ಗೋಣಿಕೊಪ್ಪ ವರದಿ, ಸೆ. ೨೫: ಶಿಶು ಅಭಿವೃದ್ಧಿ ಪೋಷಣ್ ಮಾಸಾಚರಣೆ ಶ್ರೀಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವರ್ತುಲದ ೧೫ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಸಹಾಯಕಿಯರು ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಆರ್. ರಾಜೇಶ್ ಮಾತನಾಡಿ, ಪೌಷ್ಟಿಕ ಆಹಾರ ಸೇವೆನಯಿಂದ ತಾಯಿ ಮಗುವಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಸವಲತ್ತು ಪಡೆದುಕೊಂಡು ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಕವನ್ಕುಮಾರ್ ಮಾತನಾಡಿ, ಅಪೌಷ್ಟಿಕತೆ ತಡೆಯಲು ಉತ್ತಮ ಆಹಾರ ಪದ್ಧತಿ, ಕಬ್ಬಿಣ ಅಂಶದ ಮಾತ್ರೆ ಸೇವನೆ, ಆರೋಗ್ಯ ಕಾರ್ಯಕರ್ತರ ಸಲಹೆ ಪಾಲಿಸಬೇಕು ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಚೋಕೀರ ಕಲ್ಪನ ತಿಮ್ಮಯ್ಯ, ಸದಸ್ಯೆ ಅಜ್ಜಮಾಡ ಸಾವಿತ್ರಿ, ಆಯುಷ್ ಯೋಗ ತರಬೇತುದಾರ ಅಶ್ವಿನಿ ಅಕ್ಕಮ್ಮ ಇದ್ದರು.