ಸಂಪಾಜೆ : ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಯನ್ನು ಸಂಪಾಜೆಯಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ತಾಲೂಕು ಸಮಿತಿ ಪ್ರಮುಖರು ಭಾಗವಹಿಸಿದರು. ಪಕ್ಷದ ಎಲ್ಲಾ ಹಿರಿಯ, ಕಿರಿಯ ಕಾರ್ಯಕರ್ತರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಪಕ್ಷದ ಅಭಿಮಾನಿಗಳು ಭಾಗವಹಿಸಿದರು. ಬೂತ್ ಅಧ್ಯಕ್ಷö್ಯರುಗಳ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯವು ನಡೆಯುತ್ತಿದ್ದು, ಸಂಪಾಜೆ ೨ನೇ ಬೂತ್ ಅಧ್ಯಕ್ಷ ಅಜಿತ್ ದೇವರಗುಂಡ ಅವರ ಮನೆಗೆ ನಾಮಫಲಕ ಅಳವಡಿಸಲಾಯಿತು. ಕೂಡಿಗೆ : ಕೂಡಿಗೆಯ ಬಿಜೆಪಿ ಬೂತ್ ಸಮಿತಿಯ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮರಣೆ ಕಾರ್ಯಕ್ರಮವು ಕೂಡಿಗೆಯ ಆರ್.ಕೆ. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಬಗ್ಗೆ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಬೂತ್ ಸಮಿತಿಯ ಅಧ್ಯಕ್ಷ ಗಿರೀಶ್‌ಕುಮಾರ್ ದೀನ್ ದಯಾಳ್‌ನವರ ಬಗ್ಗೆ ಸವಿಸ್ತಾರವಾಗಿ ಮಾತಾನಾಡಿದರು. ಈ ಸಂದರ್ಭದಲ್ಲಿ ಕೂಡಿಗೆ ಬೂತ್ ಅಧ್ಯಕ್ಷ. ಪ್ರಕಾಶ್ ಆರ್.ಕೆ. ಕೃಷ್ಣ, ಜಯಂತ್ ಧರ್ಮಣ್ಣ ಸುಬ್ಬಯ್ಯ ಕೇಶವ ರೈ ಸೀಗೆಹೊಸೂರು ಕೃಷ್ಣ , ಕುಮಾರ್ ಮೊದಲಾದವರು ಭಾಗವಹಿಸಿದ್ದರು.ಮಡಿಕೇರಿ: ನಗರದ ಪುಟಾಣಿನಗರ ವಾರ್ಡ್ನಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಇವರ ೧೦೫ನೇ ಜನ್ಮ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಮಂಜುಳಾ, ನಗರ ಬಿಜೆಪಿ ಖಜಾಂಚಿ ಎಸ್ ಮುರುಗನ್, ವಾರ್ಡ್ ಅಧ್ಯಕ್ಷ ವೇಣುಗೋಪಾಲ್, ಪ್ರಮುಖರಾದ ಚಾರ್ಲಿ, ಕಣ್ಣ, ರಮೇಶ್, ಜಯ, ಶರತ್, ಮಂಜೇಶ್, ವಿನುತಾ, ದೇವಯಾನಿ, ಶಾಲಿನಿ ಮುಂತಾದವರು ಭಾಗವಹಿಸಿದ್ದರು.

ವೀರಾಜಪೇಟೆ: ಇಲ್ಲಿನ ಆರ್ಜಿ ಗ್ರಾಮದ ಕಲ್ಲುಬಾಣೆ ಬೂತ್ ಮಟ್ಟದಿಂದ ಜನಸಂಘದ ಮಹಾನ್ ಚಿಂತಕ, ಪಂಡಿತ್ ದೀನ ದಯಾಳ್ ಉಪಾಧ್ಯಾಯರ ೧೦೫ ನೇ ವರ್ಷದ ಜಯಂತಿ ಯನ್ನು ಆಚರಿಸಲಾಯಿತು. ಈ ಸಂದರ್ಭ ದೀನ್‌ದಯಾಳ್ ಅವರ ಭಾವಚಿತ್ರಕ್ಕೆ ಕಲ್ಲುಬಾಣೆ ಬೂತ್ ಅಧ್ಯಕ್ಷ ಬಿ. ಸಿ. ಕಿರಣ್ ಪುಷ್ಟಾರ್ಚನೆ ನೆರವೇರಿಸಿದರು. ಬೂತ್ ಮಟ್ಟದ ಸದಸ್ಯರು ಹಾಗೂ ಇತರರು ಹಾಜರಿದ್ದರು.*ಗೋಣಿಕೊಪ್ಪ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ೧೦೫ನೇ ಜನ್ಮದಿನಾಚರಣೆಯನ್ನು ಗೋಣಿಕೊಪ್ಪ ೭ ಮತ್ತು ೮ನೇ ವಾರ್ಡಿನ ಬಿಜೆಪಿ ಬೂತ್ ಸಮಿತಿ ವತಿಯಿಂದ ಆಚರಿಸಲಾಯಿತು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯಗಳಾದ ವಿವೇಕ್ ರಾಯ್ಕರ್, ಪುಷ್ಪ ಮನೋಜ್, ಶಕ್ತಿ ಕೇಂದ್ರ ಪ್ರಮುಖರಾದ ನೂರೆರ ರಂಜಿ, ತಾಲೂಕು ಬಿಜೆಪಿ ಉಪಾಧ್ಯಕ್ಷೆ ರಾಣಿ ನಾರಾಯಣ್, ಬೂತ್ ಅಧ್ಯಕ್ಷ ಮದನ್ ಶೆಟ್ಟಿ, ಚೇತನ್, ಗೋಣಿಕೊಪ್ಪ ಕೃಷಿ ಮೋರ್ಚಾ ಅಧ್ಯಕ್ಷರು ರಜನ್ ತಿಮ್ಮಯ್ಯ ಹಾಗೂ ವಿನಯ್, ಜಲೀಲ್, ಸುಶೀಲ ಪಾಲ್ಗೊಂಡಿದ್ದರು. ಗುಡ್ಡೆಹೊಸೂರು: ಇಲ್ಲಿನ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ಬಿ.ಜೆ.ಪಿ.ಪಕ್ಷದ ಸ್ಥಾಪಕರಾದ ದೀನ್ ದಯಾಳ್ ಅವರ ೧೦೫ನೇ ವರ್ಷದ ಹುಟ್ಟುಹಬ್ಬವನ್ನು ಗುಡ್ಡೆಹೊಸೂರು ಶಕ್ತಿ ಕೇಂದ್ರದ ಎಲ್ಲಾ ಬೂತ್‌ಗಳಲ್ಲಿಯು ಕಾರ್ಯಕ್ರಮ ಆಚರಿಸಲಾಯಿತು. ಬೆಟ್ಟಗೇರಿ, ಬಸವನಹಳ್ಳಿ, ಮಾದಪಟ್ಟಣ ಮತ್ತು ಅತ್ತೂರು ಬೂತ್‌ಮಟ್ಟದಲ್ಲಿ ಆಚರಿಸಲಾಯಿತು. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿಜೀ ಅವರ ೭೧ ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭಾಶಯಕೋರುವ ಪೋಸ್ಟ್ ಕಾರ್ಡ್ ಕಳಿಸುವ ಅಭಿಯಾನಕ್ಕೆ ಇದೇ ಸಂದರ್ಭ ಚಾಲನೆ ನೀಡಲಾಯಿತು. ಕೊಡಗಿನಿಂದ ೩ ಲಕ್ಷ ಕಾರ್ಡ್ ದೆಹಲಿ ತಲುಪಲಿದೆ ಎಂದು ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ಪುಷ್ಪನಾಗೇಶ್ ತಿಳಿಸಿದರು. ಎಲ್ಲಾ ವಿಭಾಗದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ನಂದಿನಿ,ಶಕ್ತಿ ಕೇಂದ್ರದ ಅಧ್ಯಕ್ಷ ಕುಡೆಕ್ಕಲ್ ನಿತ್ಯಾನಂದ, ಪ್ರವೀಣ್ ಗ್ರಾಮ ಪಂಚಾಯ್ತಿ ಸದಸ್ಯರುಗಳು ಮತ್ತು ಶಕ್ತಿ ಕೇಂದ್ರದ ಬಿ.ಜೆ.ಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಅಂಬಾಡಿ ರವಿ ಮತ್ತು ಎಲ್ಲಾ ಬೂತ್ ಅಧ್ಯಕ್ಷರುಗಳು ಹಾಜರಿದ್ದರು. ಗ್ರಾ.ಪಂ. ಸದಸ್ಯೆ ಗಂಗಮ್ಮ ಪ್ರಾರ್ಥಿಸಿದರು. ಅಂಬಾಡಿರವಿ ಸರ್ವರನ್ನು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಭಿ, ನಂದಪೂಜಾರಿ, ಗಣೇಶ್, ಆಶಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಡಾಟಿ, ಒಬಿ.ಸಿ ಕಾರ್ಯದರ್ಶಿ ಅಭಿಷೇಕ್ ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.