ಮಡಿಕೇರಿ, ಸೆ. ೨೫: ವಿಶ್ವ ಪ್ರವಾಸೋದ್ಯಮ ದಿನಾಚರಣೆ -೨೦೨೧ ರನ್ನು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರದೊಂದಿಗೆ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಮಡಿಕೇರಿ ರಾಜಾಸೀಟು ಉದ್ಯಾನವನದಲ್ಲಿ ತಾ. ೨೭ ರಂದು (ನಾಳೆ) ಬೆಳಗ್ಗೆ ೧೦ ಗಂಟೆಗೆ ಕೊಡಗು ಪ್ರವಾಸೋದ್ಯಮಕ್ಕೆ ಸಂಬAಧಿಸಿದAತೆ ಮುಕ್ತ ಚಿತ್ರಕಲಾ ಸ್ವರ್ಧೆ ಏರ್ಪಡಿಸಲಾಗಿದೆ.
೩ ರಿಂದ ೧೦ ವರ್ಷದೊಳಗಿನವರಗೆ, ೧೧ ವರ್ಷದಿಂದ ೧೫ ವರ್ಷದೊಳಗಿನವರಿಗೆ ಹಾಗೂ ೧೬ ವರ್ಷಕ್ಕೂ ಮೇಲ್ಪಟ್ಟು ಎಲ್ಲರಿಗೂ ಮುಕ್ತ ಅವಕಾಶವಿದೆ. ಸ್ಪರ್ಧೆಗೆ ಹಾಜರಾಗುವ ಸ್ವರ್ಧಿಗಳು ತಮಗೆ ಬೇಕಾಗುವ ಲೇಖನ ಸಾಮಗ್ರಿಗಳನ್ನು ತಾವುಗಳೇ ತರಬೇಕು. ಡ್ರಾಯಿಂಗ್ ಶೀಟ್‌ನ್ನು ಸ್ಥಳದಲ್ಲಿ ನೀಡಲಾಗುವುದು.
ಮುಕ್ತ ಚಿತ್ರಕಲೆ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ. ೯೪೮೦೦೪೦೦೨೩ ಅಥವಾ ೯೫೯೧೨೦೫೮೪೦ ಅನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ್ ಕುಮಾರ್ ಖಂಡೂ ಅವರು ತಿಳಿಸಿದ್ದಾರೆ.