ಸೋಮವಾರಪೇಟೆ, ಸೆ. ೨೭: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಕೋಟೆಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ, ದೇವಾಲಯ ಸಮಿತಿ ವತಿಯಿಂದ ಅಳವಡಿಸಿರುವ ಸುಂಕವಸೂಲಾತಿ ಕೇಂದ್ರಕ್ಕೆ ಸಂಬAಧಿಸಿದAತೆ, ಇಂದು ಶಾಸಕ ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ, ಕಿರುದಾಲೆ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ವ್ಯಾಪ್ತಿಯ ಆಯ್ದ ಗ್ರಾಮಸ್ಥರು, ಪ್ರಮುಖರು ಭಾಗವಹಿಸಿದ್ದರು.

ಕೋಟೆಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ದೇವಾಲಯ ಸಮಿತಿ ವತಿಯಿಂದ ಸುಂಕ ವಸೂಲಾತಿ ಕೇಂದ್ರ ತೆರೆದು, ಪ್ರವಾಸಿಗರಿಂದ ಸುಂಕ ವಸೂಲಾತಿ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹೇಳಿದರು.

ಪ್ರವಾಸಿ ತಾಣಗಳ ನಿರ್ವಹಣೆ, ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗೆ ಅಧಿಕಾರವಿದ್ದು, ಈ ಸ್ಥಳ ಅರಣ್ಯಕ್ಕೂ ಒಳಪಟ್ಟಿರುವುದರಿಂದ ಜಂಟಿಯಾಗಿ ನಿರ್ವಹಣೆ ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು. ದೇವಾಲಯ ಸಮಿತಿ ಕಾರ್ಯದರ್ಶಿ ದಿಲೀಪ್ ಮಾತನಾಡಿ, ಈಗಾಗಲೇ ದೇವಾಲಯಕ್ಕೆ ತೆರಳಲು ರಸ್ತೆ ನಿರ್ಮಾಣವಾಗಿದೆ. ಇದು ಪ್ರವಾಸಿಗರ ಸಂಚಾರಕ್ಕೆAದು ನಿರ್ಮಾಣವಾಗಿಲ್ಲ. ಇದೀಗ ಪ್ರವಾಸಿ ತಾಣ ಮತ್ತು ದೇವಾಲಯವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಶುಚಿತ್ವ ಕಾಪಾಡಿದ್ದೇವೆ.

(ಮೊದಲ ಪುಟದಿಂದ) ಸುಂಕದ ಹಣವನ್ನು ಬ್ಯಾಂಕ್‌ನಲ್ಲಿರಿಸಿದ್ದು, ಈ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಸುಂಕ ವಸೂಲಾತಿಯಿಂದ ಯಾವುದೇ ಗೊಂದಲಗಳಿಲ್ಲ ಎಂದರು.

ಶಿರAಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿನ್ ಮಾತನಾಡಿ, ಗರ್ವಾಲೆ ಗ್ರಾ.ಪಂ.ಗೆ ಯಾವುದೇ ಹೆಚ್ಚಿನ ಆದಾಯಗಳಿಲ್ಲ. ಈ ಹಿನ್ನೆಲೆ ಪ್ರವಾಸಿ ತಾಣಗಳಾದ ಕೋಟೆಬೆಟ್ಟ, ಮೇದುರ ಜಲಪಾತ, ಶಿರಂಗಳ್ಳಿ ಕೋಟೆಬೆಟ್ಟಗಳನ್ನು ಪಂಚಾಯಿತಿಯಿAದಲೇ ಅಭಿವೃದ್ಧಿಪಡಿಸಿ, ಸಾರ್ವಜನಿಕ ಸ್ವತ್ತನ್ನು ಪಂಚಾಯಿತಿ ಕಾನೂನು ಬದ್ಧವಾಗಿ ನಿರ್ವಹಿಸಲಿ ಎಂದರು.

ಸೂರ್ಲಬ್ಬಿ ಗ್ರಾಮದ ಮಾಜಿ ಸೈನಿಕ ಟಿ.ಇ. ಸೋಮಯ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರವಾಸಿ ತಾಣಗಳಲ್ಲೂ ಶುಚಿತ್ವ ಕಾಪಾಡಬೇಕು. ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಿ, ಆದಾಯದ ಮೂಲಗಳನ್ನು ಹೊಂದಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಡಿಎಫ್‌ಓ ಪೂವಯ್ಯ ಮಾತನಾಡಿ, ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರಿಂದ ಸುಂಕ ವಸೂಲಾತಿ ಮಾಡಿ ಕೂರ್ಗ್ ಫೌಂಡೇಷನ್ ಮೂಲಕ ನಿರ್ವಹಣೆ ಮಾಡಬಹುದಾಗಿದೆ. ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಪಂಚಾಯಿತಿ ನಿರ್ವಹಿಸಲಿ. ಕೂರ್ಗ್ ಫೌಂಡೇಷನ್‌ಗೆ ಸಂಗ್ರಹವಾಗುವ ಹಣವನ್ನು ವನ್ಯಪ್ರಾಣಿಗಳ ಹಾನಿಯಿಂದಾಗುವ ನಷ್ಟಕ್ಕೆ ಭರಿಸಿಕೊಳ್ಳಬಹುದು ಎಂದರು. ಇದಕ್ಕೆ ಗರ್ವಾಲೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಲಿಲ್ಲ.

ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಗ್ರಾ.ಪಂ. ಅಧ್ಯಕ್ಷರು, ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ ಗ್ರಮಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳು, ಅರಣ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡAತೆ ಸಮಿತಿ ರಚಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸುವಂತೆ ಸೂಚಿಸಿದರು.

ಹೀಗೆ ರಚನೆಗೊಂಡ ಸಮಿತಿಯ ಮೂಲಕ ಪ್ರವಾಸಿ ತಾಣದ ಅಭಿವೃದ್ಧಿ, ದೇವಾಲಯ ನಿರ್ವಹಣೆಗಾಗಿ ಸುಂಕದ ಹಣವನ್ನು ಬಳಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರಲ್ಲದೇ, ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಜವಾಬ್ದಾರಿ ನೀಡಲಾಯಿತು.

ಗರ್ವಾಲೆ ಗ್ರಾಮದ ದಿಲೀಪ್ ಮಾತನಾಡಿ, ಬೊಟ್ಲಪ್ಪ ಈಶ್ವರ ದೇವಾಲಯದ ಪಾವಿತ್ರö್ಯತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಪ್ರವಾಸಿಗರಿಗೆ ಅಗತ್ಯ ಸೂಚನೆ ಮಾರ್ಗದರ್ಶನ ನೀಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಇದನ್ನು ಬದಲಾಯಿಸಿ ಸರ್ಕಾರವೇ ನಿರ್ವಹಿಸುವುದಾದರೆ ಇಲ್ಲಿ ಪ್ರವಾಸೋದ್ಯಮವೇ ಬೇಡ ಎಂದರು. ಇದಕ್ಕೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧೀರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಷ್ ಸೇರಿದಂತೆ ಇತರರು ದನಿಗೂಡಿಸಿದರು.

ಅಂತಿಮವಾಗಿ ಸಭೆಯಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ. ಮುಂದಿನ ಹೆಜ್ಜೆಯಾಗಿ ಗ್ರಾಮಾಧ್ಯಕ್ಷರುಗಳು, ಸಂಬAಧಿಸಿದ ಇಲಾಖಾಧಿಕಾರಿಗಳ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲು ಸೂಚಿಸಲಾಯಿತು.

ಸಭೆಯಲ್ಲಿ ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜೀ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುAಡ, ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರುಗಳು ಉಪಸ್ಥಿತರಿದ್ದರು.