ಕೂಡಿಗೆ, ಸೆ. ೨೭: ಪೌಷ್ಟಿಕತೆಯುಳ್ಳ ಹಣ್ಣು-ಹಂಪಲು, ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ನಿಯಮಿತವಾಗಿ ಬಳಸುವ ಮೂಲಕ ಅಪೌಷ್ಟಿಕತೆಯನ್ನು ತೊಡೆದು ಹಾಕಿ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ. ಲಕ್ಷಿö್ಮÃ ಕರೆ ನೀಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೂಡುಮಂಗಳೂರು ಗ್ರಾ.ಪಂ. ಹಾಗೂ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಎಸ್.ಡಿ.ಎಂ.ಸಿ., ವಿಜ್ಞಾನ ಸಂಘ, ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಏರ್ಪಡಿ ಸಿದ್ದ ರಾಷ್ಟಿçÃಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳು ಉತ್ತಮ ಆರೋಗ್ಯ ರಕ್ಷಣೆಗೆ ಸಮತೋಲನ ಪೌಷ್ಟಿಕ ಆಹಾರ ಸೇವನೆಗೆ ಸಂಕಲ್ಪ ತೊಡಬೇಕು ಎಂದರು. ಈ ಶಾಲೆಗೆ ಅಮೃತ ಗ್ರಾಮ ಯೋಜನೆಯಡಿ ಗ್ರಾ.ಪಂ. ವತಿಯಿಂದ ಶೌಚಾಲಯ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಗಳನ್ನು ಕಲ್ಪಿಸಲು ಕ್ರಮವಹಿಸ ಲಾಗುವುದು ಎಂದು ಲಕ್ಷಿö್ಮÃ ಶಾಲೆಯವರ ಬೇಡಿಕೆಗೆ ಪ್ರತಿಕ್ರಿಯಿಸಿ ದರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಸದಸ್ಯ ಕೆ.ಕೆ. ಭೋಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರವನ್ನು ಬಳಸಿ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತ ನಾಡಿದರು. ಪೋಷಣ್ ಅಭಿಯಾನದ ಮಹತ್ವ ಕುರಿತು ವಿಜ್ಞಾನ ಸಂಘದ ಶಿಕ್ಷಕಿ ಬಿ.ಡಿ. ರಮ್ಯ ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ಶಶಿಕಲಾ, ಕೆ.ಎಸ್. ಕುಮಾರ್, ಮಾಜಿ ಸದಸ್ಯ ಕೆ.ಎಸ್. ರಾಜಾಚಾರಿ, ಎನ್‌ಎಸ್‌ಎಸ್ ಅಧಿಕಾರಿ ಡಿ.ರಮೇಶ್, ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತ ಸಹಕಾರ ಸಂಘದ ಸಿಇಓ ಸೃಜೇಶ್, ವ್ಯವಸ್ಥಾಪಕ ರಾಜು, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ರೇಖಾ ಅನ್ಸಿಲಾ, ಎಸ್.ಎಂ. ಗೀತಾ, ಪಿ. ಅನಿತಾಕುಮಾರಿ, ಸಿಬ್ಬಂದಿ ಉಷಾ, ಕಾರ್ಯಕರ್ತೆ ಸುಶೀಲಾ ಇದ್ದರು. ವಿದ್ಯಾರ್ಥಿನಿ ಸುಶ್ಮಿತಾ ಪೌಷ್ಟಿಕ ಆಹಾರ ಬಳಕೆ ಕುರಿತ ಘೋಷಣೆ ಗಳನ್ನು ಪ್ರಚುರಪಡಿಸಿದಳು. ವಿದ್ಯಾರ್ಥಿನಿ ಸಂಜನಾ ಮತ್ತು ತಂಡದವರು ಧಾನ್ಯಗಳನ್ನು ಬಳಸಿ ರಚಿಸಿದ ಕರ್ನಾಟಕದ ಭೂಪಟ ಗಮನ ಸೆಳೆಯಿತು.