ನಾಪೋಕ್ಲು, ಸೆ. ೨೬: ನಾಪೋಕ್ಲುವಿನ ನಾಲ್ಕುನಾಡು ಪ್ರಾಂರ‍್ಸ್ ಅಸೋಸಿಯೇಷನ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆಯನ್ನು ಅಕ್ಟೋಬರ್ ೨೩ ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ತಿಳಿಸಿದರು.

ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಜೂನಿಯರ್ ಕಾಲೇಜು ಮೈದಾನದಲ್ಲಿ ಇದಕ್ಕೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ ಅವರು, ಈ ಸ್ಪರ್ಧೆ ನಾಲ್ಕು ವಿಭಾಗದಲ್ಲಿ ನಡೆಯಲಿದ್ದು, ಪಾಯಿಂಟ್ .೨೨, ೧೨ನೇ ಬೋರ್ (ತೋಟದ ಕೋವಿ) ಮತ್ತು ಏರ್‌ಗನ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದು ಮುಕ್ತವಾಗಿದ್ದು ಇದರಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ. .೨೨ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಮೊದಲ ಬಹುಮಾನ ರೂ. ೫೦ ಸಾವಿರ, ಎರಡನೇ ಬಹುಮಾನ ರೂ. ೩೦ ಸಾವಿರ ಮತ್ತು ಮೂರನೆ ರೂ. ೨೦ ಸಾವಿರ ನಗದು. ೧೨ ಬೋರ್ ತೋಟದ ಕೋವಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಮೊದಲ ರೂ. ೧೦ ಸಾವಿರ, ೨ನೇ ರೂ. ೭ ಸಾವಿರ, ೩ನೇ ರೂ. ೫ ಸಾವಿರ ಅದರಂತೆ ಏರ್‌ಗನ್ ಸ್ಪರ್ಧೆಗೆ ಮೊದಲ ರೂ. ೫ ಸಾವಿರ, ೨ನೇ ರೂ. ೩ ಸಾವಿರ ಮತ್ತು ಮೂರನೇ ರೂ. ೨ ಸಾವಿರ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ಅರೆಯಡ ರತ್ನ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕಪೂವಂಡ ಅಪ್ಪಚ್ಚು, ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ಸದಸ್ಯರಾದ

ಅರೆಯಡ ಅಶೋಕ, ಬಡಕಡ ಸುರೇಶ್ ಬೆಳ್ಯಪ್ಪ, ಕೇಟೋಳಿರ ಶಮ್ಮಿ, ಚೋಕಿರ ರೋಷನ್, ಕೇಟೋಳಿರ ವಿನೋದ್, ಚೇನಂಡ ಸುರೇಶ್ ನಾಣಯ್ಯ, ಕುಂಡ್ಯೋಳAಡ ಬೋಪಣ್ಣ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬೊಳ್ಳಚೆಟ್ಟೀರ ಸುರೇಶ್ ಇದ್ದರು.

-ದುಗ್ಗಳ