ಮಡಿಕೇರಿ, ಸೆ. ೨೩: ಮಡಿಕೇರಿ ತಾಲೂಕು ಕಚೇರಿಯ ಶಿರಸ್ತೇದಾರ್ ಆಗಿ ಪಿ.ಎಲ್. ದೇವರಾಜ್ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಅಧಿಕಾರಿಯಾಗಿದ್ದ ದೇವರಾಜ್‌ರವರಿಗೆ ಸರಕಾರ ಬಡ್ತಿ ನೀಡಿ ತಾಲೂಕು ಕಚೇರಿಗೆ ವರ್ಗಾಯಿಸಿದೆ. ದೇವರಾಜ್ ಅವರು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನಾ ಕಾರ್ಯವನ್ನು ನಿರ್ವಹಿಸಲಿದ್ದಾರೆ.