ಗೋಣಿಕೊಪ್ಪ ವರದಿ. ಸೆ. ೨೬ : ಎಸ್.ಎಸ್. ಕಲಾ ಸಂಗಮ್ ವತಿಯಿಂದ ಬೆಂಗಳೂರು ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಾಟ್ಯ ಸಂಕಲ್ಪ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಕಲಾವಿದರು ಪ್ರಶಸ್ತಿ ಸ್ವೀಕರಿಸಿದರು.
ಪ್ರೇಕ್ಷ ಅಶೋಕ್ ಭಟ್‌ಗೆ ಸಾಧಕ ರತ್ನ ಪ್ರಶಸ್ತಿ, ಗ್ರೀಷ್ಮ, ರೀತಿ ಕಾವೇರಮ್ಮ, ಸಾಕ್ಷಿ ತಂಗಮ್ಮ, ಅನ್ವಿತ, ಅನ್ವಿತಾ ಚೋಂದಮ್ಮ, ದಿಶಿಕ ಚೋಂದಮ್ಮ ಅವರುಗಳಿಗೆ ಕಿಡ್ ಟ್ಯಾಲೆಂಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಎಸ್. ಕಲಾ ಸಂಗಮ್ ಗೌ. ಅಧ್ಯಕ್ಷೆ ಸುನಿತ ರೆಡ್ಡಿ, ಅಧ್ಯಕ್ಷ ಟಿ.ಕೆ.ಶಿವಕುಮಾರ್, ಕಲಾವಿದರಾದ ಗಿರಿಜಾ ಲೋಕೇಶ್, ಶಶಿಧರ್ ಕೋಟೆ ಇದ್ದರು.
ಹೆಜ್ಜೇನು ಹುಳುಗಳ ಮಾರಣ ಹೋಮ.... ಇದಕ್ಕಿಲ್ಲವೇ ಕ್ರಮ?
ಕಣಿವೆ, ಸೆ. ೨೭ : ಹೆಜ್ಜೇನು ಆದರೂ ಸರಿ, ಕೋಲು ಜೇನಾದರೂ ಸರಿ, ಬೇರೆ ಇನ್ನಾವುದೇ ಜೇನುಗೂಡು ಕಂಡರೂ ಕ್ಷಣಾರ್ಧದಲ್ಲಿ ಅದಕ್ಕೆ ಕನ್ನ ಹಾಕಿ ರಸ್ತೆ ಬದಿಗಳಲ್ಲಿ ಜೇನುಹನಿ ಮಾರಾಟ ಮಾಡುತ್ತಿದ್ದ ಚಿತ್ರಣ ಕಣಿವೆ ಗ್ರಾಮದ ರಾಮಲಿಂಗೇಶ್ವರ ದೇವಾಲಯ ಸನ್ನಿಧಿಯ ಮುಖ್ಯ ರಸ್ತೆಯ ಬದಿಯಲ್ಲಿ ಭಾನುವಾರ ಕಂಡು ಬಂತು. ಹಾಗೆಯೇ ಜೇನು ಹನಿ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಸಹಸ್ರ ಸಹಸ್ರ ಜೇನುಹುಳುಗಳ ಮಾರಣ ಹೋಮವಾಗಿದ್ದುದು ಗೋಚರಿಸಿತು..
ಹಿಂದಿ ಭಾಷೆ ಮಾತನಾಡುತ್ತಿದ್ದ ಅಸ್ಸಾಂ ಮೂಲದವರು ಎನ್ನಲಾದ ಮೂರ್ನಾಲ್ಕು ಹುಡುಗರ ತಂಡ ಒಂದಿಷ್ಟು ಪಾತ್ರೆಗಳ ಸಂಗಡ ಜೇನು ಮಾರಾಟ ಮಾಡುತ್ತಿದ್ದುದು ಕಂಡುಬAತು.
ಕಣಿವೆಯಲ್ಲಿನ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಾರಂಗಿ ಎಡದಂಡೆ ಕಾಲುವೆ ಹಾದು ಹೋಗಿರುವ ಅಕ್ವೆಡಕ್ಟ್ ಕಟ್ಟಡದಲ್ಲಿ ಕಟ್ಟಿದ್ದು ಎನ್ನಲಾದ ಜೇನುಗೂಡನ್ನು ಕಿತ್ತು ತಂದ ಈ ಹುಡುಗರು ರಸ್ತೆ ಬದಿಯಲ್ಲಿಟ್ಟು ಒಂದು ಕೆಜಿ ಜೇನು ಹನಿಗೆ ೩೦೦, ಅರ್ಧ ಕೆಜಿ ಜೇನು ಹನಿಗೆ ೧೫೦ ರೂಗೆ ಮಾರಾಟ ಮಾಡುತ್ತಿದ್ದುದನ್ನು ಕಂಡ ರಸ್ತೆ ಹೋಕರು ತಮ್ಮ ವಾಹನಗಳನ್ನು ನಿಲ್ಲಿಸಿ ತರಾತುರಿಯಲ್ಲಿ ಜೇನು ಖರೀದಿಸುತ್ತಿದ್ದ ಚಿತ್ರಣ ಕಂಡು ಬಂತು.
ಆದರೆ ಆ ಸ್ಥಳದಲ್ಲಿ ಸತ್ತು ಬಿದ್ದಿದ್ದ ರಾಶಿ ರಾಶಿ ಜೇನುಹುಳುಗಳು ಕೆಲವರಲ್ಲಿ ಮರುಕ ತರಿಸಿ ಅಯ್ಯೋ ಪಾಪ ಎಂಬ ಭಾವನೆ ವ್ಯಕ್ತವಾಯಿತು. ಆದರೆ ಕೆಲವರಲ್ಲಿ ಯಾವ ಬಾವನೆಗಳೂ ಕೂಡ ಕಂಡು ಬರಲಿಲ್ಲ.
ಒಂದು ಹನಿ ಜೇನು ಸಂಗ್ರಹಿಸಲು ಒಂದು ಜೇನು ಹುಳು ಅದೆಷ್ಟು ಕಿಮೀ ಸ್ರಮಿಸುತ್ತದೆ. ಅದೆಷ್ಟೆಲ್ಲಾ ಹೂವುಗಳನ್ನು ಸಂದರ್ಶಿಸಿ ಅವುಗಳಿಗೆ ಮುತ್ತಿಟ್ಟು ಆ ಹೂವಲ್ಲಿನ ಮಕರಂಧವನ್ನು ಹೀರಿ ಜೇನುಗೂಡಿಗೆ ತಂದು ಸಂಗ್ರಹಿಸುತ್ತದೆಯೋ ಅದು ಲೆಕ್ಕವಿಲ್ಲದಷ್ಟು.
ಮೊದಲೇ ಜೇನುಸಂತತಿ ವಿನಾಶದ ಅಂಚಿನಲ್ಲಿರುವ ಈ ಹೊತ್ತಿನಲ್ಲಿ ಇರುವ ಜೇನು ಹುಳುಗಳನ್ನು ಅದರ ಮಕರಂಧದ ಕಾರಣಕ್ಕಾಗಿ ಹೀಗೆ ಮಾರಣ ಹೋಮ ಮಾಡುವುದು ಅದೆಷ್ಟು ಸರಿ ? ಎಂಬ ಪ್ರಶ್ನೆ ಕೆಲವು ಪರಿಸರ ಪ್ರಾಣಿ - ಪ್ರಿಯರದ್ದು.
ಜೇನು ಹನಿ ಸಂಗ್ರಹಿಸುವ ಭರದಲ್ಲಿ ಜೇನು ಸಂತತಿಯನ್ನು ನಾಶ ಮಾಡುವವರ ವಿರುದ್ಧ ಕ್ರಮ ಜರುಗಿಸಲು ಅರಣ್ಯ, ಪರಿಸರ ಅಥವಾ ಪೊಲೀಸ್ ಇಲಾಖೆ ಇನ್ನಾದರೂ ಕಾನೂನು ರೂಪಿಸಬೇಕಾದ ಅನಿವಾರ್ಯತೆ ಇದೆ ಅಲ್ಲವೇ...!? - ಮೂರ್ತಿ