಂಬ ಸುದ್ದಿ ಪ್ರಕಟಗೊಂಡ ಬೆನ್ನಲ್ಲೇ ಹಾರಂಗಿ ಜಲಾಶಯದ ಅಧೀನದ ಕಾರ್ಯಪಾಲಕ ಅಭಿಯಂತರ ನಾಗೇಶ್ ಅವರ ಸೂಚನೆ ಮೇರೆಗೆ ಸಹಾಯಕ ಅಭಿಯಂತರ ಸಿದ್ದರಾಜು ಪೊಲೀಸರಿಗೆ ದೂರು ನೀಡಿದ್ದರು.
ನಮ್ಮ ಇಲಾಖೆಗೆ ಸೇರಿದ ನಾಲೆಯ ಏರಿಯ ಮೇಲೆ ಜೆಸಿಬಿ ಹಾಗೂ ಟಿಪ್ಪರ್ಗಳನ್ನು ಬಳಸಿ ನೂರಾರು ಲೋಡ್ಗಳಷ್ಟು ಮಣ್ಣನ್ನು ಸಾಗಿಸಲಾಗಿದೆ. ಇದರಿಂದಾಗಿ ನಿಗಮಕ್ಕೆ ಉಂಟಾಗಿರುವ ನಷ್ಟವನ್ನು ಮಣ್ಣು ಸಾಗಿಸಿದ ವ್ಯಕ್ತಿಗಳಿಂದ ಭರಿಸುವುದರ ಜೊತೆಗೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಣ್ಣು ಸಾಗಿಸಲು ಬಳಸಿರುವ ವಾಹನಗಳು ಯಾವ ವ್ಯಕ್ತಿಗೆ ಸೇರಿವೆ ಎಂಬುದನ್ನು ಪತ್ತೆ ಹಚ್ಚಬೇಕು. ಅತಿಕ್ರಮವಾಗಿ ಪ್ರವೇಶಿಸಿ ಅನಧಿಕೃತವಾಗಿ ಮಣ್ಣು ಸಾಗಿಸಿರುವ ವ್ಯಕ್ತಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು. ಹಾಗೆಯೇ ಮಣ್ಣು ಸಾಗಾಟಕ್ಕೆ ಬಳಸಿದ ಯಂತ್ರಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆಯಬೇಕೆಂದು ವಾಹನಗಳ ನೋಂದಣಿ ನಂಬರ್ ಸಹಿತ ದೂರಿನಲ್ಲಿ ತಿಳಿಸಲಾಗಿದೆ. ಹಾರಂಗಿ ಕಾಲುವೆಗಳ ಮೇಲಿನ ಏರಿಯಲ್ಲಿರುವ ಮಣ್ಣನ್ನು ಮುಂದಿನ ದಿನಗಳಲ್ಲಿ ಯಾರೇ ಸಾಗಿಸಿದರೂ ಕೂಡ ಇಲಾಖೆ ಕಠಿಣ ಕ್ರಮಗಳನ್ನು ಜರುಗಿಸುತ್ತದೆ ಎಂದು ಕಾರ್ಯಪಾಲಕ ಅಭಿಯಂತರ ನಾಗೇಶ್ ತಿಳಿಸಿದ್ದಾರೆ.