ಗುಡ್ಡೆಹೊಸೂರು, ಸೆ. ೨೮: ಹೆಬ್ಬಾಲೆಯಲ್ಲಿ ಕಳವು ಮಾಡಿದ ಬೈಕನ್ನು ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಕೊಣನೂರಿನ ದಿಲೀಪ್ ಮತ್ತು ಶರತ್ ಎಂಬವರುಗಳನ್ನು ಬಂಧಿಸಿದ್ದು, ಬಂಧಿತರು ಹಲವು ಸಮಯ ಗಳಿಂದ ಬೈಕ್ ಕಳ್ಳತನ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಹಾಸನ, ಕೆ.ಆರ್. ನಗರ, ಮೈಸೂರು, ಹುಣಸೂರು, ಕೆ.ಆರ್. ಪೇಟೆ ಮತ್ತು ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಎಸ್ಪಿ ಕ್ಷಮಾ ಮಿಶ್ರಾ ಹಾಗೂ ಡಿ.ವೈ.ಎಸ್ಪಿ. ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಮತ್ತು ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಸಜೀ, ಶ್ರೀನಿವಾಸ, ಮಂಜುನಾಥ್, ಸನಂತ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಗಣೇಶ್ ಕುಡೆಕ್ಕಲ್