ಮಡಿಕೇರಿ, ಸೆ. ೨೭: ಅಂತರರಾಷ್ಟಿçÃಯ ಸೇವಾ ಸಂಸ್ಥೆ ರೋಟರಿ ಮೂಲಕ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ತಾ. ೨೯ ರಂದು (ನಾಳೆ) ಕೊಡಗು ಜಿಲ್ಲೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರಗಳನ್ನು ಮಧುಮೇಹ ಸೋಲಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗುತ್ತಿದ್ದು ಸುಮಾರು ೨ ಸಾವಿರ ಮಂದಿಗೆ ಜಿಲ್ಲೆಯಲ್ಲಿ ಮಧುಮೇಹ ತಪಾಸಣೆ ಕೈಗೊಳ್ಳುವ ಗುರಿ ಇದೆ ಎಂದು ರೋಟರಿ ವಲಯ ೬ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ಮತ್ತು ವಲಯ ಕಾರ್ಯದರ್ಶಿ ಎಸ್.ಎಸ್. ವಸಂತ ಕುಮಾರ್ ತಿಳಿಸಿದ್ದಾರೆ.
ಆರೋಗ್ಯ ಸಂಬAಧಿತ ಯೋಜನೆಗಳಿಗೆ ಆದ್ಯತೆ ನೀಡಿರುವ ರೋಟರಿ ಸಂಸ್ಥೆಯು ತಾ. ೨೯ ರಂದು ಭಾರತದಾದ್ಯಂತ ಮಧುಮೇಹ ತಪಾಸಣೆಯನ್ನು ಬೃಹತ್ ರೀತಿಯಲ್ಲಿ ಕೈಗೊಳ್ಳುತ್ತಿದ್ದು ೧ ದೇಶ, ೧ ದಿನ, ೧೦ ಲಕ್ಷ ಮಂದಿಯ ತಪಾಸಣೆ ಎಂಬ ಗುರಿಯೊಂದಿಗೆ ಏಷ್ಯಾ ಖಂಡದಲ್ಲಿ ಹೊಸ ದಾಖಲೆಗೆ ರೋಟರಿ ಸಂಸ್ಥೆ ಮುಂದಾಗಿದೆ ಎಂದು ಅನಿಲ್ ಮತ್ತು ವಸಂತ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡಗಿನಲ್ಲಿಯೂ ರೋಟರಿ ಕ್ಲಬ್‌ಗಳು ತಾ. ೨೯ ರಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ಮಧುಮೇಹ ತಪಾಸಣೆಯನ್ನು ಉಚಿತವಾಗಿ ಕೈಗೊಳ್ಳುತ್ತಿವೆ. ಮಡಿಕೇರಿ ರೋಟರಿ, ಮಡಿಕೇರಿ ಮಿಸ್ಟಿ ಹಿಲ್ಸ್, ಗೋಣಿಕೊಪ್ಪ ರೋಟರಿ, ಶನಿವಾರಸಂತೆ ರೋಟರಿ, ವೀರಾಜಪೇಟೆ ರೋಟರಿ, ಕುಶಾಲನಗರ ರೋಟರಿ, ಕೊಡ್ಲಿಪೇಟೆ ಹೇಮಾವತಿ ರೋಟರಿ, ಸೋಮವಾರಪೇಟೆ ಹಿಲ್ಸ್ ವತಿಯಿಂದ ಮಧುಮೇಹ ತಪಾಸಣೆ ಶಿಬಿರಗಳು ಬುಧವಾರ ವಿವಿಧ ಪ್ರದೇಶಗಳಲ್ಲಿ ಜರುಗಲಿದ್ದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಅನಿಲ್ ಕೋರಿದ್ದಾರೆ.
ಮೊದಲ ಹಂತದಲ್ಲಿ ಮಧುಮೇಹ ತಪಾಸಣೆ ನಡೆಸಲಾಗುತ್ತದೆ. ಬಳಿಕ ಮಧುಮೇಹ ತಡೆಯುವ ಜಾಗೃತಿ ಮಾಹಿತಿ ನೀಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಮಧುಮೇಹವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಮೂಲಕ ಮಧುಮೇಹ ನಿವಾರಣೆಗೆ ರೋಟರಿ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿಯೂ ಅನಿಲ್ ಮತ್ತು ವಸಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.