ಮಡಿಕೇರಿ, ಸೆ. ೨೩: ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ಶಕ್ತಿಧಾಮ ಸಂಸ್ಥೆಯಲ್ಲಿನ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ನೀಡಲಾಯಿತು.
ನಗರದ ಶಕ್ತಿಧಾಮ ಸಂಸ್ಥೆಯಲ್ಲಿ ಆಶ್ರಯ ಪಡೆದ ಹಿರಿಯ ಜೀವಿಗಳಿಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ದೈನಂದಿನ ಅಗತ್ಯತೆಯ ವಸ್ತುಗಳಿರುವ ಕಿಟ್‌ಗಳನ್ನು ನೀಡಲಾಯಿತಲ್ಲದೇ ಮಾಸ್ಕ್ಗಳನ್ನೂ ವಿತರಿಸಲಾಯಿತು. ಇನ್ನರ್ ವೀಲ್ ಅಧ್ಯಕ್ಷೆ ಶಪಾಲಿ ರೈ, ಕಾರ್ಯದರ್ಶಿ ಶಮ್ಮಿ ಪ್ರಭು, ನಿರ್ದೇಶಕರಾದ ರೂಪಾ ಸುಮಂತ್, ಪ್ರಿಯಪ್ರಶಾಂತ್ ಹಾಜರಿದ್ದರು.