ಮಡಿಕೇರಿ, ಸೆ. ೨೯: ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ಕ್ಲಬ್ನ ಕಾರ್ಯಾಲ ಯದಲ್ಲಿ ಕೋವಿಡ್ ಲಸಿಕಾ ಅಭಿಯಾನ ಕ್ಲಬ್ನ ಅಧ್ಯಕ್ಷ ಸೂರಿ ಕಾಕೇರಿ ಅವರ ನೇತೃತ್ವದಲ್ಲಿ ನೆರವೇರಿತು. ಈ ಹಿಂದೆ ೨೭.೬.೨೦೨೧ ರಂದು ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ ಸಾರ್ವಜನಿಕರಿಗೆ ೪೦೦ ಲಸಿಕಾ ಡೋಸ್ಗಳು ನೀಡಲಾಗಿತ್ತು. ಕಾರ್ಯಾಲಯದ ಸುತ್ತಮುತ್ತಲಿನ ಸುಮಾರು ೮ ಗ್ರಾಮದ ೩೭೫ ಸಾರ್ವಜನಿಕರಿಗೆ ಕೋವಿಶೀಲ್ಡ್ ಎರಡನೇ ಹಂತದ ಹಾಗೂ ಮೊದಲನೇ ಹಂತದ ಲಸಿಕೆ ನೀಡಲಾಯಿತು. ಎರಡನೇ ಹಂತದ ಲಸಿಕೆ ಪಡೆದುಕೊಂಡವರಿಗೆ ಪ್ರಶಂಸನಾ ಪತ್ರ ಯುವಕ ಮಂಡಲದ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮಂಜುನಾಥ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ತಜ್ಞ ಮೇ. ಡಾ. ಕುಶ್ವಂತ್ ಕೋಳಿಬೈಲು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು.