*ಗೋಣಿಕೊಪ್ಪ, ಸೆ. ೨೪: ಪಾಲಿಬೆಟ್ಟ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪಾಲಿಬೆಟ್ಟ ಲಯನ್ಸ್ ಕ್ಲಬ್ ಆವರಣದಲ್ಲಿ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ ಅವರ ಸಮ್ಮುಖದಲ್ಲಿ ಶಾಲಾ ಮಕ್ಕಳು ಹಾಗೂ ಸಮುದಾಯದಲ್ಲಿ ವಿಜ್ಞಾನ ಮತ್ತು ಪರಿಸರ ಚಟುವಟಿಕೆಗಳಲ್ಲಿ ಜಾಗೃತಿ ಮೂಡಿಸಲು ಎರಡು ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಶಿಕ್ಷಕ ಪ್ರೇಮ್‌ಕುಮಾರ್ ಅವರು ಸನ್ಮಾನಕ್ಕೆ ಬಾಜನರಾದರು.

ಲಯನ್ಸ್ ಪ್ರಾಂತಿಯ ಅಧ್ಯಕ್ಷ ಧನು ಉತ್ತಯ್ಯ, ಕಾರ್ಯದರ್ಶಿ ಡಾ ಜಿ.ಎಂ. ದೇವಗಿರಿ, ಮಾಜಿ ಅಧ್ಯಕ್ಷ ಡಾ ಎ.ಸಿ. ಗಣಪತಿ ಮಾತನಾಡಿದರು. ಅಧ್ಯಕ್ಷ ಕೆ.ಆರ್. ಬಾಬು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ಪ್ರಾಂತೀಯ ಮೊದಲ ಮಹಿಳೆ ಜ್ಯೋತಿ ಉತ್ತಯ್ಯ, ವಲಯ ಅಧ್ಯಕ್ಷ ಶ್ಯಾಮ್ ಅಯ್ಯಪ್ಪ, ಪಂಚಮ್, ಸವಿತ ಬೋಪಣ್ಣ, ಕ್ಲಬ್ ಖಜಾಂಚಿ ಎಂ.ಎನ್. ಅಚ್ಚಯ್ಯ, ಶಿಕ್ಷಕರುಗಳಾದ ಟಿ.ಬಿ. ಮಂಜುನಾಥ್, ಜಿ. ಶ್ರೀಹರ್ಷ, ಎಂ.ಎನ್. ವೆಂಕಟನಾಯಕ್ ಇತರರು ಇದ್ದರು.