ಕೂಡಿಗೆ, ಸೆ. ೨೭ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುಮ್ಮನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ ರಾಷ್ಟಿçÃಯ ಪೋಷಣಾ ಮಾಸಾಚರಣೆ ಅಂಗವಾಗಿ ಪೋಷಣಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ತುಂಗಾ ಎನ್.ನಾಥ್, ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದವರೆಗೆ ಪೌಷ್ಟಿಕತೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಪೌಷ್ಟಿಕ ಅಂಶಗಳನ್ನು ಬೆಂಬಲಿಸುವ, ವಿತರಣೆ, ಆರೋಗ್ಯ ಪೋಷಿಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವತ್ತ ಗಮನರಿಸಿ ಉತ್ತಮ ಫಲಿತಾಂಶ ಪಡೆಯುವ, ರೋಗಗಳಿಂದ ಹೊರಬರಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕ್ಷೇಮ ಮತ್ತು ಅಪೌಷ್ಟಿಕತೆ ನಿವಾರಿಸುವ ಉದ್ದೇಶ ವನ್ನು ಈ ಯೋಜನೆ ಹೊಂದಿದೆ ಎಂದರು. ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ, ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಮಣಿ, ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ.ಲೋಕೇಶ್ ಮಾತನಾಡಿ ದರು. ಗ್ರಾ.ಪಂ. ಸದಸ್ಯ ಆಸೀಫ್, ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕ ಎಚ್.ಸಿ. ಬಸವರಾಜಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್.ಚಂದ್ರೇಶ್, ಶಿಕ್ಷಕರಾದ ಎ.ಸಿ.ಶಾಂತಿ, ಕೆ.ಎ.ತಾರ, ಜಿ.ನಳಿನಿ, ಯು.ಸಿ.ಶಶಿಕಲಾ, ಆಶಾ ಕಾರ್ಯಕರ್ತೆ ಲಕ್ಷಿö್ಮ ಇದ್ದರು. ಪೋಷಣ್ ಅಭಿಯಾನದ ಅಂಗವಾಗಿ ಶಾಲಾವರಣದಲ್ಲಿ ಗಿಡವನ್ನು ನೆಡಲಾಯಿತು.