ಮಡಿಕೇರಿ, ಸೆ. ೨೪: ಸಿಜಿಕೆ ರಂಗಪುರಸ್ಕಾರ ಹಾಗೂ ಬಹುರೂಪಿ ಸಾಕ್ಷö್ಯಚಿತ್ರ ಪ್ರದರ್ಶನ ತಾ. ೨೯ ರಂದು ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ. ಮೈಸೂರು ರಂಗಾಯ, ರಂಗಭೂಮಿ ಪ್ರತಿಷ್ಠಾನ ಹಾಗೂ ಕೊಡಗು ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಮಧ್ಯಾಹ್ನ ೨.೩೦ ಗಂಟೆಗೆ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ಆಕಾಶವಾಣಿ ಉದ್ಘೊಷಕ ಸುಬ್ರಾಯ ಸಂಪಾಜೆ ಉದ್ಘಾಟಿಸಲಿದ್ದಾರೆಂದು ಕಾರ್ಯಕ್ರಮ ಸಂಚಾಲಕರಾದ ಬೊಳ್ಳಜಿರ ಬಿ. ಅಯ್ಯಪ್ಪ, ಅಡ್ಡಂಡ ಅನಿತಾ ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯ ಅತಿಥಿಯಾಗಿ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಾಲ್ಗೊಳ್ಳಲಿದ್ದಾರೆ. ಸಿಜಿಕೆ ರಂಗ ಪುರಸ್ಕಾರ ರಂಗಭೂಮಿ ಕಲಾವಿದರಾದ ಮಾದೇಟಿರ ಬೆಳ್ಯಪ್ಪ, ಚೆಪ್ಪುಡಿರ ಉತ್ತಪ್ಪ ಅವರಿಗೆ ಪ್ರದಾನ ಮಾಡಲಾಗುತ್ತದೆ.