ಮಡಿಕೇರಿ, ಸೆ. ೨೪: ಕಟ್ಟೆಮಾಡು-ಪರಂಬು ಪೈಸಾರಿಯ ರಸ್ತೆ ಮುಂದಿನ ೧೦ ದಿನದೊಳಗೆ ದುರಸ್ತಿ ಪಡಿಸದಿದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕಾರದೊಂದಿಗೆ ಉಗ್ರ ಹೋರಾಟ ರೂಪಿಸಲಾಗುವುದು ಎ

ಂದು ಗ್ರಾಮಸ್ಥರು ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ನಿವಾಸಿ ಕಳ್ಳೀರ ಅಜಿತ್ ಮಾತನಾಡಿ, ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಸರಿಸುಮಾರು ೧೫೦ ರಿಂದ ೨೦೦ ಮನೆಗಳಿವೆೆ. ಈ ಭಾಗಕ್ಕೆ ಐಕೊಳ, ಮರಗೋಡು, ಕಟ್ಟೆಮಾಡುವಿನಿಂದ ಬರುವ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ೪ ಕಿ.ಮೀ. ಉದ್ದವಿರುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ ರಸ್ತೆಯ ದುಸ್ಥಿತಿಯಿಂದಾಗಿ ಶಾಲಾ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ. ಶಾಲಾ ಬಸ್ ಬರುವ ಸಂದರ್ಭದಲ್ಲಿ ಕೂಲಿಕೆಲಸಕ್ಕೆ ವಾಹನಗಳಲ್ಲಿ ತೆರಳುವ ಕಾರ್ಮಿಕರು ಗ್ರಾಮಕ್ಕೆ ಬಸ್ ಬಂದು ಹೋದ ನಂತರ ಕೆಲಸಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಬಾಡಿಗೆಗೆ ಬರುವ ಆಟೋರಿಕ್ಷಾ ಹಾಗೂ ಬೇರೆ ವಾಹನಗಳ ಚಾಲಕರು ದುಪ್ಪಟ್ಟು ಹಣ ಕೇಳುತ್ತಾರೆ. ಕಾರಣ ಹದಗೆಟ್ಟ ರಸ್ತೆಯಿಂದಾಗಿ ಅನಾರೋಗ್ಯ ಪೀಡಿತ ರೋಗಿಗಳು ಆಸ್ಪತ್ರೆಗೆ ತೆರಳಲು ಕೂಡ ಬಹಳ ಕಷ್ಟಕರವಾಗಿದೆ ಎಂದು ವಿವರಿಸಿದರು.

ಪ್ರವಾಹದ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ರಸ್ತೆ ದುರಸ್ಥಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇದುವರೆಗೂ ಭರವಸೆ ಈಡೇರಿಲ್ಲ. ರಸ್ತೆಯಲ್ಲಿ ದೊಡ್ಡದೊಡ್ಡ ಹೊಂಡಗಳಾಗಿದೆ. ಗ್ರಾಮಸ್ಥರು ಹೋರಾಟ ಹಮ್ಮಿಕೊಳ್ಳುವ ಮೊದಲು ರಸ್ತೆ ದುರಸ್ತಿ ಪಡಿಸಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ನಿವಾಸಿಗಳಾದ ಬಿ.ಎಂ.ವಸAತ್, ಮುಭಿನ್, ಪವನ್ ಕುಮಾರ್, ಯೋಗೇಶ್, ಶಿರಾಜ್ ಇದ್ದರು.