ಮಡಿಕೇರಿ, ಸೆ. ೨೪: ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಸಪ್ತಗಿರಿ ಎಂಟರ್‌ಪ್ರೆöÊಸಸ್‌ನ ಅಂಬೆಕಲ್ ಜೀವನ್ ಪುನರಾಯ್ಕೆಯಾಗಿದ್ದಾರೆ. ನಗರದಲ್ಲಿ ಆಯೋಜಿತ ಸಂಘದ ೨೩ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಎ.ಕೆ. ಜೀವನ್, ಗೌರವ ಕಾರ್ಯದರ್ಶಿಯಾಗಿ ಡಿ.ಐ. ಪುರುಷೋತಮ, ಖಚಾಂಚಿ ಪ್ರಸಾದ್‌ಗೌಡ, ಜಂಟಿ ಕಾರ್ಯದರ್ಶಿಯಾಗಿ ಕೆ. ವಸಂತಕುಮಾರ್, ಉಪಾಧ್ಯಕ್ಷರಾಗಿ ಎ.ಕೆ. ವಿನೋದ್ ಮತ್ತು ಮೆರ್ವಿನ್ ಫೆರ್ನಾಂಡಿಸ್ ಪುನರ್ ಆಯ್ಕೆಯಾಗಿದ್ದಾರೆ.
ಕೊಡಗು-ಮೈಸೂರು ವೃತ್ತದ ಉಪ ಔಷಧಿ ನಿಯಂತ್ರಕ ಅರುಣ್, ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಗುರುನಾಥ ಮಾಗಣಗೇರಿ ಸಭೆಯಲ್ಲಿ ಔಷಧಿ ಮತ್ತು ಕಾಂತಿವರ್ಧಕದ ಬಗ್ಗೆ ಮಾಹಿತಿ ನೀಡಿದರು. ಸರಕಾರದ ಹಾಲಿ ಔಷಧಿ ನಿಯಮಗಳ ಬಗ್ಗೆ ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು.
ಔಷದ ವ್ಯಾಪಾರದ ಜೊತೆಗೆ ಸಮಾಜ ಸೇವೆ, ಸಾಹಿತ್ಯ, ರಾಜಕೀಯ ಕ್ಷೇತ್ರದಲ್ಲಿ ಗುರುತರ ಸೇವೆ ಸಲ್ಲಿಸಿದ ಸಾಧಕರನ್ನೂ ಈ ಸಂದರ್ಭ ಗೌರವಿಸಲಾಯಿತು. ಮಡಿಕೇರಿಯ ಪ್ರಸಾದ್ ಗೌಡ, ನಾಪೋಕ್ಲವಿನ ಮನ್ಸೂರ್, ಸೋಮವಾರಪೇಟೆಯ ವಿಜೇತ್, ಗೋಣಿಕೊಪ್ಪ ಮಧುಕುಮಾರ್, ಸಾಮಾಜಿಕ, ಸಾಹಿತ್ಯ ಸೇವಾ ಕಾರ್ಯಕ್ಕಾಗಿ ಅಂಬೆಕಲ್ ಕುಶಾಲಪ್ಪ, ಸುಶೀಲಾ ಕುಶಾಲಪ್ಪ ಅವರನ್ನು ಸಂಘದ ಪ್ರಮುಖರು ಸನ್ಮಾನಿಸಿದರು.