ಮಡಿಕೇರಿ, ಸೆ. ೨೮: ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಇದೀಗ ಜಿಲ್ಲೆಯಲ್ಲಿ ಇಲಿಜ್ವರ (ಲೆಪ್ಟೋಸ್ಪೆöÊರ) ಪ್ರಕರಣಗಳು ಪತ್ತೆಯಾಗಿವೆ. ಇದು ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಪ್ರಕರಣಗಳಿಗೆ ಭಯ ಬೇಡ, ಎಚ್ಚರವಿರಲಿ ಎಂದು ಜಿಲ್ಲಾಡಳಿತ ಅಭಯ ನೀಡಿದ್ದು, ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ೧೪ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಹುತೇಕರು ಗುಣಮುಖ ಹೊಂದಿದ್ದಾರೆ. ಕಳೆದ ೧೫ ದಿನಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಪ್ರಥಮ ಇಲಿಜ್ವರ ಪ್ರಕರಣ ದೃಢಪಟ್ಟಿತು. ಆ ಬಳಿಕ ವಿವಿಧೆಡೆ ರೋಗ ಲಕ್ಷಣವಿದ್ದವರೂ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ತಿಳಿದುಬಂದಿದೆ. ಇವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
೧೪ ಪ್ರಕರಣಗಳು : ೧೫ ದಿನಗಳ ಹಿಂದೆ ಚೇರಂಬಾಣೆಯಲ್ಲಿ ೨ ಪ್ರಕರಣಗಳು ಪತ್ತೆಯಾದ ಬಳಿಕ ನಾಪೋಕ್ಲುವಿನಲ್ಲಿ ೨,
ಗುಣಮುಖ ಹೊಂದಿದ್ದಾರೆ. ಕಳೆದ ೧೫ ದಿನಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಪ್ರಥಮ ಇಲಿಜ್ವರ ಪ್ರಕರಣ ದೃಢಪಟ್ಟಿತು. ಆ ಬಳಿಕ ವಿವಿಧೆಡೆ ರೋಗ ಲಕ್ಷಣವಿದ್ದವರೂ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ತಿಳಿದುಬಂದಿದೆ. ಇವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
೧೪ ಪ್ರಕರಣಗಳು : ೧೫ ದಿನಗಳ ಹಿಂದೆ ಚೇರಂಬಾಣೆಯಲ್ಲಿ ೨ ಪ್ರಕರಣಗಳು ಪತ್ತೆಯಾದ ಬಳಿಕ ನಾಪೋಕ್ಲುವಿನಲ್ಲಿ ೨,
ಆ ಬಳಿಕ ಚಿಕಿತ್ಸೆಗೆ ಒಳಪಡಿಸ ಲಾಗುವುದು. ವಿಪರೀತ ಜ್ವರ, ಜಾಂಡೀಸ್, ಕೆಮ್ಮು, ಉಸಿರಾಟ ಸಮಸ್ಯೆ ಇದ್ದಲ್ಲಿ ತಡಮಾಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ಆದರೆ, ಮುಂಜಾಗ್ರತೆ ಮುಖ್ಯವಾಗಿದೆ ಎಂದು ಡಾ.ವೆಂಕಟೇಶ್ ಹೇಳಿದ್ದಾರೆ.
ಕ್ರಮಬದ್ದವಾದ ಚಿಕಿತ್ಸೆಯಿಂದ, ಇಲ್ಲಿಜ್ವರವನ್ನು ಸಂಪೂರ್ಣ ಗುಣಪಡಿಸುವುದು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ, ಅವುಗಳಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ತೀವ್ರ ವಿಳಂಬ ಚಿಕಿತ್ಸೆಯಿಂದ ದುಷ್ಪರಿಣಾಮ ಉಂಟಾಗುತ್ತದೆ. ಶೀಘ್ರ ರೋಗ ಪತ್ತೆ ಹಾಗೂ ಕ್ರಮ ಬದ್ದ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗ್ಯತವಿಲ್ಲ. ಸೋಂಕು ರೋಗಿಯಿಂದ ಆರೋಗ್ಯವಂತ ವ್ಯಕ್ತಿಗಳಿಗೆ ಹರಡುವುದಿಲ್ಲ. ಈ ರೋಗದ ವಿರುದ್ಧ ಉತ್ಪತ್ತಿಯಾಗುವ ರೋಗ ನೀರೋಧಕವನ್ನು (ಆ್ಯಂಟಿಬಾಡಿ) ಪರೀಕ್ಷಿಸುವ ಟೆಸ್ಟ್ ಕಿಟ್ಗಳು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತವೆ.
ಏನಿದು ಇಲಿಜ್ವರ ?
ಇಲಿಜ್ವರ ಎಂಬ ರೋಗವು “ಲೆಪ್ಟೋಸ್ಪೆöÊರ” ಎಂಬ ಸೂಕ್ಷಾಣು ಜೀವಿಗಳಿಂದ ಉಂಟಾಗುವ ರೋಗವಾಗಿದೆ. ರೋಗಾಣುಗಳು ಪ್ರಾಣಿಗಳ ಮೂತ್ರದಲ್ಲಿದ್ದು, ಇಂತಹ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ಮನೆಯ ಪರಿಸರದಲ್ಲಿ ಇರುವ ಇಲಿ, ಹೆಗ್ಗಣ ಮತ್ತು ಬೆಕ್ಕು, ನಾಯಿ, ದನ, ಆಡು ಮುಂತಾದ ಸಾಕು ಪ್ರಾಣಿಗಳು ಹಾಗೂ ಕೆಲವು ಕಾಡು ಪ್ರಾಣಿಗಳ ದೇಹದಲ್ಲಿ ರೋಗದ ಸೂಕ್ಷಾö್ಮಣುಗಳು ಇರುತ್ತವೆೆ. ಸೋಂಕು ಹೊಂದಿರುವ ಇಂತಹ ಪ್ರಾಣಿಗಳ ಮೂತ್ರ ವಿಸರ್ಜನೆಯು ನೀರಿನಲ್ಲಿ ಸೇರಿ ನೀರು ಮನುಷ್ಯರ ಶರೀರದಲ್ಲಿ ಇರಬಹುದಾದ ಗಾಯಗಳ ಮೂಲಕ ರೋಗಾಣುಗಳು ದೇಹವನ್ನು ಸೇರಿಕೊಳ್ಳುತ್ತವೆ. ಅಲ್ಲದೆ ಬಾಯಿ, ಮೂಗು ಮತ್ತು ಕಣ್ಣುಗಳ ಒಳಭಾಗದ ಮೂಲಕವು ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿವೆ. ಈ ರೋಗಾಣುಗಳು ದೇಹವನ್ನು ಸೇರಿದ ೪-೧೯ ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆÉ.
ಲಕ್ಷಣಗಳು
ಜ್ವರ, ಮಾಂಸ ಖಂಡಗಳ ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ. ವಾಂತಿ ಬೇದಿ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕೆಲವು ರೋಗಿಗಳಲ್ಲಿ (ಸಾಮಾನ್ಯವಾಗಿ ೫-೧೦ ಶೇಕಡ) ಪಿತ್ತ ಕಾಮಲೆ (ಜಾಂಡೀಸ್)ನ ಲಕ್ಷಣಗಳೂ ಕಂಡುಬರುವ ಸಾಧ್ಯತೆ ಇದೆ. ಬಾಯಿ, ಮೂಗು, ಕಫದಲ್ಲಿ ರಕ್ತಸ್ರಾವವನ್ನು ಕಾಣಬಹುದು. ಮೂತ್ರಪಿಂಡ ಸೋಂಕು ಉಂಟಾಗಬಹುದು, ಇದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗಬಹುದು. ಹೃದಯದ ಸೋಂಕು ಉಂಟಾಗಬಹುದು.