ಮಡಿಕೇರಿ, ಸೆ. ೨೫: ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಕಾಯಿದೆಗಳ ವಿರುದ್ಧ ರೈತರು ದೆಹಲಿಯಲ್ಲಿ ಕಳೆದ ೧೦ ತಿಂಗಳುಗಳಿAದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲವಾಗಿ ತಾ.೨೭ರಂದು ಭಾರತ್ ಬಂದ್‌ಗೆ ಕರೆಕೊಡಲಾಗಿದ್ದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ. ಕೊಡಗು ಘಟಕ ದೆಹಲಿಯ ರೈತ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಜೆಡಿಎಸ್ ಬೆಂಬಲ

ತಾ. ೨೭ರಂದು ನಡೆಯಲಿರುವ ಭಾರತ ಬಂದ್‌ಗೆ ಕೊಡಗು ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷ ಬೆಂಬಲ ನೀಡಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.

ಪೊನ್ನಂಪೇಟೆ: ಕೇಂದ್ರ ಸರ್ಕಾರದ ಕೃಷಿಕಾಯ್ದೆಗಳನ್ನು ವಿರೋಧಿಸಿ, ರೈತ ಸಂಘಟನೆಗಳ ಒಕ್ಕೂಟ ಕಿಸಾನ್ ಮೋರ್ಚಾ ತಾ.೨೭ ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ಪೊನ್ನಂಪೇಟೆ ಶ್ರೀ ನಂದೀಶ್ವರ ಆಟೋ ಚಾಲಕರ ಮಾಲೀಕರ ಸಂಘ ಹಾಗೂ ವಿಘ್ನೇಶ್ವರ ವಾಹನ ಚಾಲಕ ಮಾಲೀಕರ ಸಂಘ ಬೆಂಬಲ ನೀಡಿರುವುದಾಗಿ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ. ಪೊನ್ನಂಪೇಟೆ ರಾಮಕೃಷ್ಣ ಮಿನಿ ಸರಕು ಸಾಗಣೆ ವಾಹನ ಚಾಲಕ ಮಾಲೀಕರ ಸಂಘವೂ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಚೊಟ್ಟೆಕಾಳಪಂಡ ಮನು ತಿಳಿಸಿದ್ದಾರೆ.

ಬಂದ್‌ಗೆ ಕೊಡಗು ಸಾಮೂಹಿಕ ನಾಯಕತ್ವದ ರೈತಸಂಘದಿAದ ಬೆಂಬಲ ಸೂಚಿಸಲಾಗುವುದು ಎಂದು ಕೊಡಗು ಸಾಮೂಹಿಕ ನಾಯಕತ್ವದ ರೈತಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೆಲ್ಫೇರ್ ಪಾರ್ಟಿ ಬೆಂಬಲ

ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಅಡುಗೆ ಅನಿಲ ಇಂಧನ ದರ ಇಳಿಸಬೇಕು ಎಂದು ಒತ್ತಾಯಿಸಿ ತಾ. ೨೭ ರಂದು ಕರೆ ನೀಡಲಾಗಿರುವ ಭಾರತ ಬಂದ್‌ಗೆ ಕೊಡಗು ಜಿಲ್ಲಾ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ಸೂಚಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಟಿ. ಬಶೀರ್ ತಿಳಿಸಿದ್ದಾರೆ.

ಬೆಲೆ ಏರಿಸಿ ಸರಕಾರ ಜನಸಾಮಾನ್ಯರಿಗೆ ಗದಪ್ರಹಾರವನ್ನು ನಡೆಸಿದೆ. ಈಗಾಗಿ ಎಲ್ಲ ವರ್ಗದವರು ಬಂದ್‌ಗೆ ಸಹಕರಿಸುವಂತೆ ಕೋರಿದರು.