ಮಡಿಕೇರಿ, ಸೆ. ೨೫: ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಹುಟ್ಟು ಹಬ್ಬದ ಪ್ರಯುಕ್ತ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ನಡೆದ ಮಕ್ಕಳಿಗೆ ಕವಿಯ ನಾಲ್ಕು ನಾಟಕದ ಒಕ್ಕಣೆ (ಸಂಭಾಷಣೆ) ಪೈಪೋಟಿಯಲ್ಲಿ ಕಾಟಿಮಾಡ ಭಾಷಿತ ಪ್ರಥಮ, ಕೋಟೆರ ಸೂರ್ಯ ತಮ್ಮಯ್ಯ ದ್ವಿತೀಯ ಹಾಗೂ ಅಲ್ಲಪಂಡ ದೀಪ್ತಿ ತೃತೀಯ ಸ್ಥಾನ ಪಡೆದುಕೊಂಡರು.
ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಕಾರೆರ ರಂಜು ಅವರ ಪ್ರಾಯೋಜಕತ್ವದಲ್ಲಿ ನಡೆದ ಸ್ಪರ್ಧೆಯ ತೀರ್ಪುಗಾರರಾಗಿ ಚಕ್ಕೇರ ತ್ಯಾಗರಾಜ್ ಅಪ್ಪಯ್ಯ, ಚೆನಿಯಪಂಡ ಮನು ಮಂದಣ್ಣ, ಕಾಯಪಂಡ ಶಶಿ ಸೋಮಯ್ಯ ಅವರು ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಕೋಟೆರ ಸೂರ್ಯ ತಮ್ಮಯ್ಯ, ಕಾಟಿಮಾಡ ಭಾಷಿತ, ಅಲ್ಲಪಂಡ ದೀಪ್ತಿ, ಕರವಂಡ ಕಲ್ಪಿತ, ಚಟ್ಟಂಗಡ ಸುಜಲ, ಕಾಂಡAಡ ಪಲ್ಲವಿ, ಬೊಜ್ಜಂಗಡ ಶ್ರಾವ್ಯ ಸೀತಮ್ಮ ಅವರು ಭಾಗವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಸ್ಪರ್ಧೆಯ ಸಂಚಾಲಕರಾಗಿ ಆಡಳಿತ ಮಂಡಳಿ ನಿರ್ದೇಶಕಿ ಕುಲ್ಲಚಂಡ ವಿನುತ ಕೇಸರಿ ಅವರು ಕಾರ್ಯ ನಿರ್ವಹಿಸಿದರು.