ಸೋಮವಾರಪೇಟೆ, ಸೆ. ೨೮: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಕೂತಿ ಗ್ರಾಮ ವ್ಯಾಪ್ತಿಯಲ್ಲಿ ಫಸಲು ನಷ್ಟವಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಕೂತಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೂತಿ ಗ್ರಾಮದಲ್ಲಿ ೭೦೦ಕ್ಕೂ ಅಧಿಕ ರೈತರು ವಾಸವಾಗಿದ್ದು, ಈ ಸಾಲಿನಲ್ಲಿ ಸುರಿದ ಧಾರಾಕಾರ ಮಳೆಗೆ ಕಾಫಿ, ಕರಿಮೆಣಸು, ಭತ್ತ, ಬಾಳೆ, ಶುಂಠಿ ಸೇರಿದಂತೆ ಇತರ ಬೆಳೆಗಳು ಶೇ.೫೦ಕ್ಕೂ ಅಧಿಕ ಹಾನಿಯಾಗಿದೆ. ಈ ಹಿನ್ನೆಲೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭ ಗ್ರಾಮಾಧ್ಯಕ್ಷ ಹೆಚ್.ಡಿ. ಮೋಹನ್, ಕಾರ್ಯದರ್ಶಿ ವಿನೋದ್ ಕುಮಾರ್, ಸದಸ್ಯರಾದ ಗಣೇಶ್, ಸಂಜು, ಅಶ್ವಥ್, ಗಿರೀಶ್, ಕಿಶನ್ ಸೇರಿದಂತೆ ಇತರರು ಹಾಜರಿದ್ದರು.