ಮಡಿಕೇರಿ, ಸೆ. ೨೫: ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಜಿಲ್ಲೆಯಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರನ್ನು ಗುರುತಿಸುವಂತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು, ಅಲ್ಪಸಂಖ್ಯಾತರು, ಮತ್ತು ಸಮುದಾಯಗಳಿರುವ ಗ್ರಾಮಗಳಲ್ಲಿ ೧೨ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಮಾಹಿತಿ ನೀಡಿದರು. ಸಮೀಕ್ಷೆ ನಡೆಸಲು ೨೦೧೭ ರಲ್ಲಿ ಎನ್.ಜಿ.ಒ.ಗಳ, ಎಂಎಸ್ಡಬ್ಲೂö್ಯ ವಿದ್ಯಾರ್ಥಿಗಳ ಸಹಾಯ ಪಡೆಯಲಾಗಿತ್ತು ಈ ಬಾರಿ ಎನ್ಜಿಒ ಅವರಿಂದ ಸಮೀಕ್ಷೆ ಮಾಡಿಸಲು ಉದ್ದೇಶಿಸಲಾಗಿದೆ ಎಂದರು.
ಸಮೀಕ್ಷೆ ವಿಷಯದ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಗಾರವನ್ನು ಎನ್ಜಿಒಗಳಿಗೆ ನಡೆಸಲಾಗುವುದು. ಕಾರ್ಯಗಾರ ಮುಗಿದ ಎರಡು ವಾರಗಳ ಒಳಗಾಗಿ ಸಮೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸಮೀಕ್ಷಾ ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮೇಲ್ವಿಚಾರಣೆ ಮತ್ತು ಟಾಸ್ಕ್ ಫೋರ್ಸ್ ತಂಡಗಳಾಗಿ ರಚಿಸುವುದು. ಸಮೀಕ್ಷಾ ಮೇಲ್ವಿಚಾರಣೆ ತಂಡದಲ್ಲಿ ಪಂಚಾಯತ್ ರಾಜ್ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರೇಷ್ಮೆ ಇಲಾಖೆಗಳು ಕಾರ್ಯ ನಿರ್ವಹಿಸಲಿದ್ದು, ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಗುರುತಿಸಲು ಎನ್ಜಿಒ ಗಳಿಗೆ ಸಹಕರಿಸುವುದು ಮತ್ತು ಮಾಹಿತಿಯನ್ನು ನೀಡುವುದು ಈ ತಂಡದ ಉದ್ದೇಶವಾಗಿದೆ ಎಂದು ಅನಿಲ್ ಬಗಟಿ ಅವರು ಹೇಳಿದರು.
ಸಮೀಕ್ಷಾ ಟಾಸ್ಕ್ ಫೋರ್ಸ್ ತಂಡದಲ್ಲಿ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿದ್ದು. ಸಮೀಕ್ಷಾ ಮೇಲ್ವಿಚಾರಣೆ ತಂಡವು ನೀಡುವ ವರದಿಯ ಆಧಾರದ ಮೇಲೆ ಆಯಾಯ ಸಂಬAಧಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿದೆ ಎಂದರು.
ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರು ಕಂಡುಬAದ ಸಂದರ್ಭದಲ್ಲಿ ಕಾನೂನು ರೀತಿಯ ನಡವಳಿಗೆ ಖುದ್ದು ಅನುಮೋದಿಸಿ ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ನೀಡುವುದು, ಮೇಲ್ವಿಚಾರಣೆ ಮತ್ತು ಟಾಸ್ಕ್ ಫೋರ್ಸ್ ಸಮೀಕ್ಷಾ ತಂಡಗಳ ಕಾರ್ಯವೈಖರಿಯಾಗಿದೆ ಎಂಬ ಮಾಹಿತಿಯನ್ನು ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ನೀಡಿದರು. ಪೌರಾಯುಕ್ತ ರಾಮದಾಸ್, ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು, ಇತರರು ಇದ್ದರು.