ಕೂಡಿಗೆ, ಸೆ. ೨೫: ಅಂದಗೋವೆ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ವತಿಯಿಂದ ಕಾನ್‌ಬೈಲ್ ಶ್ರೀರಾಮ ಸಾವಯವ ಕೃಷಿ ಸಂಘ ಮತ್ತು ಅಂದಗೋವೆ ಶ್ರೀ ಬಸವೇಶ್ವರ ಸಾವಯವ ಕೃಷಿ ಸಂಘದ ರೈತರಿಗೆ ಸಾವಯವ ಕೃಷಿ ಅಳವಡಿಕೆ ಮತ್ತು ಸಾವಯವ ಪ್ರಮಾಣೀಕರಣ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಪೊನ್ನಂಪೇಟೆಯ ಕೆವಿಕೆ ಕಾಲೇಜಿನ ವಿಷಯ ತಜ್ಞ ಡಾ. ದೇವಯ್ಯ ಸಾವಯವ ಕೃಷಿ ಮತ್ತು ಅಳವಡಿಕೆಯ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಸಾವಯವ ಕಾಳುಮೆಣಸು ಮತ್ತು ಅಡಿಕೆೆ ಬೇಸಾಯದ ಬಗ್ಗೆ ಮಾಹಿತಿಯನ್ನು ಡಾ ವೀರೇಂದ್ರ ಕುಮಾರ್ ತಿಳಿಸಿದರು. ಪ್ರಗತಿಪರ ಸಾವಯವ ಕೃಷಿಕ ಹೆಚ್.ಎಸ್. ರಾಜಶೇಖರ ಸಾವಯವ ಕೃಷಿ ಮತ್ತು ಔಷಧಿ ಸಸ್ಯಗಳ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾಫಿ ಬೋರ್ಡ್ನ ವಿಸ್ತರಣಾಧಿಕಾರಿ ಲಕ್ಷಿö್ಮಕಾಂತ್‌ನವರು ಕಾಫಿ ಬೋರ್ಡ್ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರವಾದ ವಿವರ ನೀಡಿದರು. ಸುಂಟಿಕೂಪ್ಪ ಕೃಷಿ ಅಧಿಕಾರಿ ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನ್‌ಬೈಲ್ ಸಾವಯವ ಸಂಘದ ಅಧ್ಯಕ್ಷ ಚಿಕ್ಕಂಡಾ ಜೋವಾಣಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಬಿ. ನಿರಾಲ್, ಗ್ರಾಮ ಸಮಿತಿ ಅಧ್ಯಕ್ಷ ಕಾವೇರಪ್ಪ, ಶ್ರೀ ರಾಮ ಕೃಷಿ ಸಂಘದ ಅಧ್ಯಕ್ಷ ಸಿ.ಪಿ. ತಿಮ್ಮಯ್ಯ ಹಾಜರಿದ್ದರು. ಐಸಿಎಸ್ ವ್ಯವಸ್ಥಾಪಕ ಕೆ. ಪುಟ್ಟಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಕ್ಷೇತ್ರಾಧಿಕಾರಿ ಲೋಕೇಶ್ ವಂದಿಸಿದರು.