ಮಡಿಕೇರಿ, ಸೆ. ೨೫: ಕೊಡವರ ಭಾವನೆ ಜೊತೆಗೆ ಬೆಸೆದಿರುವ ಕೋವಿಯನ್ನು ೨೫-೨೬ನೇ ವಿಧಿಯ ಧಾರ್ಮಿಕ ಸ್ವಾತಂತ್ರö್ಯದಡಿ ಧಾರ್ಮಿಕ ಸಂಸ್ಕಾರ ಹಕ್ಕೆಂದು ಪರಿಗಣಿಸಿ ಕೇಂದ್ರ ಶಾಸನ ಆಕ್ಟ್ ಆಫ್ ಪಾರ್ಲಿಮೆಂಟ್ ರಚಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎನ್.ಸಿ. ಸಂಚಾಲಕ ಎನ್.ಯು.ನಾಚಪ್ಪ, ಕೊಡವರು ಭದ್ರತೆಗಾಗಿ ಕೋವಿಯನ್ನು ಹೊಂದಿಲ್ಲ. ಅದು ಧಾರ್ಮಿಕ ಸಂಕೇತವಾಗಿದೆ. ಇದರ ಮೇಲಿರುವ ಹಕ್ಕು ಶಾಶ್ವತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಸಂಸ್ಕಾರ ಹಕ್ಕೆಂದು ಕೋವಿಯನ್ನು ಪರಿಗಣಿಸಬೇಕೆಂದು ಕೇಂದ್ರ ಸರಕಾರವನ್ನು ನಾಚಪ್ಪ ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಬAಧ ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು. ಸಿಖ್ಖ್ ಸಮುದಾಯಕ್ಕೆ ಕಿರ್ಪಾಣವನ್ನ ಮತ್ತು ಗುರ್ಖಾ ಸಮುದಾಯಕ್ಕೆ ಕೂಕ್ರಿಯನ್ನು ಧಾರ್ಮಿಕ ಸಂಸ್ಕಾರ ಹಕ್ಕು ನೀಡಿದ್ದು, ಕೋವಿಗೂ ಇದೇ ರೀತಿ ನೀಡಬೇಕೆಂದರು.

ಕೋವಿ ಸಂಬAಧ ತಾ.೨೨ ರಂದು ಹೈಕೋರ್ಟ್ ಆದೇಶ ತಾತ್ಕಾಲಿಕವಷ್ಟೆ. ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಿದ್ದೇವೆ. ೧೦ ವರ್ಷಕ್ಕೊಮ್ಮೆ ಪ್ರಕರಣವನ್ನು ಪರಾಮರ್ಶಿಸಲಾಗುತ್ತದೆ. ಶಾಶ್ವತವಾಗಿ ಹಕ್ಕು ಉಳಿಯಬೇಕಾದರೆ ಧಾರ್ಮಿಕ ಸಂಸ್ಕಾರದ ಹಕ್ಕು ಕೇಂದ್ರ ಸರಕಾರ ನೀಡಬೇಕಾಗಿದೆ. ಈ ಸಂಬAಧ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದರು.

ಎಸ್.ಟಿ. ಟ್ಯಾಗ್ ಸಂಬAಧದ ಹೋರಾಟ ಕೊನೆ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇದಕ್ಕೆ ನ್ಯಾಯ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಾ. ೨೯ ರಂದು ಬೆಳಿಗ್ಗೆ ೧೦.೩೦ಕ್ಕೆ ಕರಡದ ಬೇಲಿಯಾಣೆ ಮಂದ್‌ನಲ್ಲಿ ಎಸ್.ಟಿ. ಟ್ಯಾಗ್ ಹಾಗೂ ಬಂದೂಕು ಹಕ್ಕನ್ನು ಧಾರ್ಮಿಕ ಸಂಸ್ಕಾರವೆAದು ಪರಿಗಣಿಸಲು ಆಗ್ರಹಿಸಿ ಮಂದ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಪುಲ್ಲೇರ ಕಾಳಪ್ಪ, ಚಂಬAಡ ಜನತ್ ಕುಮಾರ್, ಕಾಟುಮಣಿಯಂಡ ಉಮೇಶ್, ಪುದಿಯೊಕ್ಕಡ ಕಾಶಿ ಇದ್ದರು.