ಮಡಿಕೇರಿ, ಸೆ. ೨೭: ಕೃಷಿ ಮಸೂದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಕರೆ ನೀಡಿದ್ದ ಭಾರತ್ ಬಂದ್ ಕೊಡಗಿನ ಮೇಲೆ ಯಾವ ರೀತಿಯೂ ಪರಿಣಾಮ ಬೀರಿಲ್ಲ.ಜಿಲ್ಲೆಯಾದ್ಯಂತ ಸಾರಿಗೆ, ವ್ಯಾಪಾರೋದ್ಯಮ ಸಹಜ ಸ್ಥಿತಿಯಲ್ಲಿತ್ತು. ಖಾಸಗಿ ಬಸ್‌ಗಳು, ಆಟೋಗಳು ಎಂದಿನAತೆ ಸಂಚಾರ ನಡೆಸಿದವು. ತಾ. ೨೭ ರಿಂದ ೬ ಮತ್ತು ೮ನೇ ತರಗತಿ ಆರಂಭಗೊAಡ ಹಿನ್ನೆಲೆ ಬಂದ್‌ನಿAದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದರು. ಬಸ್ ವ್ಯವಸ್ಥೆ ಸಮರ್ಪಕವಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನ ಹಾಗೂ ವಾಹನ ಸಂಚಾರ ಇಂದು ಹೆಚ್ಚಿತ್ತು. ಮಾರುಕಟ್ಟೆಯಲ್ಲಿ ಕೆಲಗಂಟೆ ವರ್ತಕರು ಅಂಗಡಿ ಮುಚ್ಚಿದ್ದರು ಹೊರತುಪಡಿಸಿ ಬೇರೆಲ್ಲೂ ಯಾವುದೇ ಅಂಗಡಿಗಳು ಮುಚ್ಚಲ್ಪಟ್ಟಿದ್ದು ಕಂಡುಬAದಿಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ಜನಜೀವನ ಎಂದಿನAತಿತ್ತು.ಮಡಿಕೇರಿ ಸೇರಿದಂತೆ ತಾಲೂಕು ಕೇಂದ್ರ, ಹೋಬಳಿ, ಗ್ರಾಮ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರಕಾರದ ನಡೆಯನ್ನು ಪ್ರತಿಭಟನಾನಿರತರು ವಿರೋಧಿಸಿದರು. ಮಡಿಕೇರಿಯಲ್ಲಿ ಮಳೆಯ ನಡುವೆ ಪ್ರತಿಭಟನೆ ನಡೆಯಿತು. ಗೋಣಿಕೊಪ್ಪ ದಿಂದ ಆಗಮಿಸಿದ ರೈತರ ವಾಹನ ಮಡಿಕೇರಿಗೆ ತಲುಪಿ ಬಳಿಕ ಜ. ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಈ ನಡುವೆ ಡಿ.ಸಿ. ಕಚೇರಿಗೆ ಮನವಿ ಸಲ್ಲಿಸಲು ತೆರಳಿದಾಗ ಪ್ರವೇಶ ನಿರಾಕರಣೆ ಹಿನ್ನೆಲೆ ರೈತ ಸಂಘ ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಯಿತು. ಬಲವಂತವಾಗಿ ಅಂಗಡಿ ಮುಚ್ಚಿಸುತ್ತಿದ್ದಾರೆ ಎಂದು ಪೊಲೀಸರು ಮಡಿಕೇರಿಯ ಅಮೀನ್ ಮೊಹ್ಸಿನ್ ಹಾಗೂ ತೆನ್ನೀರ ಮೈನಾ ಅವರನ್ನು ಬಂಧಿಸಿದ ಘಟನೆ ನಡೆಯಿತು.

ನಗರದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಿ ಸೂಕ್ತ ಭದ್ರತೆ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.

ಸೋಮವಾರಪೇಟೆ: ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ರೈತಪರ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಕರೆಗೆ ಸೋಮವಾರಪೇಟೆಯಲ್ಲಿ ಪೂರಕ ಸ್ಪಂದನ ವ್ಯಕ್ತವಾಗಲಿಲ್ಲ.

ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಜನಜೀವನವೂ ಎಂದಿನAತೆ ಸಾಗಿತು. ಪಟ್ಟಣದ ವರ್ತಕರ ಸಂಘ ಯಾವುದೇ ಬೆಂಬಲ ನೀಡದ ಹಿನ್ನೆಲೆ ವ್ಯಾಪಾರ ವಹಿವಾಟು ಅಬಾದಿತ ವಾಗಿತ್ತು. ಇನ್ನು ವಾರದ ಸಂತೆ ದಿನವಾಗಿದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ಜನಜಂಗುಳಿ ಕಂಡುಬAತು. ಗ್ರಾಮೀಣ ಪ್ರದೇಶಗಳಲ್ಲೂ ಜನಜೀವನ ಎಂದಿನAತೆ ಸಾಗಿತು. ಸರ್ಕಾರಿ ಸೇರಿದಂತೆ ಖಾಸಗಿ ಬಸ್‌ಗಳು, ಆಟೋಗಳ ಸಂಚಾರಕ್ಕೆ ಯಾವುದೇ ತಡೆಬಿದ್ದಿರಲಿಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಎಂದಿನAತೆ ತೆರಳಿದರು.

ಸರ್ಕಾರಿ ಕಚೇರಿ, ಬ್ಯಾಂಕ್‌ಗಳೂ ಸಹ ತೆರೆದಿದ್ದವು. ಒಟ್ಟಾರೆ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಸ್ಥಳೀಯ ರೈತ ಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

(ಮೊದಲ ಪುಟದಿಂದ)

ಸೋಮವಾರಪೇಟೆ: ಭಾರತ್ ಬಂದ್‌ಗೆ ಕರೆ ನೀಡಿದ್ದ ರೈತಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇಲ್ಲಿನ ವಿವೇಕಾನಂದ ವೃತ್ತದಿಂದ ಮೆರವಣಿಗೆ ಮೂಲಕ ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ ರೈತರು, ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮಸೂದೆ ರೈತ ವಿರೋಧಿಯಾಗಿದೆ. ಇದನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಯಶಂಕರ್, ೧೦ ಹೆಚ್.ಪಿ.ವರೆಗಿನ ಕಾಫಿ ಬೆಳೆಗಾರರ ವಿದ್ಯುತ್ ಶುಲ್ಕ ರದ್ದುಗೊಳಿಸಬೇಕು. ಕಾಫಿಯನ್ನು ಕೃಷಿ ಎಂದು ಪರಿಗಣಿಸಿ ಉಚಿತವಾಗಿ ವಿದ್ಯುತ್ ನೀಡಬೇಕು. ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು. ರೈತರ ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.

ವಿದ್ಯುತ್ ನೋಂದಾವಣಿ ಶುಲ್ಕ ಹೊರ ಜಿಲ್ಲೆಗಳಲ್ಲಿ ೫೦೦ ಇದ್ದು, ಕೊಡಗಿನಲ್ಲಿ ಒಂದು ಹೆಚ್.ಪಿ.ಗೆ ೩ ಸಾವಿರ ನಿಗದಿ ಮಾಡಿದ್ದಾರೆ. ಇದನ್ನು ಸರಿಪಡಿಸಬೇಕು. ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿಪಡಿಸಬೇಕು. ರೈತರ ಕಾಮಗಾರಿಗಳಿಗೆ ಉಚಿತ ಮರಳು ನೀಡಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಜಾರಿಗೆ ತರಬೇಕು. ಅಡಿಕೆ ಬೆಳೆಗೆ ಆಮದು ಶುಲ್ಕ ನಿಷೇಧಿಸಿರು ವಂತೆ ಕರಿಮೆಣಸು ಬೆಳೆಗೂ ಅನ್ವಯವಾಗಬೇಕು. ರೈತರ ಜಮೀನಿಗೆ ಇಂಗು ಗುಂಡಿ ನಿರ್ಮಿ¸ Àಬೇಕು. ವಿದ್ಯುತ್ ಇಲಾಖೆ, ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರದ ಅಂಗಸAಸ್ಥೆ ಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು. ರೈತ ಹೋರಾಟ ಸಮಿತಿಯ ಲಿಂಗೇರಿ ರಾಜೇಶ್, ದಿನೇಶ್ ಮಾತನಾಡಿದರು. ನಂತರ ಜೇಸೀ ವೇದಿಕೆಯಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ತಾಲೂಕು ತಹಶಿಲ್ದಾರ್ ಗೋವಿಂದ ರಾಜು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಶಂಕರ, ಕಾರ್ಯದರ್ಶಿ ಸತೀಶ್, ಲಕ್ಕಪ್ಪ, ಯಡೂರು ಕುಶಾಲಪ್ಪ, ಹಾನಗಲ್‌ಶೆಟ್ಟಳ್ಳಿ ದಯಾನಂದ, ಗೌಡಳ್ಳಿ ಹೂವಯ್ಯ, ಐಗೂರು ಸುಬ್ಬಯ್ಯ, ಗರಗಂದೂರು ಲಕ್ಷö್ಮಣ, ತಲ್ತರೆ ರಾಜಪ್ಪ, ಯಡೂರು ಲತೀಶ್, ಕಾರ್ಯಪ್ಪ, ಬಗ್ಗನ ಅನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ನಗರಾಧ್ಯಕ್ಷ ಹೆಚ್.ಎ. ನಾಗರಾಜು, ಎಸ್.ಎಂ. ಡಿಸಿಲ್ವಾ, ಜುನೈದ್ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಜಿಲ್ಲಾ ರೈತ ಹೋರಾಟ ಸಮಿತಿ, ಕಾಫಿ ಬೆಳೆಗಾರರ ಹೋರಾಟ ಸಮಿತಿ, ಗೌಡಳ್ಳಿ-ದೊಡ್ಡಮಳ್ತೆ ರೈತ ಹೋರಾಟ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.*ವೀರಾಜಪೇಟೆ: ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕೆAದು ಆಗ್ರಹಿಸಿ ವೀರಾಜಪೇಟೆ ಐಕ್ಯ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಾಷ್ಟçಪತಿಗಳಿಗೆ ತಲುಪಿಸುವಂತೆ ಪ್ರಬಾರ ತಹಶೀಲ್ದಾರ್ ಟಿ.ಎಂ ಪ್ರಕಾಶ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕು. ದೇಶದ ಬೆನ್ನಲುಬಾಗಿರುವ ರೈತರು ಕಳೆದ ಹತ್ತು ತಿಂಗಳಿನಿAದ ಹೋರಾಟ ನಡೆಸುತ್ತಾ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸುತ್ತಿರು ವುದು ಖಂಡನೀಯ ಎಂದರು.

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಮತೀನ್ ಮಾತನಾಡಿ, ಕೇಂದ್ರ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಿ ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದು ಖಂಡನಾರ್ಹ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಹೇಳಿದರು. ಸಿ.ಪಿ.ಐ ಸಂಘಟನೆಯ ಕೆ.ವಿ ಸುನಿಲ್ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷ, ಜೆಡಿಎಸ್, ಭಾರತ ಕಮ್ಯುನಿಸ್ಟ್ ಪಕ್ಷ, ಎ.ಐ,ವೈ.ಎಫ್ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ವೆಲಫೇರ್ ಪಾರ್ಟಿ ಆಫ್ ಇಂಡಿಯಾ, ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ, ಯುನೈಟೆಡ್ ಪ್ಲಾಂಟೇಶನ್ ವರ್ಕರ್ಸ್ ಯೂನಿಯನ್, ಕಟ್ಟಡ ಕಾರ್ಮಿಕರ ಸಂಘಟನೆ, ಮುಖಂಡರು, ಕಾರ್ಯಕರ್ತರು ಗಡಿಯಾರ ಕಂಬದ ಬಳಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆ ವೇಳೆ, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ), ಹೆಚ್.ಆರ್ ಶಿವಣ್ಣ, ಪರಶುರಾಮ, ಪಟ್ಟಣ ಪಂಚಾಯತ್ ಸದಸ್ಯ ರಜನಿಕಾಂತ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೆ.ಟಿ ಬಶೀರ್, ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ ಮಂಜುನಾಥ್, ಸಿಐಟಿಯು ಸಂಘಟನೆಯ ಸೋಮಪ್ಪ, ಅವರುಗಳು ಮಾತನಾಡಿದರು.

ಪ್ರತಿಭಟನೆಯಲ್ಲಿ, ಪ.ಪಂ ಸದಸ್ಯರುಗಳಾದ ಮೊಹಮ್ಮದ್ ರಾಫಿ,ಸಿ.ಕೆ ಪೃಥ್ವಿನಾಥ್, ಡಿ.ಪಿ ರಾಜೇಶ್, ಅಗಸ್ಟಿನ್ ಬೆನ್ನಿ, ಜೆಡಿಎಸ್ ನಗರ ಅಧ್ಯಕ್ಷ ಯೋಗಿಶ್ ನಾಯ್ಡು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. ಬಾರತ್ ಬಂದ್‌ಗೆ ವೀರಾಜಪೇಟೆಯಲ್ಲಿ ನಿರಾಶದಾಯಕ ಪ್ರತಿಕ್ರಿಯೆ ದೊರತಿದ್ದು ದಿನನಿತ್ಯದಂತೆ ವಾಹನಗಳ ಸಂಚಾರ ಇದ್ದು, ಶಾಲಾ, ಕಾಲೇಜು, ಕಚೇರಿಗಳು, ಬ್ಯಾಂಕ್‌ಗಳು ಎಂದಿನAತೆ ಕಾರ್ಯನಿರ್ವಹಿಸಿದವು.

*ಗೋಣಿಕೊಪ್ಪ: ರೈತ ಸಂಘಟನೆಗಳು ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನಾದ್ಯಂತ ನಿರಾಸದಾಯಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತಾಲೂಕಿನ ಬಹುತೇಕ ಭಾಗಗಳಲ್ಲಿ ಎಂದಿನAತೆ ವ್ಯಾಪಾರ ವಹಿವಾಟು, ವಾಹನ ಸಂಚಾರಗಳಿಗೆ ಬಂದ್ ಪರಿಣಾಮವನ್ನು ಬೀರಿರಲಿಲ್ಲ. ಬೆರಳೆಣಿಕೆಯಷ್ಟು ಅಂಗಡಿ ಮಳಿಗೆಗಳು ಸ್ವಯಂ ಪ್ರೇರಿತರಾಗಿ ಮುಚ್ಚಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿತ್ತು. ಉಳಿದಂತೆ ಇರುವ ಎಲ್ಲಾ ವ್ಯವಸ್ಥೆಗಳು ಯಥಾರೀತಿಯನ್ನು ಕಾಯ್ದು ಕೊಂಡಿತು. ಖಾಸಗಿ ಬಸ್ಸ್ಗಳ ಸಂಚಾರ, ಆಟೋ, ಟ್ಯಾಕ್ಸಿ ಸಂಚಾರ ಇದ್ದ ಕಾರಣ ಪ್ರಯಾಣಿಕರಿಗೂ ಸಮಸ್ಯೆ ಎದುರಾಗಿರಲಿಲ್ಲ. ಬಂದ್ ಕರೆ ನೀಡಿದ ಹಿನ್ನೆಲೆ ಬಹುತೇಕ ಜನ ಬಂದ್ ಇದೆಯೋ, ಇಲ್ಲವೋ ಎಂಬ ಗೊಂದಲದಲ್ಲಿಯೇ ಪಟ್ಟಣಗಳತ್ತ ಬರಲು ನಿರ್ಲಕ್ಷ÷್ಯ ಮನೋಭಾವವನ್ನು ತಾಳಿದ್ದು ಬಿಟ್ಟರೆ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಕಂಡುಬರಲಿಲ್ಲ. ಕಾರ್ಮಿಕರು ಸಹ ಎಂದಿನAತೆ ವಾಹನಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಬಂದ್‌ನ ಆತಂಕ ವಿಲ್ಲದೆ ತೆರಳಿದರು. ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಪಾಲಿಬೆಟ್ಟ, ಬಿಟ್ಟಂಗಾಲ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಿರುನಾಣಿ, ಕಾನೂರು, ನಾಲ್ಕೇರಿ, ಶೆಟ್ಟಿಗೇರಿ, ಬಾಳೆಲೆ, ಪೊನ್ನಪ್ಪಸಂತೆ ಭಾಗಗಲ್ಲಿಯೂ ಬಂದ್‌ಗೆ ಬೆಂಬಲ ದೊರೆತ್ತಿಲ್ಲ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಕಿಸಾನ್ ಮೋರ್ಚಾ ಕರೆ ನೀಡಿದ್ದ ಬಂದ್ ಗೆ ಬೆಂಬಲಿಸಿ ರೈತ ಸಂಘಟನೆಗಳು, ಕಾಂಗ್ರೆಸ್ ಪಕ್ಷ ಹಾಗೂ ಕಿಗ್ಗಟ್ ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಾ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆಯಲ್ಲಿ ರೈತ ಸಂಘದ ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಪಿ. ಸೂರಜ್, ಉಮೇಶ್ ಕೇಚಮಯ್ಯ, ಕಿಗ್ಗಟ್ ನಾಡ್ ಹಿರಿಯ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾಂಗ್ರೆಸ್ ಮುಖಂಡ ಕೊಲ್ಲಿರ ಬೋಪಣ್ಣ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ತಾ.ಪಂ. ಮಾಜಿ ಸದಸ್ಯ ಶಾಜಿ ಅಚ್ಚುತನ್, ಪೊನ್ನಂಪೇಟೆ ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ಸದಸ್ಯರು. ಹುದಿಕೇರಿ, ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಕುಂದ , ಕಿರುಗೂರು, ಮತ್ತೂರು ಹಾಗೂ ಇನ್ನಿತರ ಭಾಗದ ರೈತ ಮುಖಂಡರು, ಕಿಗ್ಗಟ್ ನಾಡ್ ಹಿರಿಯ ನಾಗರಿಕ ವೇದಿಕೆಯವರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪೊನ್ನಂಪೇಟೆಯಲ್ಲಿ ವ್ಯಾಪಾರ ವಹಿವಾಟು ಹಾಗೂ ವಾಹನ ಸಂಚಾರ ಸಹಜವಾಗಿತ್ತು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಕುಶಾಲನಗರ: ಕೇಂದ್ರ ಸರ್ಕಾರÀ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಕುಶಾಲನಗರದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ, ಎಂದಿನAತೆ ವ್ಯಾಪಾರ ವಹಿವಾಟುಗಳು ನಡೆದಿದ್ದು ಕೆ.ಎಸ್.ಆರ್.ಟಿ ಸಿ, ಖಾಸಗಿ ಬಸ್, ಆಟೋ ಟ್ಯಾಕ್ಸಿಗಳು ಎಂದಿನAತೆ ಕಾರ್ಯನಿರ್ವಹಿಸಿದವು.

ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡ ವಿ.ಪಿ ಶಶಿಧರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಹೃದಯಭಾಗದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಜೆಡಿಎಸ್ ರೈತಸಂಘ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು ಬಳಿಕ ಕುಶಾಲನಗರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ವೇಳೆ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ಸಿ ಎಲ್ ವಿಶ್ವ ,ಭೀಮವಾದ ಮತ್ತು ದಲಿತ ಸಂಘರ್ಷ ಸಮಿತಿಯ ಕೆ.ಬಿ ರಾಜು,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಾರಾವ್, ಕರವೇ ನಾರಾಯಣಗೌಡ ಬಣದ ವೆಂಟೇಶ್ ಪೂಜಾರಿ ಸೇರಿದಂತೆ ಕರ್ನಾಟಕ ರಾಜ್ಯ, ರೈತ ಸಂಘದ ವತಿಯಿಂದ ಆಗಮಿಸಿದ್ದ ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯ ರೈತ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸುAಟಿಕೊಪ್ಪ : ಭಾರತ್ ಬಂದ್ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ನಗರದಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ. ಎಲ್ಲಾ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಿದವು. ಸುಂಟಿಕೊಪ್ಪ ಪಟ್ಟಣ ಸಹಜ ಸ್ಥಿತಿಯಲ್ಲಿ ಕಂಡು ಬಂತು.ಗೋಣಿಕೊಪ್ಪ : ದಕ್ಷಿಣ ಕೊಡಗಿನಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಣಿಜ್ಯ ನಗರ ಗೋಣಿಕೊಪ್ಪಲಿನಲ್ಲಿ ರೈತ ಸಂಘ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ, ರಾಜಕೀಯ ರಹಿತವಾಗಿ ಬಂದ್ ಮಾಡುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಮಧ್ಯಾಹ್ನ ಒಂದು ಗಂಟೆಯ ನಂತರ ಅಂಗಡಿ ಮುಂಗಟ್ಟುಗಳು ಎಂದಿನAತೆ ತೆರೆದು ವಹಿವಾಟು ನಡೆಸಿದವು.

ಗ್ರಾಮೀಣ ಭಾಗದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಾಗಿ ಬಸ್‌ಗಳಲ್ಲಿ ಆಗಮಿಸಿದ್ದರು. ಬಸ್ ಸಂಚಾರಕ್ಕೆ ಯಾವುದೇ ಅಡೆತಡೆಗಳು ಉಂಟಾಗಲಿಲ್ಲ. ಖಾಸಗಿ ಬಸ್, ಆಟೋ ರಿಕ್ಷಾ, ಖಾಸಗಿ ವಾಹನಗಳು ಎಂದಿನAತೆ ಸಂಚಾರ ನಡೆಸಿದವು. ಆದರೆ ಜನರ ಓಡಾಟ ಅಷ್ಟಾಗಿ ಕಂಡುಬAದಿಲ್ಲ.

ಶನಿವಾರಸಂತೆ : ಪಟ್ಟಣದಲ್ಲಿ ರೈತಪರ ಕಾಳಜಿಯಿಂದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಸಂಪೂರ್ಣ ವಿಫಲವಾಗಿದ್ದು, ಜನ ಜೀವನ ಎಂದಿನAತಿತ್ತು. ಎಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟು, ಹೊಟೇಲ್‌ಗಳು ತೆರೆದಿದ್ದವು. ಖಾಸಗಿ - ಸರ್ಕಾರಿ ಬಸ್‌ಗಳು ಇತರ ವಾಹನಗಳು ಎಂದಿನAತೆ ಸಂಚರಿಸಿದವು. ಶಾಲಾ - ಕಾಲೇಜು ತೆರೆದಿದ್ದು, ೬ ರಿಂದ ೮ನೇ ತರಗತಿ ಶಾಲೆಗಳು ಆರಂಭವಾದವು. ಬ್ಯಾಂಕ್, ಅಂಚೆ ಕಚೇರಿ, ಕಂದಾಯ ಇಲಾಖೆ ಇತರ ಕಚೇರಿಗಳಲ್ಲೂ ನೌಕರರು ಕರ್ತವ್ಯ ನಿರ್ವಹಿಸಿದರು.

ಕೊಡ್ಲಿಪೇಟೆ ಹೋಬಳಿಯಲ್ಲೂ ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲೂ ಜನಜೀವನ ಮಾಮೂಲಿನಂತೆ ಇತ್ತು. ಸಂಯುಕ್ತ ಕಿಸಾನ್ ಮೋರ್ಚಾ ಬಂದ್ ಕರೆಗೆ ೨ ಹೋಬಳಿಗಳಲ್ಲೂ ಯಾವ ರೈತಪರ ಸಂಘಟನೆಗಳು ಬೆಂಬಲ ಸೂಚಿಸಲಿಲ್ಲ. ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಇಲ್ಲಿ ರೈತರೇ ಇಲ್ಲ. ರೈತ ಸಂಘಗಳೇ ಇಲ್ಲ. ಎಲ್ಲಾ ಶ್ರೀಮಂತ ಬೆಳೆಗಾರರೇ ಹಾಗಾಗಿ ಬಂದ್ ಇಲ್ಲ ಎಂದು ಮಹಿಳಾ ಉದ್ಯಮಿ ಶಾಲಿನಿ ವ್ಯಂಗ್ಯವಾಡಿದರು.ಕಡAಗ: ಪಟ್ಟಣದಲ್ಲಿ ಭಾರತ ಬಂದ್ ಸಂಪೂರ್ಣ ವಿಫಲವಾಗಿದ್ದು, ಜನಜೀವನ ಎಂದಿನAತೆ ಇತ್ತು. ಅಂಗಡಿ ಮುಂಗಟ್ಟುಗಳು ಹೊಟೇಲ್‌ಗಳು ತೆರೆದಿದ್ದವು. ಸರ್ಕಾರಿ ಬಸ್ಸು ಮತ್ತು ಇತರ ಖಾಸಗಿ ಬಸ್ಸುಗಳು ಎಂದಿನAತೆ ಸಂಚರಿಸಿದವು ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಂದಿನAತೆ ಶಾಲೆಗೆ ತೆರಳಿದರು.

ಸಿದ್ದಾಪುರ: ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿದ್ದಾಪುರದಲ್ಲಿ ಸಿಪಿಐ(ಎಂ) ಪಕ್ಷದ ವತಿಯಿಂದ ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ ಮಾತನಾಡಿ ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಬಡ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವು ಅನಗತ್ಯವಾಗಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. ಸಿಪಿಐ(ಎಂ) ಪಕ್ಷದ ಪ್ರಮುಖರಾದ ಹೆಚ್.ಪಿ ರಮೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳಾದ ಸಿ.ಯು ಮುಸ್ತಫಾ, ಶಾಲಿ ಪೌಲೋಸ್, ಅನೀಫ ಇನ್ನಿತರರು ಹಾಜರಿದ್ದರು.

ಸಿದ್ದಾಪುರದಲ್ಲಿ ಸಹಜ ಸ್ಥಿತಿ: ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ದಿನವಾದ ಸೋಮವಾರದಂದು ಎಂದಿನAತೆ ವಾಹನಗಳ ಸಂಚಾರ ಇತ್ತು. ಯಾವುದೇ ಅಂಗಡಿ ಮುಂಗಟ್ಟುಗಳು ಮುಚ್ಚಿರಲಿಲ್ಲ. ಬಸ್‌ಗಳ ಸಂಚಾರ ಸೇರಿದಂತೆ ಜನರ ಓಡಾಟ ಸಹಜ ಸ್ಥಿತಿಯಲ್ಲಿ ಕಂಡು ಬಂದಿತ್ತು.