ಮಡಿಕೇರಿ, ಸೆ. ೨೫: ರಾಷ್ಟಿçÃಯ ಪೋಷಣ್ ಮಾಸಾಚರಣೆ ಅಂಗವಾಗಿ ೦-೬ ವರ್ಷದ ಮಕ್ಕಳ ಪೋಷಕರು, ಗರ್ಭಿಣಿ, ಬಾಣಂತಿ, ಕಿಶೋರಿ, ಕಿಶೋರ ಮತ್ತು ಮಹಿಳೆಯರಿಗೆ ಅರಿವು ಕಾರ್ಯಕ್ರಮ ನಡೆಸುತ್ತಿದ್ದು, ಮಡಿಕೇರಿ ನಗರದ ಗೌಳಿಬೀದಿಯ ಅಂಗನವಾಡಿಯಲ್ಲಿ ಸಂಬAಧಿಸಿದ ಫಲಾನುಭವಿಗಳಿಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.

ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಎಂ. ಸವಿ ಅವರು ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಿದರು. ನಂತರ ಇವರ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಕೂಡ ನಡೆಯಿತು. ಫಲಾನುಭವಿಗಳು ವಿವಿಧ ರೀತಿಯ ಪೌಷ್ಠಿಕ ಆಹಾರಗಳನ್ನು ತಯಾರಿಸಿ ಅಂಗನವಾಡಿಗೆ ತಂದು ಪ್ರದರ್ಶಿಸಿ ತಮ್ಮ ಅನುಭವ ಹಂಚಿಕೊAಡರು.

ಆಯುಷ್ ಇಲಾಖೆಯ ಡಾ.ಪಲ್ಲವಿ ಅವರು ಆರೋಗ್ಯ, ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರಲ್ಲದೇ ಇಲಾಖೆಯ ಉಚಿತ ಚಿಕಿತ್ಸಾ ಸೌಲಭ್ಯದ ಕುರಿತು ವಿವರಣೆ ನೀಡಿದರು. ಆಯುಷ್ ಪದ್ಧತಿಗಳ ಕೈಪಿಡಿ, ಆರೋಗ್ಯ ಸಲಹಾ ಕೈಪಿಡಿ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆರ್ಯುವೇದ ಸಲಹೆಗಳ ಭಿತ್ತಿ ಪತ್ರಗಳನ್ನು ಉಚಿತವಾಗಿ ಫಲಾನುಭವಿಗಳಿಗೆ ನೀಡಿದರು. ಈ ಸಂದರ್ಭ ಫಲಾನುಭವಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಪಂದನಾ ಮಹಿಳಾ ಸಂಘದ ಉಪಾಧ್ಯಕ್ಷೆ ಕಟ್ರತನ ಲಲಿತಾ ಅಯ್ಯಣ್ಣ, ಅಂಗನವಾಡಿ ಕಾರ್ಯಕರ್ತೆ ಗೀತ ಎನ್.ಎ ಹಾಗೂ ಸ್ಪಂದನಾ ಸಂಘದ ಸದಸ್ಯರು ಹಾಜರಿದ್ದರು.