ಗುಡ್ಡೆಹೊಸೂರು, ಸೆ. ೨೫: ಇಲ್ಲಿನ ಗ್ರಾಮ ಪಂಚಾಯಿತಿಯ ೨೦೨೧ನೇ ಸಾಲಿನ ಕೆ.ಡಿ.ಪಿ. ಸಭೆಯು ಸಮುದಾಯ ಭವನದಲ್ಲಿ ಪಂಚಾಯಿತಿ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ನಡೆಯಿತು.

ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು. ಸಂಬAಧಿಸಿದ ಸಮಸ್ಯೆಗಳನ್ನು ಸಿ.ಆರ್.ಪಿ.ಯಾಗಿರುವ ಸತ್ಯನಾರಾಯಣ, ಪಂಚಾಯಿತಿ ವತಿಯಿಂದ ನಡೆಸಬೇಕಾಗಿರುವ ಕಾಮಗಾರಿಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ಕೆಲವು ಮೂಲಭೂತ ಸಮಸ್ಯೆಗಳನ್ನು ಸರಿಪಡಿಸುವ ಭರವಸೆಯನ್ನು ಪಿ.ಡಿ.ಓ. ಶ್ಯಾಂ ನೀಡಿದರು.

ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಮಾದಪಟ್ಟಣ, ಅತ್ತೂರು, ಗುಡ್ಡೆಹೊಸೂರು ಈ ಭಾಗಗಳಲ್ಲಿ ಸಾರ್ವಜನಿಕ ಸ್ಮಶಾನ ಜಾಗವಿಲ್ಲದಿ ರುವ ಬಗ್ಗೆ ನಾಗರಿಕರಿಂದ ಕಂದಾಯ ಇಲಾಖೆ ಗಮನಕ್ಕೆ ತರಲಾಗಿತ್ತು. ಈ ವಿಷಯವನ್ನು ಸಭೆಯಲ್ಲಿ ಸದಸ್ಯ ಪ್ರವೀಣ್, ಶಿವಪ್ಪ ಪ್ರಸ್ತಾಪಿಸಿದರು. ಕಂದಾಯ ಇಲಾಖೆ ಅಧಿಕಾರಿ ಗೌತಮ್ ಉತ್ತರಿಸಿ, ಜಾಗದ ಸರ್ವೆ ಕಾರ್ಯ ಮುಗಿದಿದ್ದು ನೀಲಿನಕ್ಷೆ ತಯಾರಾಗಿದೆ ಎಂದರು.

ಗುಡ್ಡೆಹೊಸೂರಿನ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲಾಗಿದ್ದು, ಈ ವಿಭಾಗದ ಶಾಲಾ ವಿದ್ಯಾರ್ಥಿಗಳು ಇದರ ಲಾಭ ಪಡೆಯುವಂತೆ ಗ್ರಂಥಾಲಯದ ಅಧಿಕಾರಿ ಸೌಮ್ಯ ತಿಳಿಸಿದರು.

ರಸ್ತೆಯ ಬದಿಯಲ್ಲಿರುವ ಮರ ತೆರವುಗೊಳಿಸುವಂತೆ ಸಭೆಯಲ್ಲಿ ಸದಸ್ಯರಾದ ಪ್ರದೀಪ್, ನಿತ್ಯಾನಂದ ಮನವಿ ಮಾಡಿದರು. ಸದಸ್ಯರಾದ ಲಕ್ಷö್ಮಣ ಹಲವು ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಬೊಳ್ಳ್ಳೂರಿನ ಅರಣ್ಯದಂಚಿನಲ್ಲಿ ಆನೆ ಕಂದಕ ನಿರ್ಮಾಣ ಮಾಡಲಾಗಿದ್ದು ಮತ್ತೊಂದು ಭಾಗದಲ್ಲಿ ಆನೆಗಳು ನಾಡಿಗೆ ಬರಲು ದಾರಿ ಮಾಡಿಕೊಡ ಲಾಗಿದೆ ಎಂಬದಾಗಿ ಸದಸ್ಯೆ ಕುಡೆಕ್ಕಲ್ ಶೀಲಾ ಹೇಳಿದರು. ಅಲ್ಲದೆ ಈ ವಿಭಾಗದಲ್ಲಿ ರೈತರ ಬೆಳೆಗಳನ್ನು ಆನೆ ನಾಶಪಡಿಸುತ್ತಿರು ವುದಾಗಿ ಸಭೆಯಲ್ಲಿ ಚರ್ಚಿಸಲಾ ಯಿತು. ಎಲ್ಲವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗು ವುದು ಎಂಬದಾಗಿ ಸಭೆಯಲ್ಲಿದ್ದ ಅಧಿಕಾರಿ ತಿಳಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಯಶೋಧ, ಸರ್ವಸದಸ್ಯರು ಹಾಜರಿದ್ದರು. -ಗಣೇಶ್ ಕುಡೆಕ್ಕಲ್