ಕಡಂಗ, ಸೆ. ೨೫: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಪ್ರತಿಭೋತ್ಸವ ಕಾರ್ಯಕ್ರಮದ ಕೊಡಗು ಜಿಲ್ಲಾ ಮಟ್ಟದ ಕಾರ್ಯಾಗಾರವು ನೆಲ್ಲಿಹುದಿಕೇರಿಯ ದಾರುನ್ನಜಾತ್ ಸಂಸ್ಥೆಯಲ್ಲಿ ನಡೆಯಿತು.
ಜಿಲ್ಲೆಯ ಡಿವಿಷನ್, ಸೆಕ್ಟರ್, ಯೂನಿಟ್‌ಗಳಲ್ಲಿ ಪ್ರತಿಭೋತ್ಸವ ನಡೆಯಲಿದ್ದು, ಕಾರ್ಯಕ್ರಮ ಕುರಿತು ರೂಪುರೇಷೆಗಳನ್ನು ತಿಳಿಸುವ ಮತ್ತು ಚರ್ಚಿಸುವ ನಿಟ್ಟಿನಲ್ಲಿ ಕಾರ್ಯಗಾರ ಏರ್ಪಡಿಸಲಾಗಿತ್ತು.
ಜಿಲ್ಲಾಧ್ಯಕ್ಷ ಶಾಫಿ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಅಸ್ಕರ್ ಸಖಾಫಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಕನ್ವಿನರ್ ರಹೀಮ್, ರಾಜ್ಯ ಸಮಿತಿಯಿಂದ ಬಿಡುಗಡೆಗೊಂಡ ಪ್ರತಿಭೋತ್ಸವ ನಿಯಮಾವಳಿಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮಿಂದಗಲಿದ ಮರ್ಹೂಂ ಶೈಖುನಾ ಮಹ್ಮೂದ್ ಉಸ್ತಾದ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಡಿವಿಷನ್, ಸೆಕ್ಟರ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಪ್ರತಿಭೋತ್ಸವ ಸಮಿತಿಯ ಚೇರ್‌ಮೆನ್ ಆಗಿ ಅಸ್ಕರ್ ಸಖಾಫಿ, ಕನ್ವಿನರ್ ಆಗಿ ರಹೀಮ್, ಸದಸ್ಯರುಗಳಾಗಿ ಝುಬೈರ್ ಸಅದಿ, ಜುನೈದ್, ರಫೀಖ್, ಶೌಕತ್, ನಿಝಾಮ್, ಇಬ್ರಾಹಿಂ, ರಶೀದ್, ಶಾಫಿ, ಜಲೀಲ್, ಅಮೀನಿ, ಝಕರೀಯ, ಉನೈಸ್, ಅಜೀಜ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ನಾಯಕರಾದ ಜುನೈದ್ ಅಮ್ಮತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.