ಮಡಿಕೇರಿ, ಸೆ. ೨೫: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕನ್ನಡ ಸಿರಿ ಕ.ಸಾ.ಪ ಬಳಗದಿಂದ ‘ರಾಷ್ಟಿçÃಯ ಶಿಕ್ಷಣ ನೀತಿ ಮತ್ತು ನಾವು’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಎ-೪ ಅಳತೆಯ ಹಾಳೆಯಲ್ಲಿ ೨,೫೦೦ ಪದಗಳಿಂದ ೩,೦೦೦ ಪದಗಳೊಳಗೆ ಹಾಳೆಯ ಒಂದೇ ಬದಿಯಲ್ಲಿ ಪ್ರಬಂಧ ಬರೆದು ತಾ.೨೭ ರೊಳಗೆ ಅಂಚೆ ಮೂಲಕ ಅಥವಾ ಖುದ್ದಾಗಿ ವಿಳಾಸ: ಲೋಕೇಶ್ ಸಾಗರ್, ಸಾಗರ್ ಸ್ಪೋರ್ಟ್ಸ್, ಕೆನರಾ ಬ್ಯಾಂಕ್ ಹತ್ತಿರ, ಬಿ.ಎಂ ರಸ್ತೆ, ಕುಶಾಲನಗರ ೫೭೧೨೩೪ - ಇಲ್ಲಿಗೆ ತಲುಪಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೯೮೦೯೮೮೧೨೩ ಅನ್ನು ಸಂಪರ್ಕಿಸಬಹುದು.