ಮಡಿಕೇರಿ, ಸೆ. ೨೮: ಹಿರಿಯರು ದೊರಕಿಸಿಕೊಟ್ಟ ಸ್ವಾತಂತ್ರö್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ನಿವೃತ್ತ ಬ್ರಿಗೇಡಿಯರ್ ಕೆ.ಎಂ. ಮುತ್ತಣ್ಣ ಕರೆ ನೀಡಿದರು.

೭೫ನೇ ಸ್ವಾತಂತ್ರö್ಯ ವರ್ಷಾಚರಣೆಯ ಪ್ರಯುಕ್ತ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರ ದಲ್ಲಿ ನಡೆದ “ಆಜಾ಼ದಿ ಕಾ ಅಮೃತ್ ಮಹೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರö್ಯಕ್ಕಾಗಿ ನೂರಾರು ವರ್ಷಗಳಿಂದ ಹೋರಾಡಿದ ಹಿರಿಯರನ್ನು ಸ್ಮರಿಸಿಕೊಳ್ಳಬೇಕು. ಯುವ ಸಮೂಹ ದೇಶಸೇವೆಯ ಬಗ್ಗೆ ಆಸಕ್ತಿ ವಹಿಸಬೇಕು. ಜಿಲ್ಲೆಯಲ್ಲೇ ಸೈನಿಕ ಶಾಲೆಯಿದ್ದು, ಇದರ ಲಾಭ ಪಡೆದುಕೊಳ್ಳಿ ಎಂದು ಮುತ್ತಣ್ಣ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ,್ಣ ಸ್ವಾತಂತ್ರö್ಯ ಹೋರಾಟಗಾರರ ಬಲಿದಾನ ಮತ್ತು ಸಾಧನೆ ಅವಿಸ್ಮರಣೀಯವೆಂದರು. ಇಂದು ಭಾರತ ವಿಶ್ವದ ಗಮನ ಸೆಳೆಯುತ್ತಿದ್ದು, ಆತ್ಮ ನಿರ್ಭರ ಯೋಜನೆ ಯುವ ಜನತೆ ಸ್ವಾವಲಂಬನೆಯ ಬದುಕಿಗೆ ದಾರಿಯಾಗಿದೆ. ವಿದ್ಯಾರ್ಥಿಗಳು ವಿದೇಶಗಳಲ್ಲಿ ತಮ್ಮ ಶೈಕ್ಷಣಿಕ ಪ್ರತಿಭೆ ಪ್ರದರ್ಶಿಸುವ ಮೂಲಕ ವಿಶ್ವ ಮನ್ನಣೆ ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಶೈಕ್ಷಣಿಕ ಸಾಧನೆಯಿಂದ ಮಾತ್ರ ಬದುಕು ಸುಂದರವಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಚೆಟ್ಟಳ್ಳಿ ಪೊಲೀಸ್ ಉಪ ಠಾಣಾಧಿಕಾರಿ ಹರೀಶ್, ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಅಳುವಾರ ಕಾಲೇಜಿನ ಸೂಕ್ಷಾö್ಮಣು ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರೊ. ಶ್ರೀನಾಥ್, ಕಾಫಿ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ.ಎಸ್. ನಾಗರಾಜು, ಉಪನಿರ್ದೇಶಕ ಡಾ. ಜಾರ್ಜ್ ಡ್ಯಾನಿಯಲ್, ಪ್ರಮುಖರಾದ ಶ್ರೀನಾಥ್, ಸ್ಥಳೀಯ ಬೆಳೆಗಾರರಾದ ದಿಲೀಪ್ ಅಪ್ಪಚ್ಚು, ಪೇರಿಯನ ಉದಯ, ಮುದ್ದಮ್ಮಯ್ಯ ಅವರುಗಳು ಅಮೃತ ಮಹೋತ್ಸವ ಹಾಗೂ ಕಾಫಿ ಸಂಶೋಧನಾ ಸಂಸ್ಥೆಯ ಕುರಿತು ಮಾತನಾಡಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿರುವ ಬ್ರಿಗೇಡಿಯರ್ ಕೆ.ಎಂ. ಮುತ್ತಣ್ಣ ಹಾಗೂ ಉಪ ಠಾಣಾಧಿಕಾರಿ, ಮಾಜಿ ಯೋಧ ಹರೀಶ್ ಅವರನ್ನು ಸಂಶೋಧನಾ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಡಾ. ಶಿವಲಿಂಗ ನಿರೂಪಿಸಿ, ಡಾ. ಜೆ.ಎಸ್. ನಾಗರಾಜು ಸ್ವಾಗತಿಸಿ, ಡಾ. ಜಾರ್ಜ್ ಡೇನಿಯಲ್ ವಂದಿಸಿದರು. ಚೆಟ್ಟಳ್ಳಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೇಂದ್ರದ ವಿಜ್ಞಾನಿ ವರ್ಗ, ಸಿಬ್ಬಂದಿಗಳು, ಕಾರ್ಮಿಕ ವರ್ಗ, ಗ್ರಾಮಸ್ಥರು, ಪೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಸಭಾ ಕಾರ್ಯಕ್ರಮದ ನಂತರ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಬೆಳೆಗಾರರಿಗೆ ವನ್ಯ ಸಸಿಗಳು ಹಾಗೂ ಕಾಫಿ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.