*ವೀರಾಜಪೇಟೆ, ಸೆ. ೨೫: ಪೌರ ಕಾರ್ಮಿಕರ ದಿನಾಚರಣೆಯನ್ನು ವೀರಾಜಪೇಟೆಯ ಪ.ಪಂ.ಯ ಪುರಭವನದಲ್ಲಿ ಆಚರಣೆ ಮಾಡಲಾಯಿತು.
ಪೌರಕಾರ್ಮಿಕರಾದ ವೇಲುಮುರುಗ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪೌರ ಕಾರ್ಮಿಕರು ಹಾಗೂ ಪ.ಪಂ. ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್, ಅಧ್ಯಕ್ಷೆ ಸುಶ್ಮಿತ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಪೃಥ್ವಿನಾಥ್, ಮತೀನ್, ರಂಜಿ ಪೂಣಚ್ಚ, ರಜನಿಕಾಂತ್, ರಾಜೇಶ್ ಪದ್ಮನಾಭ, ಮೊಹಮ್ಮದ್ ರಾಫಿ, ಅಗಸ್ಟೀನ್ ಬೆನ್ನಿ ಹಾಗೂ ಪೌರ ಕಾರ್ಮಿಕರ ಕುಟುಂಬದ ಸದಸ್ಯರು ಹಾಜರಿದ್ದರು.