ಸೋಮವಾರಪೇಟೆ,ಸೆ.೨೫: ನಾಡು-ನುಡಿ, ನೆಲ-ಜಲದ ಅಭಿಮಾನ ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಜಾಗೃತವಾಗಬೇಕು. ಯುವ ಜನಾಂಗ ಈ ನೆಲದ ಭವ್ಯ ಸಂಸ್ಕೃತಿಯ ಕೊಂಡಿಯನ್ನು ಕಳಚಿಕೊಳ್ಳಬಾರದು ಎಂದು ಪ.ಪಂ. ಪ್ರಭಾರ ಅಧ್ಯಕ್ಷ ಬಿ. ಸಂಜೀವ ಸುವರ್ಣ ಅಭಿಪ್ರಾಯಿಸಿದರು.
ಸೃಷ್ಟಿಯ ಚಿಗುರು ಕವಿ ಬಳಗ ಹಾಗೂ ದೇವಿ ಪ್ರಜ್ವಲ್ ಅವರ ಸಾರುವಲ್ಲಿ ಹಲವಷ್ಟು ಸಂಘ ಸಂಸ್ಥೆಗಳು ಕಾರ್ಯತತ್ಪರವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಡಿ.ಪಿ. ಲೋಕೇಶ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್, ಮಹಿಳಾ ಸಮಾಜ ಅಧ್ಯಕ್ಷೆ ಸುಮಾ ಸುದೀಪ್ ಅವರುಗಳು ಉಪಸ್ಥಿತರಿದ್ದರು.
ಕೊರೊನಾ ಸಂಕಷ್ಟದಲ್ಲಿ ನಮ್ಮ ಜವಾಬ್ದಾರಿ ಹಾಗೂ ಸಾಹಿತ್ಯದಲ್ಲಿ ಯುವ ಜನತೆಯ ಪಾತ್ರ ವಿಷಯದ ಬಗ್ಗೆ ಕಾರ್ಯಕ್ರಮದ ಪ್ರಾಯೋಜಕರಾದ ದೇವಿ ಪ್ರಜ್ವಲ್ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಸ್ತಿçÃರೋಗ ಮತ್ತು ಪ್ರಸೂತಿ ತಜ್ಞ ಡಾ. ಶಿವಪ್ರಸಾದ್, ಶಸ್ತç ಚಿಕಿತ್ಸಕ ಡಾ. ಸತೀಶ್ಕುಮಾರ್, ಶುಶ್ರೂಷಕಿ ಬಿ.ಎಂ. ಅನಿತಾ, ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್, ಕವಯತ್ರಿ ರಾಣಿ ರವೀಂದ್ರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಸಾಹಿತಿ ನ.ಲ. ವಿಜಯ, ತಾಲೂಕು ಕಸಾಪ ಮಾಜೀ ಅಧ್ಯಕ್ಷ ಹೆಚ್.ಜೆ. ಜವರಪ್ಪ, ಕವಯತ್ರಿ ಅಶ್ವಿನಿ ಕೃಷ್ಣಕಾಂತ್, ನಾವು ಪ್ರತಿಷ್ಠಾನದ ಸಂಚಾಲಕ ಗೌತಮ್ ಕಿರಗಂದೂರು, ಸಮಾಜ ಸೇವಕ ರಾಮದಾಸ್ ಅವರುಗಳನ್ನು ಸನ್ಮಾನಿಸಲಾಯಿತು.
ಕವಿ ಬಳಗದ ವಸಂತಿ ರವೀಂದ್ರ, ರಾಚು ಶ್ಯಾಂ, ಶರ್ಮಿಳಾ ರಮೇಶ್, ದೀಪಿಕಾ ಸುದರ್ಶನ್, ರಾಣಿ ರವೀಂದ್ರ, ಆಶಾ ಪುಟ್ಟರಾಜು, ನಯನ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.