*ಗೋಣಿಕೊಪ್ಪ, ಸೆ. ೨೩: ವೀರಾಜಪೇಟೆ ತಾಲೂಕಿನಾದ್ಯಂತ ಭಾರತೀಯ ಜನತಾಪಕ್ಷದ ವತಿಯಿಂದ ಬೂತ್ ಮಟ್ಟದ ಅಧ್ಯಕ್ಷರ ಮನೆಗಳಿಗೆ ನಾಮಫಲಕಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗೋಣಿಕೊಪ್ಪದ ೮ ವಾರ್ಡ್ಗಳಲ್ಲಿ ತಾಲೂಕು ಭಾಜಪ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಅವರ ನೇತೃತ್ವದಲ್ಲಿ ನಾಮಫಲಕ ಅಳವಡಿಕೆಯ ಕಾರ್ಯ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮಟೀರ ಕಿಲನ್‌ಗಣಪತಿ, ಜಿಲ್ಲಾ ಖಜಾಂಚಿ ಚೆಪುö್ಪಡೀರ ಮಾಚಯ್ಯ, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ತಾಲೂಕು ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಆರ್.ಎಂ.ಸಿ. ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಸುರೇಶ್‌ರೈ, ನೂರೇರ ರಂಜಿ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಹಕೀಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯರುಗಳಾದ ಗೀತಾ. ಜಿ.ಕೆ., ಸೌಮ್ಯಬಾಲು, ಕೊಣಿಯಂಡ ಬೋಜಮ್ಮ, ನೂರೇರ ರತಿ ಅಚ್ಚಪ್ಪ, ವಿವೇಕ್ ರಾಯ್ಕರ್, ರಾಮಕೃಷ್ಣ, ಪುಷ್ಪಮನೋಜ್, ರಾಮ್‌ದಾಸ್, ಸಾಮಾಜಿಕ ಜಾಲತಾಣದ ಸಂಚಾಲಕ ಸುನೀಲ್ ರೈ, ವಾರ್ಡ್ ಬೂತ್ ಅಧ್ಯಕ್ಷರಾದ ಅನಿಲ್‌ಕುಮಾರ್, ರವಿ, ಖಾದೀರ ಪೊನ್ನಪ್ಪ, ಕಾರ್ತಿಕ್, ವಾಗೀಷ್, ಶ್ರೀನಿವಾಸ್, ಮದನ್‌ಶೆಟ್ಟಿ ಹಾಗೂ ಕಾರ್ಯಕರ್ತೆಯರು ಹಾಜರಿದ್ದರು.