ಕಣಿವೆ, ಸೆ. ೨೪: ಆನೆಚೌಕೂರು ರಾಜ್ಯ ಹೆದ್ದಾರಿ ಬದಿಯಲ್ಲಿ ಶುಕ್ರವಾರ ಬೆಳಿಗ್ಗೆ ಕಾಡಾನೆಯೊಂದು ಹೆದ್ದಾರಿ ಹೋಕರಿಗೆ ಗೋಚರಿಸಿತು. ಹೆಸರೇ ಹೇಳುವಂತೆ ಈ ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕರು ಆನೆಚೌಕೂರು ಬಳಿ ಬಂದೊಡನೆ ಕಾಡಾನೆಗಳನ್ನು ನೋಡುವ ತವಕದಿಂದ ಒಂದು ಕ್ಷಣ ತಮ್ಮ ದೃಷ್ಟಿಯನ್ನು ಇಲ್ಲಿನ ಸೃಷ್ಟಿಯೊಳಗೆ ಬೀರುವುದು ವಾಡಿಕೆ.

ಒಂದೇ ದಂತವನ್ನು ಹೊಂದಿದ್ದ ಈ ಏಕದಂತ ಗಣೇಶ ಸಂಕಷ್ಟಹರ ಚತುರ್ಥಿಯ ದಿನದಂದು ಪ್ರತ್ಯಕ್ಷಗೊಂಡ ಸಂದರ್ಭ ರಸ್ತೆ ಹೋಕ ಕೆಲವು ವಾಹನ ಸವಾರರು ಭೀತಿಯನ್ನು ಬಿಟ್ಟು ವಾಹನಗಳ ವೇಗವನ್ನು ನಿಯಂತ್ರಿಸಿ ಪ್ರೀತಿಯಿಂದ ಬಾಗಿ ನಮಸ್ಕರಿಸಿ ಮುಂದೆ ಸಾಗುತ್ತಿದ್ದ ಚಿತ್ರಣ ‘ಶಕ್ತಿ’ಗೆ ಗೋಚರಿಸಿತು.

ಎರಡು ದಂತವನ್ನು ಹೊಂದಿದ್ದ ಈ ಸಲಗ ಬಹುಶಃ ಮದಗಜಗಳ ಕಾದಾಟದಲ್ಲಿ ದಂತವೊAದನ್ನು ಕಳೆದುಕೊಂಡಿರಬಹುದು....! - ಮೂರ್ತಿ