ಕಣಿವೆ, ಸೆ. ೨೭: ಹಾರಂಗಿ ಮುಖ್ಯ ಕಾಲುವೆಯ ಭುವನಗಿರಿ ಹೆಗ್ಗಡಳ್ಳಿ ಬಳಿ ಅಕ್ರಮವಾಗಿ ಮಣ್ಣು ತುಂಬಿಸಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ವಿದ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳದಲ್ಲಿದ್ದ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ.ಕೆ. ನಾಗೇಶ್ ನೇತೃತ್ವದ ಅಧಿಕಾರಿಗಳ ತಂಡ ಹಾರಂಗಿ ಮುಖ್ಯ ಕಾಲುವೆಯ ಏರಿಯ ಮೇಲೆ ಅತಿಕ್ರಮವಾಗಿ ಧಾವಿಸಿ ಬಂದು ಅಕ್ರಮವಾಗಿ ಮಣ್ಣು ತುಂಬಿಸುತ್ತಿದ್ದುದನ್ನು ಖಂಡಿಸಿದ್ದಾರೆ.
ಹಾರAಗಿ ನಾಲೆ ನಿರ್ಮಾಣದ ಸಂದರ್ಭ ಸಂಗ್ರಹಗೊAಡ ಮಣ್ಣಿನ ರಾಶಿಯನ್ನು ಕಾಲುವೆಯ ಹಿತದೃಷ್ಟಿಯಿಂದ ಭವಿಷ್ಯದಲ್ಲಿ ಸಂರಕ್ಷಿಸಿಡಬೇಕಿದೆ. ಆದರೆ ದುಷ್ಕರ್ಮಿಗಳು ಇಲಾಖೆಯ ಗಮನಕ್ಕೆ ತಾರದೇ ಏಕಾಏಕೀ ನೂರಾರು ಲೋಡ್ ಗಳಷ್ಟು ಮಣ್ಣನ್ನು ಸಾಗಿಸಿ ತಗ್ಗು ಪ್ರದೇಶದಲ್ಲಿನ ನಿವೇಶನಗಳು ಹಾಗೂ ಕೃಷಿ ಭೂಮಿಯ ಸಮತಟ್ಟು ಮಾಡಲು ಸಾಗಿಸಿರುವ ಬಗ್ಗೆ ದೂರುಗಳಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಇನ್ನು ಮುಂದೆ ಜಾಗರೂಕವಾಗಲಿದೆ.
ಸರ್ಕಾರಿ ಸ್ವತ್ತಾದ ನಾಲೆ ಹಾಗೂ ನಾಲೆಗಳ ಏರಿಯ ಮೇಲಿನ ಸಂಪತ್ತನ್ನು ಲೂಟಿ ಮಾಡಿದರೆ ಅಥವಾ ಹಾನಿಗೊಳಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಯಪಾಲಕ ಅಭಿಯಂತರ ನಾಗೇಶ್ ಮಣ್ಣುಗಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ. ನಿಗಮದ ಅಧಿಕಾರಿಗಳ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಸ್ಥಳಕ್ಕೆ ಧಾವಿಸಿ ಬಂದು ಮಣ್ಣು ತೆಗೆಯಲು ಬಳಸಿದ್ದ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದರು. ಪರಾರಿಯಾದ ಟ್ರಾö್ಯಕ್ಟರ್ಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು, ನಿಗಮದ ಅಧಿಕಾರಿಗಳು ನೀಡಿದ ದೂರನ್ನು ದಾಖಲಿಸಿದ್ದಾರೆ.