ಸೋಮವಾರಪೇಟೆ, ಸೆ. ೨೮: ಸಮೀಪದ ಐಗೂರು ಗ್ರಾಮ ದಲ್ಲಿರುವ ಆರೋಗ್ಯ ಉಪ ಕೇಂದ್ರಕ್ಕೆ ಕಳೆದ ೨ ತಿಂಗಳಿನಿAದ ವೈದ್ಯರು ಆಗಮಿಸದೇ ಇರುವುದರಿಂದ ಸುತ್ತಮುತ್ತಲಿನ ರೋಗಿಗಳಿಗೆ ಸಮಸ್ಯೆಯಾಗಿದೆ.

ಸಣ್ಣಪುಟ್ಟ ಅನಾರೋಗ್ಯಕ್ಕೂ ಸಹ ಸೋಮವಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನೇ ಆವಲಂಭಿಸ ಬೇಕಿದ್ದು, ಬಾಣಂತಿಯರು, ಗರ್ಭಿಣಿ ಸ್ತಿçÃಯರು ತಮ್ಮನ್ನೂ ಸೇರಿಸಿದಂತೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಬಿಳಿಗೇರಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಿದೆ.

ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರ್ಕಾರದ ಆರೋಗ್ಯ ಇಲಾಖೆಯಿಂದ ಕಾಲಕಾಲಕ್ಕೆ ಲಸಿಕೆ, ಮಾತ್ರೆಗಳನ್ನು ನೀಡುತ್ತಿದ್ದು, ಇದನ್ನು ಪಡೆದುಕೊಳ್ಳಲು ಆಟೋ, ಬಾಡಿಗೆ ವಾಹನಗಳಲ್ಲಿ ಬಿಳಿಗೇರಿಯ ಆಸ್ಪತ್ರೆಗೆ ತೆರಳಬೇಕಿದೆ. ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಇದರಿಂದ ಸಮಸ್ಯೆಯಾಗಿದ್ದು, ಐಗೂರು ಆರೋಗ್ಯ ಉಪಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಕಳೆದ ೨೦೧೭ರಿಂದ ಐಗೂರು ಆರೋಗ್ಯ ಉಪ ಕೇಂದ್ರದಲ್ಲಿ ಆಯುಷ್ ವೈದ್ಯರಾದ ಡಾ. ಸುಕೃತ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇವರ ಸೇವೆಯಿಂದ ಐಗೂರು, ಕಾಜೂರು, ಹೊಸತೋಟ, ಕಿರಗಂದೂರು, ವಿಜಯನಗರ, ಯಡವಾರೆ, ಗರಗಂದೂರು ಬಿ ಸೇರಿದಂತೆ ಇತರ ಗ್ರಾಮಗಳ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು.

ಡಾ. ಸುಕೃತ ಅವರು ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಐಗೂರು ಉಪ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದು, ವಾರದ ೭ ದಿನವೂ ಒಂದಿಲ್ಲೊAದು ಆಸ್ಪತ್ರೆಯಲ್ಲಿ ಲಭ್ಯವಿರುತ್ತಿದ್ದರು. ಆದರೆ ಕಳೆದೆರಡು ತಿಂಗಳಿನಿAದ ಇವರನ್ನು ಬೇರೆಡೆಗೆ ವರ್ಗಾಯಿಸಿದ್ದು, ಎಂಬಿಬಿಎಸ್ ವೈದ್ಯರೋರ್ವರನ್ನು ಬಿಳಿಗೇರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ.

ಆದರೆ ಈ ವೈದ್ಯರು ಐಗೂರು ಆರೋಗ್ಯ ಉಪಕೇಂದ್ರಕ್ಕೆ ಆಗಮಿಸದೇ ಬಿಳಿಗೇರಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಐಗೂರಿಗೂ ವಾರದಲ್ಲಿ ಕನಿಷ್ಟ ೩ ದಿನ ಸೇವೆ ಸಲ್ಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಹಿಂದೆ ಸಣ್ಣಪುಟ್ಟ ಜ್ವರ, ಶೀತ, ನೆಗಡಿ, ಕೆಮ್ಮು, ಬಿ.ಪಿ., ಶುಗರ್ ಚಿಕಿತ್ಸೆ ಮತ್ತು ಪರೀಕ್ಷೆಯನ್ನು ಐಗೂರಿನಲ್ಲಿಯೇ ನಡೆಸಲಾಗುತ್ತಿತ್ತು. ಆದರೆ ಇದೀಗ ಬಿಳಿಗೇರಿ ಅಥವಾ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ತೆರಳಬೇಕಿದೆ. ಗ್ರಾಮೀಣ ಭಾಗದಲ್ಲಿ ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲ. ಖಾಸಗಿ ವಾಹನದಲ್ಲಿ ತೆರಳಲು ಕೂಲಿ ಕಾರ್ಮಿಕ ಕುಟುಂಬಕ್ಕೆ ಕಷ್ಟಸಾಧ್ಯವಾಗುತ್ತಿದ್ದು, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಅವರು, ಕೊರೊನಾ ಲಸಿಕೆ ನೀಡಿಕೆ ಕಾರ್ಯ ಪ್ರಗತಿಯಲ್ಲಿರುವುದರಿಂದ ವೈದ್ಯರುಗಳು ಎಲ್ಲಾ ಸಮಯದಲ್ಲೂ ಆಸ್ಪತ್ರೆಯಲ್ಲಿ ಇರಲು ಸಾಧ್ಯವಾಗು ತ್ತಿಲ್ಲ. ಇದೀಗ ಲಸಿಕೆ ನೀಡುವ ಕಾರ್ಯ ಬಹುತೇಕ ಪೂರ್ಣ ಗೊಳ್ಳುತ್ತಿದೆ. ಬಿಳಿಗೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರನ್ನು ವಾರದಲ್ಲಿ ೩ ದಿನಗಳ ಕಾಲ ಐಗೂರಿಗೆ ನಿಯೋಜಿಸಲಾಗುವುದು. ದಿನ ಬಿಟ್ಟು ದಿನ ಐಗೂರಿನ ಆರೋಗ್ಯ ಕೇಂದ್ರದಲ್ಲಿ ಲಭ್ಯರಿರು ವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. - ವಿಜಯ್