ಮಡಿಕೇರಿ ಸೆ.೨೪ : ಕೊಡವರ ಜನ್ಮಸಿದ್ಧ ಹಕ್ಕುಗಳಿಗೆ ಚ್ಯುತಿಯಾದರೆ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧವಿರುವುದಾಗಿ ಫೆಡರೇಶನ್ ಆಫ್ ಕೊಡವ ಸಮಾಜ ತಿಳಿಸಿದೆ.
ಫೆಡರೇಶನ್ ಆಫ್ ಕೊಡವ ಸಮಾಜದ ವಾರ್ಷಿಕ ಮಹಾಸಭೆ ಬಾಳುಗೋಡಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಕೊಡವರ ಜನ್ಮಸಿದ್ಧ ಹಕ್ಕಾದ ಕೋವಿ ವಿನಾಯ್ತಿಯ ಕುರಿತು ಉಂಟಾಗಿದ್ದ ಗೊಂದಲ ಇದೀಗ ನಿವಾರಣೆಯಾಗಿದೆ. ಕ್ಯಾಪ್ಟನ್ ಯಾಲದಾಳು ಚೇತನ್ ಎಂಬುವವರು ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡು ಕೋವಿ ಹಕ್ಕಿನ ವಿನಾಯಿತಿ ಮುಂದುವರೆದಿರುವುದು ಅತ್ಯಂತ ಹರ್ಷದಾಯಕ ತೀರ್ಪಾಗಿದೆ.
ಕೊಡವರ ನ್ಯಾಯಯುತ ಹಕ್ಕುಗಳಿಗೆ ಮುಂದೆ ಯಾವುದೇ ಅಡಚಣೆಗಳು ಎದುರಾದರೂ ಫೆಡರೇಶನ್ ಆಫ್ ಕೊಡವ ಸಮಾಜ ಕಾನೂನಿನ ಚೌಕಟ್ಟಿನಡಿ ಹೋರಾಟ ನಡೆಸಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ತಿಳಿಸಿದರು.
ಉಪಾಧ್ಯಕ್ಷ ಮಲಚೀರ ಬೋಸ್ ಚೆಟ್ಟಿಯಪ್ಪ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಜಂಟಿ ಕಾರ್ಯದರ್ಶಿ ಮಿದೇರಿರ ನವೀನ್, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಪ್ರಮುಖರಾದ ಮೇರಿಯಂಡ ಸಿ.ನಾಣಯ್ಯ, ಮಲ್ಲೇಂಗಡ ಬೆಳ್ಳಿಯಪ್ಪ, ಮಾಳೇಟೀರ ಅಭಿಮನ್ಯು ಕುಮಾರ್, ಮುಕ್ಕಾಟಿರ ಟಿ.ನಾಣಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗAಡ ದೇವಯ್ಯ ಹಾಜರಿದ್ದರು.