ಮಡಿಕೇರಿ, ಸೆ. ೨೭: ಕೊಡಗು ಮಕ್ಕಳ ಸಹಾಯವಾಣಿ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕೊಡಗು ವಿಶೇಷ ಮಕ್ಕಳ ಪೊಲೀಸ್ ಘಟಕ ಸಹಯೋಗದಲ್ಲಿ ತೆರೆದ ಮನೆ ಕಾಯಕ್ರಮವನ್ನು ಹಾಕತ್ತೂರು ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ ೧೦೯೮ರ ಬಗ್ಗೆ ಮತ್ತು ಬಾಲ ನ್ಯಾಯ ಕಾಯ್ದೆ ೨೦೧೫ ಬಗ್ಗೆ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ನವೀನ ಕುಮಾರ್ ಮಾಹಿತಿ ನೀಡಿದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ ಹಾಗೂ ಮಹೇಶ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡ್ಡೆ ಕಾಯ್ದೆ ೨೦೧೨ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ೧೧೨ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳಾದ ಪ್ರವೀಣ್‌ಕುಮಾರ್, ಕುಸುಮ, ಮಂಜುಳ, ಶೋಭಲಕ್ಷಿö್ಮ ಹಾಗೂ ಮಡಿಕೇರಿ ಗ್ರಾಮಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ. ಸುಂದರ್ ಸುವರ್ಣ ಮತ್ತು ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ನಳಿನಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಶಾಲಾ ಶಿಕ್ಷಕರು, ಎಸ್.ಡಿ.ಎಂ ಸಮಿತಿಯ ಸದಸ್ಯರು, ಶಾಲಾ ಮಕ್ಕಳ ಪೋಷಕರು, ಆಶಾಕಾರ್ಯಕರ್ತೆ ಯರು ಹಾಜರಿದ್ದರು.