ಸೋಮವಾರಪೇಟೆ, ಸೆ. ೨೫: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾ ರಾಷ್ಟಿçÃಯ ಸೇವಾ ಯೋಜನೆ ಘಟಕದಡಿಯಲ್ಲಿ "ಫಿಟ್ ಇಂಡಿಯಾ" ಆಚರಣೆ ಪ್ರಯುಕ್ತ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ವಿಷಯಕ್ಕೆ ಸಂಬAಧಿಸಿದAತೆ ಜಾಗೃತಿ ಜಾಥಾ ನಡೆಯಿತು.

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎನ್. ರಾಜು ಚಾಲನೆ ನೀಡಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನರು ಕಾರ್ಯಕ್ರಮದ ಬಗ್ಗೆ ಅರಿಯಬೇಕಾಗಿದೆ. ಎಲ್ಲರೂ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿನಿತ್ಯ ನಾಲ್ಕರಿಂದ ಐದು ಕಿ.ಮೀ. ನಡಿಗೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಡಿಗೆ ಮತ್ತು ಓಟ ಅತ್ಯಂತ ಸುಲಭವಾದ ವ್ಯಾಯಾಮಗಳಾಗಿವೆ ಎಂದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಬಿ.ಎಂ. ಪ್ರವೀಣ್‌ಕುಮಾರ್, ರಾಷ್ಟಿçÃಯ ಸೇವಾ ಯೋಜನೆ ಸಂಚಾಲಕರಾದ ಕೆ.ಎಚ್. ಧನಲಕ್ಷಿö್ಮÃ, ಆಂಗ್ಲ ವಿಭಾಗದ ಮುಖ್ಯಸ್ಥ ಎಂ.ಎಸ್. ಶಿವಮೂರ್ತಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡಿದ್ದರು.