ವೀರಾಜಪೇಟೆ, ಸೆ. ೨೫: ಪೂರ್ವಜರ ಕಾಲದಿಂದ ಪೂಜೆಗೈಯ್ಯಲ್ಪಡುತ್ತಿದ್ದು, ಗುಡಿಯಿಲ್ಲದ ದೈವಗಳಿಗೆ ನೂತನವಾಗಿ ನೆಲೆ ನೀಡಿ ಗುಡಿ ನಿರ್ಮಾಣ ಮಾಡಿ ಭಕ್ತರಿಗೆ ಲೋಕಾರ್ಪಣೆ ಮಾಡಲಾಯಿತು.

ವೀರಾಜಪೇಟೆ ಅಮ್ಮತಿ ಒಂಟಿಅAಗಡಿ ಯಡೂರು, ಗ್ರಾಮದ ಐತಪ್ಪ ಪೂಜಾರಿ ಅವರ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪೂರ್ವಜರ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಪರಿವಾರ ದೈವಗಳಾದ ಪಾಷಾಣಾ ಮೂರ್ತಿ, ಗುಳಿಗ ಮತ್ತು ಸ್ವಾಮಿ ಕೊರಗಜ್ಜ ದೈವಗಳ ದೇವಾತರಾಧನೆಗಳೊಂದಿಗೆ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಕಾಲ ನಡೆದ ಪೂಜಾ ಕೈಂಕರ್ಯಗಳು ತಂತ್ರಿಗಳಾದ ಪಂಡರೀಷ ಭಟ್ ದೈವ ನರ್ತಕ ಹಾಗೂ ಸಂಸ್ಕೃತಿ ಪ್ರತಿಷ್ಠಾನ ಜಯರಾಂ ಬೊಳಿಯ ಮಜಲು ಮತ್ತು ದೇವಾತ ಕರ್ಮಿಗಳ ಸಾನಿಧ್ಯದಲ್ಲಿ ದೈವಗಳಿಗೆ ನೂತನ ಗುಡಿಗಳಿಗೆ ಪೂಜೆಗಳು ನಡೆಯಿತು. ಗಣಪತಿ ಹೋಮ, ರಾಕ್ಷೆÆÃಗ್ನ ಹೋಮ, ಬಲಿಪೂಜೆ ಹಗೇಲು ಸೇವೆ ತಂಬಿಲು ಸೇವೆ ಮತ್ತಿತ್ತರ ಹೋಮಗಳು ನಡೆಯಿತು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಪೂಜಾ ಸಂದÀರ್ಭದಲ್ಲಿ ಮಾತನಾಡಿದ ಹಿರಿಯರಾದ ಐತಪ್ಪ ಪೂಜಾರಿ ಅವರು ನಮ್ಮ ಪೂರ್ವಜರ ಕಾಲದಿಂದ ದೈವಗಳ ಆರಾಧನೆಗಳು ನಡೆದುಕೊಂಡುವ ಬರುತ್ತಿದ್ದು. ದೈವಗಳಿಗೆ ಯಾವುದೇ ರೀತಿಯ ಶಾಶ್ವತ ಗುಡಿಗಳು ಇಲ್ಲಾದಾಗಿತ್ತು. ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಆರಾಧನೆಗಳು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಇದೀಗ ದೈವಗಳಿಗೆ ನೆಲೆ ಗುಡಿ ನಿರ್ಮಾಣ ಮಾಡಿ ಸರ್ವ ಭಕ್ತರಿಗೆ ಅನುವು ಮಾಡಲಾಗಿದೆ. ಗ್ರಾಮಸ್ಥರ, ದಾನಿಗಳ ಮತ್ತು ಕುಟುಂಬಗಳ ಸಹಕಾರದಿಂದ ಶಾಶ್ವತ ನೆಲೆ ಕಂಡಿದೆ ಎಂದು ಹೇಳಿದರು. ಪೂಜಾ ಕೈಂಕರ್ಯದಲ್ಲಿ ಗ್ರಾಮಸ್ಥರು ಸೇರಿದಂತೆ, ಭಕ್ತರು ತಂತ್ರಿಗಳು ಪೂಜಾ ಕರ್ಮಿಗಳು ಕುಟುಂಬದ ಸದಸ್ಯರು ಹಾಜರಿದ್ದರು.